ETV Bharat / state

ಕಡಬ: ಹೃದಯಾಘಾತದಿಂದ ಯೋಧ ಸಾವು; ಇಂದು ಹುಟ್ಟೂರಿಗೆ ಪಾರ್ಥಿವ ಶರೀರ - ಲಿಜೇಶ್ ಕುರಿಯನ್

ತಮಿಳುನಾಡಿನ ಕೊಯಂಬತ್ತೂರು ಮದ್ರಾಸ್ ರಿಜಿಮೆಂಟ್‌ನಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದ ಲಿಜೇಶ್ ಕುರಿಯನ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

solider dies of heart attack
ಯೋಧ ಶ್ರೀ ಲಿಜೇಶ್
author img

By

Published : Mar 28, 2023, 8:53 AM IST

ಕಡಬ:ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಯೋಧ ಲಿಜೇಶ್ ಕುರಿಯನ್ ಮಾ.26 ರಂದು ಕೊಯಂಬತ್ತೂರು ಮದ್ರಾಸ್ ರಿಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇವರು ಕುಟ್ರುಪ್ಪಾಡಿ ತರಪ್ಪೇಳ್‌ ನಿವಾಸಿ ಜೋನಿ ಎಂಬವರ ಮಗ. ಲಿಜೇಶ್ ತಮ್ಮ ಪತ್ನಿ ಜೋಮಿತಾ, ಒಂದು ವರ್ಷದ ಮಗು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

"ಲಿಜೇಶ್ ಪಾರ್ಥಿವ ಶರೀರ ಇಂದು ಬೆಳಗ್ಗೆ ಕಡಬ ತಲುಪಲಿದೆ. 11:30ಕ್ಕೆ ಕುಟ್ರುಪ್ಪಾಡಿ ಸಂತ ಮೇರಿಸ್ ಕ್ಯಾಥೋಲಿಕ್ ಫೋರೋನಾ ದೇವಾಲಯದಲ್ಲಿ ಅಂತ್ಯಸಂಸ್ಕಾರ ವಿಧಿವಿಧಾನ ನೆರವೇರಲಿದೆ" ಎಂದು ಚರ್ಚ್ ಧರ್ಮಗುರು ಜೋಸ್ ಆಯಂಕುಡಿ ತಿಳಿಸಿದ್ದಾರೆ.

ಅನಾರೋಗ್ಯದಿಂದ ಯೋಧ ಸಾವು: ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯೋಧರೊಬ್ಬರು ಅನಾರೋಗ್ಯದಿಂದ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಿಧನರಾಗಿದ್ದರು. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸುಂಕೇಶ್ವರ ಗ್ರಾಮದ ರಾಮಲಿಂಗ ನಾಯಕ(48) ಮೃತರು. ಕಳೆದ 20 ವರ್ಷಗಳ ಹಿಂದೆ ಭಾರತೀಯ ಸೇನೆ ಸೇರಿದ್ದ ಇವರು ದೇಶದ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: ಅನಾರೋಗ್ಯದಿಂದ ರಾಯಚೂರಿನ ಯೋಧ ಸಾವು.. ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.