ETV Bharat / state

ಗ್ರಾಪಂ​ಗೆ ವಿದ್ಯುತ್ ಬಿಲ್ ಹೊರೆ ತಪ್ಪಿಸಿದ ಸೋಲಾರ್​.. ಸೌರಶಕ್ತಿಯಿಂದಲೇ 88 ಮನೆಗಳಿಗೆ ನೀರು ಪೂರೈಕೆ - ಈಟಿವಿ ಭಾರತ ಕನ್ನಡ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ಪಂಚಾಯತ್​ನಲ್ಲಿ ಸೌರಶಕ್ತಿ ಬಳಸಿ 88 ಮನೆಗಳಿಗೆ ಪಂಪ್​ನಿಂದ ನೀರು ಸರಬರಾಜು ಮಾಡುವ ಮೂಲಕ ಮಾದರಿ ಕೆಲಸ ಮಾಡಿದೆ. ಈ ಮೂಲಕ ಪಂಚಾಯತ್​ಗೆ ವಿದ್ಯುತ್​ ಬಿಲ್​ ನ ಹೊರೆ ತಪ್ಪಿಸಿದೆ.

solar-saved-gram-panchayat-from-burden-of-electricity-bill-in-puttur
ಗ್ರಾಮ ಪಂಚಾಯತ್​​ಗೆ ವಿದ್ಯುತ್ ಬಿಲ್ ಹೊರೆ ತಪ್ಪಿಸಿದ ಸೋಲಾರ್​..ಸೌರಶಕ್ತಿಯಿಂದಲೇ 88 ಮನೆಗಳಿಗೆ ನೀರು ಪೂರೈಕೆ
author img

By

Published : Oct 12, 2022, 9:23 PM IST

Updated : Oct 13, 2022, 6:51 PM IST

ಪುತ್ತೂರು (ದಕ್ಷಿಣಕನ್ನಡ) : ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಬಿಲ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಳಿಕೆಯಾಗುವ ಲಕ್ಷಣವೇ ಗೋಚರಿಸುತ್ತಿಲ್ಲ. ಇದರಿಂದಾಗಿ ಇತರ ಖರ್ಚುಗಳ ಜೊತೆಗೆ ವಿದ್ಯುತ್ತಿಗೂ ಹೆಚ್ಚಿನ ಹಣವನ್ನು ವ್ಯಯಿಸಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ವಿದ್ಯುಚ್ಛಕ್ತಿಗೆ ಪರ್ಯಾಯವಾಗಿ ಸೋಲಾರ್ ಸೇರಿದಂತೆ ಪರ್ಯಾಯ ವ್ಯವಸ್ಥೆಗಳನ್ನು ಬಳಸಿಕೊಳ್ಳಬೇಕಾದ ಅನಿವಾರ್ಯತೆಯೂ ಎದುರಾಗಿದೆ.

ಸೋಲಾರ್​ ಶಕ್ತಿಯನ್ನು ಬಳಸಿ ನೀರು ಸರಬರಾಜು : ಗ್ರಾಮದ ಜನತೆಗೆ ನಿತ್ಯ ನೀರು ಸರಬರಾಜು ಮಾಡಲು ತಿಂಗಳಿಗೆ ಸಾವಿರಾರು ರೂಪಾಯಿಯನ್ನು ವಿದ್ಯುತ್ ಗಾಗಿ ಖರ್ಚು ಮಾಡುತ್ತಿದ್ದ ದಕ್ಷಿಣಕನ್ನಡ ಜಿಲ್ಲೆಯ ಗ್ರಾಮ ಪಂಚಾಯಿತಿಯೊಂದು ಇಂದು ಯಾವುದೇ ಖರ್ಚಿಲ್ಲದೆ ಗ್ರಾಮದ ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುತ್ತಿದೆ.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮಪಂಚಾಯತ್ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಹಾಗೂ ರಾಜ್ಯದಲ್ಲೂ ಅಪರೂಪದ ಪ್ರಯತ್ನವನ್ನು ಮಾಡುವ ಮೂಲಕ ಗುರುತಿಸಿಕೊಂಡಿದೆ. ಪಂಚಾಯತ್ ನ ಮೂರನೇ ವಾರ್ಡನ ಪ್ರತೀ ಮನೆಗಳಿಗೆ ನೀರು ಸಂಪರ್ಕ ಕಲ್ಪಿಸುವ ಉದ್ಧೇಶದಿಂದ ಕೊಲ್ಯ ಎನ್ನುವಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿ 5 HP ಸಾಮರ್ಥ್ಯದ ನೀರಿನ ಪಂಪ್ ಅಳವಡಿಸಲಾಗಿದೆ. ಈ ಪಂಪ್​ ಸೋಲಾರ್ ನಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ.

ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ಪಂಚಾಯತ್​ : ಈ ವಾರ್ಡ್ ನಲ್ಲಿರುವ ಒಟ್ಟು 88 ಮನೆಗಳಿಗೆ ಪಂಚಾಯತ್​ ನಿತ್ಯ ನೀರು ಪೂರೈಸುತ್ತದೆ. ದಿನವೂ ವಿದ್ಯುಚ್ಛಕ್ತಿ ಬಳಸಿಕೊಂಡು ಪಂಚಾಯತ್ ಎಲ್ಲ ಮನೆಗಳಿಗೆ ನೀರನ್ನು ಪೂರೈಕೆ ಮಾಡುತ್ತಿತ್ತು. ಈ ವ್ಯವಸ್ಥೆಗಾಗಿ ಪಂಚಾಯತ್ ಕೇವಲ ಒಂದು ವಾರ್ಡ್ ಗೆ ಪ್ರತೀ ತಿಂಗಳೂ ಸುಮಾರು 23 ಸಾವಿರ ರೂಪಾಯಿಗಳ ವಿದ್ಯುತ್ ಬಿಲ್ ಕಟ್ಟುತ್ತಿತ್ತು. ವಿದ್ಯುತ್ ಗೆ ಪರ್ಯಾಯವಾಗಿ ಸೋಲಾರ್ ಶಕ್ತಿಯನ್ನು ಬಳಸುವಂತೆ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಕಳೆದ ಎರಡು ವರ್ಷದ ಹಿಂದೆ ಕೊಲ್ಯ ವಾರ್ಡ್ ನ ನೀರಿನ ಪಂಪ್ ಅನ್ನು ಸೋಲಾರ್ ಶಕ್ತಿ ಬಳಕೆ ಮಾಡಿ ನೀರು ಸರಬರಾಜು ಮಾಡಲು ನಿರ್ಧರಿಸಲಾಗಿತ್ತು.

ವಿದ್ಯುತ್ ಬಿಲ್ ಹೊರೆ ತಪ್ಪಿಸಿದ ಸೋಲಾರ್​

3.90 ಲಕ್ಷ ವೆಚ್ಚದಲ್ಲಿ ಸೋಲಾರ್​ ಪ್ಯಾನಲ್​ ಅಳವಡಿಕೆ : ಈ ಸಂಬಂಧ ಕಾರ್ಯಪ್ರವೃತ್ತವಾದ ಪಂಚಾಯತ್ ಸುಮಾರು 3.90 ಲಕ್ಷ ರೂಪಾಯಿ ವೆಚ್ಚದಲ್ಲಿ ಸೋಲಾರ್ ಪ್ಯಾನಲ್ ಗಳನ್ನು ಅಳವಡಿಸಿ, ಈ ಮೂಲಕ ನೀರಿನ ಸರಬರಾಜು ಮಾಡಲು ಆರಂಭಿಸಿದೆ. ಬೇಸಿಗೆ ಸೇರಿದಂತೆ ಮಳೆಗಾಲದಲ್ಲಿ ಎರಡು ಗಂಟೆ ಬಿಸಿಲು ಬಿದ್ದರೂ ಪಂಪ್​ನ್ನು ಚಾಲನೆ ಮಾಡುವ ಮೂಲಕ ಮಾಡಿ ನೀರು ಸರಬರಾಜು ಮಾಡಲಾಗುತ್ತದೆ. ಇದರಿಂದಾಗಿ ತಿಂಗಳಿಗೆ 23 ಸಾವಿರಕ್ಕೂ ಮಿಕ್ಕಿ ಬರುತ್ತಿದ್ದ ವಿದ್ಯುತ್ ಬಿಲ್ ಶೂನ್ಯವಾಗಿದೆ.

ಮೊದಲು 23 ಸಾವಿರ ವಿದ್ಯುತ್​ ಬಿಲ್​ ಈಗ ವಿದ್ಯುಲ್​ ಬಿಲ್​ ಶೂನ್ಯ : ಸೋಲಾರ್ ಜೊತೆಗೆ ವಿದ್ಯುತ್ ಸಂಪರ್ಕವನ್ನೂ ಪಂಪ್ ಗೆ ಕಲ್ಪಿಸಲಾಗಿದ್ದು, ಅನಿವಾರ್ಯ ಸಂದರ್ಭದಲ್ಲಿ ಮಾತ್ರ ವಿದ್ಯುತ್​ ಬಳಸಲಾಗುತ್ತಿದೆ. ಆರ್ಯಾಪು ಗ್ರಾಮಪಂಚಾಯತ್ ಒಂದರಲ್ಲೇ ಸುಮಾರು 35 ಕಡೆಗಳಲ್ಲಿ ಬೋರ್ ವೆಲ್ ಗಳ ಮೂಲಕ ನೀರನ್ನು ಮೇಲಕ್ಕೆತ್ತಿ ಸಾವಿರಾರು ಮನೆಗಳಿಗೆ ನೀರು ಪೂರೈಸಲಾಗುತ್ತಿದೆ.

ವಿದ್ಯುತ್ ಗಾಗಿಯೇ ತಿಂಗಳಿಗೆ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ 35 ಪಂಪ್ ಗಳಿಗೂ ಸೋಲಾರ್ ಶಕ್ತಿಯನ್ನು ಅಳವಡಿಸುವ ತೀರ್ಮಾನಕ್ಕೂ ಪಂಚಾಯತ್ ಬಂದಿದೆ. ಇದೇ ರೀತಿಯ ವ್ಯವಸ್ಥೆ ಎಲ್ಲ ಪಂಚಾಯತ್ ನಲ್ಲೂ ಆರಂಭಗೊಂಡಲ್ಲಿ ವಿದ್ಯುತ್ ಮೇಲೆ ಅವಲಂಬನೆ ಕಡಿಮೆಯಾಗಲಿದೆ. ಎಲ್ಲ ಪಂಚಾಯತ್ ಗಳು ವಿದ್ಯುತ್ ನಲ್ಲಿ ಸ್ವಾವಲಂಬಿಯಾಗಲಿದೆ ಎಂದು ವಾರ್ಡ್ ಸದಸ್ಯ ಪವಿತ್ರ ರೈ ಹೇಳುತ್ತಾರೆ.

ಕೊಲ್ಯ ವಾರ್ಡ್ ನ 88 ಮನೆಗಳಿಗೆ ನೀರು ಸರಬರಾಜು : ಕೊಲ್ಯ ವಾರ್ಡ್ ನ ಎಲ್ಲಾ 88 ಮನೆಗಳಿಗೆ ಪ್ರತಿದಿನವೂ ನೀರು ಸರಬರಾಜು ಮಾಡುವ ಅಗತ್ಯವಿದ್ದು, ಯಾವ ಮನೆಯಲ್ಲೂ ಪರ್ಯಾಯ ನೀರಿನ ವ್ಯವಸ್ಥೆಗಳಿಲ್ಲ. ಈ ಹಿಂದೆ ನೀರಿನ ಪಂಪ್​​​​ಗೆ ವಿದ್ಯುತ್ ಬಳಸುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ನ ಕಣ್ಣಮುಚ್ಚಾಲೆಯಿಂದಾಗಿ ಸರಿಯಾಗಿ ನೀರು ಪೂರೈಕೆ ಮಾಡಲೂ ಸಾಧ್ಯವಾಗುತ್ತಿರಲಿಲ್ಲ.

ಪಂಪ್ ರನ್ ಮಾಡಲು ವಿದ್ಯುತ್ ಗಾಗಿ ಕಾಯುವ ಸ್ಥಿತಿಯಿತ್ತು. ಸೋಲಾರ್ ಶಕ್ತಿ ಅಳವಡಿಸಿದ ಬಳಿಕ ಈ ಸಮಸ್ಯೆ ಸಂಪೂರ್ಣ ಬಗೆಹರಿದಿದೆ. ವಾರ್ಡ್ ನ ಮನೆಗಳಿಗೆ ನೀರಿನ ಸಂಪರ್ಕಕ್ಕಾಗಿ ಎರಡು ಟ್ಯಾಂಕ್ ಗಳನ್ನೂ ಅಳವಡಿಸಲಾಗಿದ್ದು, ಒಟ್ಟು 60 ಸಾವಿರ ಲೀಟರ್ ನೀರನ್ನು ನಿತ್ಯ ಸೋಲಾರ್ ಶಕ್ತಿಯ ಮೂಲಕವೇ ಸರಬರಾಜು ಮಾಡಲಾಗುತ್ತದೆ. ಸೋಲಾರ್ ಶಕ್ತಿಯನ್ನು ಅಳವಡಿಸಿ ಎರಡು ವರ್ಷಗಳು ಕಳೆದಿದ್ದು, ಯಾವುದೇ ರೀತಿಯ ನಿರ್ವಹಣೆಯ ಕೆಲಸವೂ ಇದುವರೆಗೂ ಬಂದಿಲ್ಲ ಎಂದು ಪಂಪ್​ ಆಪರೇಟರ್ ಸೀನಪ್ಪ ರೈ ಹೇಳುತ್ತಾರೆ.

ಸಾರ್ವಜನಿಕರ ಉಪಯೋಗಕ್ಕಾಗಿ ಗ್ರಾಮಪಂಚಾಯತ್​ಗಳು ತಿಂಗಳಿಗೆ ಕೋಟಿಗಟ್ಟಲೆ ಹಣವನ್ನು ಕೇವಲ ವಿದ್ಯುತ್ ಬಿಲ್ ಪಾವತಿಗೆಂದೇ ಮೀಸಲಿಡುತ್ತಿದ್ದು, ಎಲ್ಲ ಪಂಚಾಯತ್ ಗಳೂ ಆರ್ಯಾಪು ಪಂಚಾಯತ್ ನ ಈ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ವಿದ್ಯುತ್ ಸ್ವಾವಲಂಬಿತನದ ಜೊತೆಗೆ ಹಣ ಉಳಿತಾಯವನ್ನೂ ಮಾಡಬಹುದಾಗಿದೆ.

ಇದನ್ನೂ ಓದಿ : ಚಾಮರಾಜನಗರ: ಎಸ್​ಪಿ ಡಿವೈಎಸ್​ಪಿ ಕಚೇರಿ ಮುಂದೆ ಬೈಕ್ ವೀಲಿಂಗ್ - ವಿಡಿಯೋ ವೈರಲ್​

Last Updated : Oct 13, 2022, 6:51 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.