ಮಂಗಳೂರು: ವಿಶ್ವವನ್ನೇ ತಲ್ಲಣಗೊಳಿಸಿದ ಕೊರೊನಾ ತಡೆಯಲು ಹಲವಾರು ಮಂದಿ ನಾನಾ ರೀತಿಯ ಸಲಹೆ ನೀಡುತ್ತಾರೆ. ಕೊರೊನಾ ಹರಡಲು ಸಾಮಾಜಿಕ ಅಂತರ ಕಾಪಾಡದಿರುವುದು ಕೂಡ ಒಂದು ಕಾರಣ. ಈ ಸಾಮಾಜಿಕ ಅಂತರ ಕಾಪಾಡಲು ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಗಿಲ್ಬರ್ಟ್ ಡಿಸೋಜಾ ವಿಶಿಷ್ಟ ಸಲಹೆಯೊಂದನ್ನು ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರು ಸಾಮಾಜಿಕ ಅಂತರ ಕಾಪಾಡಲು ಮೊಬೈಲ್ ಸಂಖ್ಯೆಯನ್ನು ಇಟ್ಟುಕೊಂಡು ಜಾರಿ ಮಾಡಬಹುದು. ಪ್ರತಿಯೊಬ್ಬರಲ್ಲಿ ಇರುವ ಮೊಬೈಲ್ ಸಂಖ್ಯೆಯ ಕೊನೆಯ ಸಂಖ್ಯೆ ಇಟ್ಟುಕೊಂಡು ಅವರು ಮನೆಯಿಂದ ಹೊರ ಬಂದು ಖರೀದಿಗೆ ಅವಕಾಶ ನೀಡಬೇಕು ಎಂಬ ಸಲಹೆ ನೀಡಿದ್ದಾರೆ.
ಮೊಬೈಲ್ನ ಕೊನೆಯ ನಂಬರ್ 1 ಆಗಿದ್ದವರು ಬೆಳಗ್ಗೆ 8-9 ಗಂಟೆ, 2 ಆಗಿದ್ದವರು 9-10, 3 ಆಗಿದ್ದವರು 10-11, 4 ಆಗಿದ್ದವರು 11-12, 5 ಆಗಿದ್ದವರು 12-1, 6 ಆಗಿದ್ದವರು 1-2, 7 ಆಗಿದ್ದವರು 2-3, 8 ಆಗಿದ್ದವರು 3-4, 9 ಆಗಿದ್ದವರು 4-5,0 ಆಗಿದ್ದವರು 5-6 ಗಂಟೆಯ ಮಧ್ಯೆ ಹೊರಗೆ ಹೋಗಿ ಸಾಮಗ್ರಿ ಖರೀದಿಗೆ ಅವಕಾಶ ಮಾಡಬೇಕು. ಈ ರೀತಿ ಮಾಡಿದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೊನಾ ನಿಯಂತ್ರಣ ಮಾಡಲು ಸಾಧ್ಯವಿದೆ ಎಂದು ಅವರು ತಿಳಿಸಿದ್ದಾರೆ.