ETV Bharat / state

ಪರಿಹಾರ ಪಡೆಯಲು ಇರುವ ನಿಯಮ ಸಡಿಲಿಕೆ ಮಾಡಿ: ಸರ್ಕಾರಕ್ಕೆ ಎಸ್‌ಡಿಟಿಯು ಮನವಿ - ಎಸ್‌ಡಿಟಿಯು ಮನವಿ

ಲಾಕ್‌ಡೌನ್​ನಿಂದ ಸಂಕಷ್ಟಕ್ಕೆ ಒಳಗಾದ ಅಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರ ರೂ.5 ಸಾವಿರ ಘೋಷಣೆ ಮಾಡಿದೆ. ಆದರೆ, ಸರ್ಕಾರ ಘೋಷಣೆ ಮಾಡಿದ ಹಣವನ್ನು ಪಡೆದುಕೊಳ್ಳಲು ಸ್ಪಷ್ಟವಾದ ಮಾಹಿತಿ ಸರ್ಕಾರ ನೀಡಿಲ್ಲ ಎಂದು ಪುತ್ತೂರು ಎಸ್‌ಡಿಟಿಯು ತಾಲೂಕು ಅಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ಆರೋಪಿಸಿದರು.

Social Democratic Trade Union  appeal
ಸೋಷಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (ಎಸ್‌ಡಿಟಿಯು) ಆಗ್ರಹಿಸಿದೆ.
author img

By

Published : May 21, 2020, 10:55 PM IST

ಪುತ್ತೂರು: ಕೊರೊನಾ ಲಾಕ್‌ಡೌನ್​ನಿಂದ ಸಂಕಷ್ಟಕ್ಕೆ ಒಳಗಾದ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರ 5 ಸಾವಿರ ರೂ ಘೋಷಣೆ ಮಾಡಿ 18 ದಿನ ಕಳೆದರೂ ಇನ್ನೂ ಚಾಲಕರ ಕೈಗೆ ಹಣ ಸಿಗದೆ ಕಂಗಾಲಾಗಿದ್ದಾರೆ. ಹಾಗಾಗಿ ಈ ಹಣ ತಕ್ಷಣ ಅವರಿಗೆ ಸಿಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸೋಷಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (ಎಸ್‌ಡಿಟಿಯು) ಆಗ್ರಹಿಸಿದೆ.

ಸೋಷಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (ಎಸ್‌ಡಿಟಿಯು) ಆಗ್ರಹಿಸಿದೆ.
ಪುತ್ತೂರು ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ನೀಡಿ ಮಾತನಾಡಿದ ಎಸ್‌ಡಿಟಿಯು ತಾಲೂಕು ಅಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ಅವರು, ಆಟೋ ಚಾಲಕರು ಹಾಗೂ ಟ್ಯಾಕ್ಸಿ ಚಾಲಕರು ಉದ್ಯೋಗ ಇಲ್ಲದೆ ಸಮಸ್ಯೆಗೆ ಒಳಗಾಗಿದ್ದಾರೆ. ಅಲ್ಪ ಸ್ವಲ್ಪ ದುಡಿಮೆಗಾಗಿ ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ದಿನವೊಂದಕ್ಕೆ 50 ರೂ ಆದಾಯವೂ ಅವರಿಗೆ ಸಿಗುತ್ತಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಸಮಸ್ಯೆಯಾಗುತ್ತಿದೆ. ಸರ್ಕಾರ ಘೋಷಣೆ ಮಾಡಿದ ಹಣವನ್ನು ಪಡೆದುಕೊಳ್ಳಲು ಕಷ್ಟ ಪಡುತ್ತಿರುವ ಈ ಚಾಲಕ ವರ್ಗಕ್ಕೆ ಹಣ ಪಡೆಯಲು ಸ್ಪಷ್ಟವಾದ ಮಾಹಿತಿ ಸರ್ಕಾರ ನೀಡಿಲ್ಲ. ಆಟೋ ಚಾಲಕರ ಬದುಕಿನಲ್ಲಿ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಅವರು ಆರೋಪಿಸಿದರು.

ಚಾಲಕರ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಳ್ಳುವ ಕೆಲ ಮಧ್ಯವರ್ತಿಗಳು ಅರ್ಜಿ ನಮೂನೆ ತುಂಬಿಸುವ ನೆಪದಲ್ಲಿ ಹಣ ಕೀಳುವ ಕೆಲಸ ನಡೆಯುತ್ತಿದೆ. ಅಟೋ ಚಾಲಕರಿಗೆ ಬ್ಯಾಡ್ಜ್ ಕಡ್ಡಾಯ ಗೊಳಿಸಿರುವ ಹಿನ್ನೆಲೆಯಲ್ಲಿ ಎಷ್ಟೋ ಮಂದಿ ಚಾಲಕರು ಈ ಸೌಲಭ್ಯದಿಂದ ವಂಚಿತರಾಗುವಂತಾಗಿದೆ. ಹೊಟ್ಟೆ ಪಾಡಿಗೆ ಆಟೋ-ಟ್ಯಾಕ್ಸಿ ಓಡಿಸುತ್ತಿರುವ ಬಡ ಅನಕ್ಷರಸ್ಥ ಚಾಲಕರ ಬದುಕು ಬೀದಿ ಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಸರ್ಕಾರ ಈ ಬ್ಯಾಡ್ಜ್ ಕಡ್ಡಾಯವನ್ನು ಸಡಿಲಿಕೆ ಮಾಡಬೇಕು.

ತಕ್ಷಣ ಘೋಷಣೆ ಮಾಡಿದ ಹಣ ಚಾಲಕರ ಕೈಗೆ ಸಿಗುವಂತಾಗಬೇಕು. ಕೊರೊನಾ ಲಾಕ್‌ಡೌನ್‌ನಿಂದ ಕಂಗೆಟ್ಟ ಚಾಲಕರ ಬದುಕಿಗೆ ಚೈತನ್ಯ ನೀಡಲು ಸರ್ಕಾರ ನಿಯಮಗಳನ್ನು ಸಡಿಲಿಕೆ ಮಾಡಬೇಕು ಎಂದು ಅಬ್ದುಲ್ ಹಮೀದ್ ಸಾಲ್ಮರ ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.