ETV Bharat / state

ಶ್ರದ್ಧಾ, ಭಕ್ತಿಯಿಂದ ಸರಳವಾಗಿ ನವರಾತ್ರಿ ಆಚರಿಸಬೇಕು: ಡಾ. ಡಿ. ವೀರೇಂದ್ರ ಹೆಗ್ಗಡೆ - Daramasthala

ಕೊರೊನಾ ಹಿನ್ನೆಲೆ ಎಲ್ಲರೂ ಈ ಬಾರಿ ತಮ್ಮ ಮನೆಗಳಲ್ಲಿಯೇ ಸರಳವಾಗಿ ನವರಾತ್ರಿ ಪೂಜೆ ಮತ್ತು ಆಚರಣೆಗಳನ್ನು ನೆರವೇರಿಸಿ ಸಾರ್ವಜನಿಕವಾಗಿ ಜನರು ಒಟ್ಟು ಸೇರುವುದನ್ನು ತಡೆಗಟ್ಟಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸಲಹೆ ನೀಡಿದ್ದಾರೆ.

Veerendra Heggade
ವೀರೇಂದ್ರ ಹೆಗ್ಗಡೆ
author img

By

Published : Oct 16, 2020, 7:36 PM IST

ಬೆಳ್ತಂಗಡಿ: ನವರಾತ್ರಿ ಉತ್ಸವದ ಮೂಲಕ ಕೊರೊನಾ ಅಸುರನನ್ನು ದೂರ ಇಡಬೇಕಾದರೆ ಈಗಾಗಲೇ ಸರ್ಕಾರ ಸೂಚಿಸಿದ ಮಾರ್ಗಸೂಚಿ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಆದುದರಿಂದ ಎಲ್ಲರೂ ಈ ಬಾರಿ ತಮ್ಮ ಮನೆಗಳಲ್ಲಿಯೇ ಸರಳವಾಗಿ ನವರಾತ್ರಿ ಪೂಜೆ ಮತ್ತು ಆಚರಣೆಗಳನ್ನು ನೆರವೇರಿಸಿ ಸಾರ್ವಜನಿಕವಾಗಿ ಜನರು ಒಟ್ಟು ಸೇರುವುದನ್ನು ತಡೆಗಟ್ಟಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಸಲಹೆ ನೀಡಿದ್ದಾರೆ.

ಕಳೆದ ಮಾರ್ಚ್ ತಿಂಗಳಿನಿಂದ ಕೊರೊನಾ ವ್ಯಾಧಿ ಜನ ಜೀವನದಲ್ಲಿ ಹೊಕ್ಕಿ ಸಾಕಷ್ಟು ಸಮಸ್ಯೆಗಳನ್ನು ಮತ್ತು ವ್ಯತ್ಯಾಸಗಳನ್ನು ಉಂಟುಮಾಡಿದೆ. ಅಕ್ಟೋಬರ್ ಮಧ್ಯದವರೆಗೂ ರೋಗ ಹೇಗೆ ಹರಡುತ್ತದೆ? ಮತ್ತು ಅದಕ್ಕೆ ಸೂಕ್ತ ಔಷಧಿ ಏನು? ಇದು ಹೇಗೆ ಕೊನೆಗೊಳ್ಳುತ್ತದೆ? ಎಂಬ ಬಗ್ಗೆ ಖಚಿತ ಪರಿಹಾರವಿಲ್ಲ. ಎಲ್ಲವೂ ಯಕ್ಷ ಪ್ರಶ್ನೆಯಾಗಿದೆ. ಆದುದರಿಂದ ಹಬ್ಬಗಳ ಮೂಲಕ ಭಕ್ತಿ, ಶ್ರದ್ಧೆ ಮತ್ತು ಆಚರಣೆಗಳು ಇರಬೇಕಾಗುತ್ತದೆ. ಎಲ್ಲರೂ ಸರಳವಾಗಿ ನವರಾತ್ರಿ ಆಚರಿಸೋಣ ಎಂದು ಕರೆ ನೀಡಿದ್ದಾರೆ.

ದುಷ್ಟ ಶಕ್ತಿಗಳ ನಿವಾರಣೆಯೇ ನವರಾತ್ರಿ ಉತ್ಸವದ ಉದ್ದೇಶವಾದುದರಿಂದ, ಕೊರೊನಾ ರೋಗ ಆದಷ್ಟು ಶೀಘ್ರ ಸಂಪೂರ್ಣ ನಿರ್ಮೂಲನೆಯಾಗಿ ಎಲ್ಲರೂ ಆರೋಗ್ಯ ಭಾಗ್ಯದೊಂದಿಗೆ ಶಾಂತಿ ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಹೆಗ್ಗಡೆ ಹಾರೈಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.