ETV Bharat / state

ಹೆಲಿಕಾಪ್ಟರ್ ಸೇವೆ ಬಗ್ಗೆ ಗೂಗಲ್​​ನಲ್ಲಿ ಸರ್ಚ್: 38,060 ರೂ.ಕಳೆದುಕೊಂಡ ಟೆಕ್ಕಿ - ವ್ಯಕ್ತಿಯಿಂದ ಟೆಕ್ಕಿಗೆ ಮೋಸ

ಟೆಕ್ಕಿಯೊಬ್ಬರು ವೈಷ್ಣೋದೇವಿ ಮಂದಿರಕ್ಕೆ ಹೋಗಲು ಹೆಲಿಕಾಪ್ಟರ್​ ಇದೆಯೇ ಎಂದು ಗೂಗಲ್​ನಲ್ಲಿ ಸರ್ಚ್​ ಮಾಡಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬ ಬುಕ್ಕಿಂಗ್ ಮಾಡುವ ನೆಪದಲ್ಲಿ 38,060 ರೂ.ಪಡೆದು ಅವರನ್ನು ವಂಚಿಸಿದ್ದಾನೆ. ಈ ಸಂಬಂಧ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸೈಬರ್ ಠಾಣೆಯಲ್ಲಿ ದೂರು
ಸೈಬರ್ ಠಾಣೆಯಲ್ಲಿ ದೂರು
author img

By

Published : Oct 7, 2022, 12:01 PM IST

ಮಂಗಳೂರು: ಕಾಶ್ಮೀರದ ವೈಷ್ಣೋದೇವಿ ಮಂದಿರಕ್ಕೆ ತೆರಳಲು ಹೆಲಿಕಾಪ್ಟರ್ ಬುಕ್ಕಿಂಗ್ ಮಾಡುವ ನೆಪದಲ್ಲಿ ಬೆಂಗಳೂರು ಮೂಲದ ಟೆಕ್ಕಿಯೊಬ್ಬರಿಗೆ, ಮಂಗಳೂರಿನಲ್ಲಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ್ದ ಟೆಕ್ಕಿಯೊಬ್ಬರು ನಗರ ಸುತ್ತಾಡಿದ ಬಳಿಕ ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳಲು ಹೆಲಿಕಾಪ್ಟರ್ ಇರುವ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಬುಕ್ಕಿಂಗ್ ಮಾಡುವ ನೆಪದಲ್ಲಿ 38,060 ರೂ.ಪಡೆದು ವಂಚಿಸಿದ್ದಾನೆ.

ಮಾ. 3 ರಂದು ಘಟನೆ ನಡೆದಿದ್ದು, ಮಂಗಳೂರಿನಲ್ಲಿ ಸುತ್ತಾಡಿದ ಬಳಿಕ ಜಮ್ಮು ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳಲು ನೇರವಾದ ವಿಮಾನ ಸೌಲಭ್ಯ ಇದೆಯೇ ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ. ಈ ವೇಳೆ, ವಿಮಾನ ಇಲ್ಲದಿರುವುದು ತಿಳಿದು ಬಂದಿದೆ. ಬಳಿಕ ಖಾಸಗಿ ಹೆಲಿಕಾಪ್ಟರ್ ಇದೆಯೇ ಎಂದು ಗೂಗಲ್​ನಲ್ಲಿ ಸರ್ಚ್ ಮಾಡಿದಾಗ ವೆಬ್‌ಸೈಟ್ ಒಂದು ಸಿಕ್ಕಿದೆ. ಅದನ್ನು ಸಂಪರ್ಕಿಸಿದಾಗ, ನಿತಿನ್ ಎಂಬ ವ್ಯಕ್ತಿ ಫೋನ್ ಕರೆಗೆ ಸಿಕ್ಕಿದ್ದಾನೆ.

ಇದನ್ನೂ ಓದಿ: ಎಚ್ಚರ.. ಸಿಎಂ ಪ್ರೊಫೈಲ್ ಫೋಟೊ ಹಾಕಿ ವಂಚಿಸುತ್ತಿದ್ದಾರೆ ಸೈಬರ್ ಕಳ್ಳರು

ಆತ ತನ್ನನ್ನು ವೈಷ್ಣೋದೇವಿ ದೇವಸ್ಥಾನದ ಪ್ರತಿನಿಧಿ ಎಂದು ಹೇಳಿಕೊಂಡಿದ್ದಾನೆ. ಬುಕ್ಕಿಂಗ್​ಗೆ ಅಡ್ವಾನ್ಸ್ ಎಂದು 38,060 ರೂ.ನನ್ನು ಆತ ಕಳುಹಿಸಿದ ಕ್ಯೂಆರ್ ಕೋಡ್‌ಗೆ ಕಳಿಸಿದ್ದಾರೆ. ಅನಂತರ ಪೋನ್ ಮಾಡಿದಾಗ ಆತನ ಫೋನ್ ಸ್ವಿಚ್ಡ್​​ ಆಫ್ ಆಗಿದೆ. ದೇವಸ್ಥಾನಕ್ಕೆ ಕರೆ ಮಾಡಿದಾಗ ನಮ್ಮಲ್ಲಿ ಅಂತಹ ಯಾವುದೇ ಪ್ರತಿನಿಧಿ ಇಲ್ಲ ಎಂದು ಹೇಳಿದ್ದಾರೆ. ಈ ವೇಳೆ ತಾನು ವಂಚನೆಗೊಳಗಾಗಿರುವುದು ಅರಿವಿಗೆ ಬಂದು, ಆ ವ್ಯಕ್ತಿ ಮಂಗಳೂರಿಗೆ ಬಂದು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.