ETV Bharat / state

ದೈವಗಳ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್, ಅವಹೇಳನಕಾರಿ ಪತ್ರ; ಆರೋಪಿಗಳ ಪತ್ತೆಗೆ ಆಗ್ರಹ

ದೈವಗಳ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿದ ಪ್ರಕರಣ ಕೊಂಚ ಕ್ಲಿಷ್ಟಕರವಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚುವುದು ಅಷ್ಟು ಸುಲಭದ ಕೆಲಸವಲ್ಲ. ಆದರೂ, ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಡಿಸಿಪಿ ಹರಿರಾಂ ಶಂಕರ್ ಹೇಳಿದ್ದಾರೆ.

SC- ST meeting held at Managaluru
ಮಂಗಳೂರು ಕಮಿಷನರ್​ ಕಚೇರಿಯಲ್ಲಿ ಎಸ್ಸಿ-ಎಸ್ಟಿ ಸಭೆ ನಡೆಯಿತು
author img

By

Published : Feb 28, 2021, 9:29 PM IST

ಮಂಗಳೂರು : ತುಳುನಾಡಿನ ಕೊರಗಜ್ಜ, ಬಬ್ಬುಸ್ವಾಮಿ ದೈವಗಳ ಕಾಣಿಕೆ ಹುಂಡಿಗೆ ಕಾಂಡೋಮ್, ಅವಹೇಳನಕಾರಿ ಬರಹವಿರುವ ಪತ್ರ ಹಾಕಿ ಕಿಡಿಗೇಡಿಗಳು ಧಾರ್ಮಿಕ ನಂಬಿಕೆಗಳಿಗೆ ನೋವು ಉಂಟು ಮಾಡಿದ್ದಾರೆ. ಈ ಬಗ್ಗೆ ಕಾನೂನು ‌ಕ್ರಮಕೈಗೊಳ್ಳುವಂತೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಎಸ್ಸಿ-ಎಸ್ಟಿ ಸಭೆಯಲ್ಲಿ ಆಗ್ರಹಿಸಲಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿದ ಉಪ ಪೊಲೀಸ್ ಆಯುಕ್ತ ಹರಿರಾಂ ಶಂಕರ್, ಈ ಪ್ರಕರಣ ಕ್ಲಿಷ್ಟಕರವಾಗಿದ್ದು, ಈಗಾಗಲೇ ತನಿಖೆ ನಡೆಯುತ್ತಿದೆ. ದೈವಸ್ಥಾನಗಳ ಕಾಣಿಕೆ ಹುಂಡಿಯನ್ನು ತಿಂಗಳಿಗೆ ಒಂದು ಬಾರಿ ತೆರೆಯಲಾಗುತ್ತದೆ. ‌ಅಲ್ಲದೆ ಹೆಚ್ಚಿನ ಕಡೆಗಳಲ್ಲಿ ಸಿಸಿ ಕ್ಯಾಮರಾ ಅವಳವಡಿಕೆಯಾಗಿಲ್ಲ. ಇದರಿಂದ ಕಾಣಿಕೆ ಹಾಕುವವರಲ್ಲಿ ಯಾರು ಈ ಕೃತ್ಯ ಎಸಗಿದ್ದಾರೆ ಎಂದು ತನಿಖೆ ನಡೆಸುವುದು ಕಷ್ಟ. ಆದರೂ, ತನಿಖೆ ನಡೆಯುತ್ತಲೇ ಇದೆ. ಶೀಘ್ರದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಮಂಗಳೂರು ಕಮಿಷನರ್​ ಕಚೇರಿಯಲ್ಲಿ ಎಸ್ಸಿ-ಎಸ್ಟಿ ಸಭೆ ನಡೆಯಿತು

ಓದಿ : ಮಂಗಳೂರಿನ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಮತ್ತೆ ಕಾಂಡೋಮ್ ಪತ್ತೆ

ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಮೇಲ್ವರ್ಗಕ್ಕೆ ಸೇರಿದ ವ್ಯಕ್ತಿಯೋರ್ವರು ಕೊರಗಜ್ಜನ ಗುಡಿ ಕಟ್ಟಲು ಹೊರಟಿದ್ದಾರೆ. ಈ ಬಗ್ಗೆ ಮಹಾನಗರ ಪಾಲಿಕೆಗೆ ದೂರು ನೀಡಲಾಗಿದೆ. ಮನಪಾ ಗುಡಿ ನಿರ್ಮಿಸದಂತೆ ನೋಟಿಸ್ ಜಾರಿ ಮಾಡಿತ್ತು. ಆದರೆ ಮೊನ್ನೆ 12 ಗಂಟೆ ರಾತ್ರಿಗೆ ಗುಡಿ ನಿರ್ಮಾಣದ ಕೆಲಸ ಮಾಡುತ್ತಿದ್ದರು. ಕೊರಗಜ್ಜ ಎಂಬ ದಲಿತ ಸಮುದಾಯದ ದೈವವನ್ನು ಇರಿಸಿಕೊಂಡು ಮೇಲ್ವರ್ಗದವರು ವ್ಯವಹಾರ ಮಾಡಲು ಹೊರಟಿದ್ದಾರೆ. ಈಗ ಪ್ರತಿಯೊಂದು ವಾಹನಗಳಲ್ಲಿಯೂ ಸ್ವಾಮಿ ಕೊರಗಜ್ಜ ಎಂದು ಬರೆಯಲಾಗುತ್ತದೆ. ಆದರೆ ದ.ಕ.ಜಿಲ್ಲೆಯಲ್ಲಿ ಯಾವುದೇ ಕೊರಗರನ್ನು ಮನೆಯೊಳಗೆ ಸೇರಿಸುತ್ತಿಲ್ಲ ಎಂದು ಸಭೆಯಲ್ಲಿದ್ದವರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಹರಿರಾಂ ಶಂಕರ್, ದೇವಸ್ಥಾನ, ಗುಡಿ ನಿರ್ಮಾಣ ಮಾಡುವಾಗ ಮಹಾನಗರ ಪಾಲಿಕೆಯ ಪರವಾನಿಗೆ ಅಗತ್ಯ. ಇದರ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ನಗರದ ಜ್ಯೋತಿ ವೃತ್ತವನ್ನು ಈಗಾಗಲೇ ಡಾ.ಬಿ.ಆರ್.ಅಂಬೇಡ್ಕರ್ ವೃತ್ತವೆಂದು ನಾಮಕರಣ ಮಾಡಿದ್ದರೂ, ಬಸ್​ಗಳಲ್ಲಿ ಇನ್ನೂ ಕೂಡ ಜ್ಯೋತಿ ಎಂದೇ ಬೋರ್ಡ್​ ಹಾಕಲಾಗ್ತದೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸಭೆಯಲ್ಲಿದ್ದವರು ಆಗ್ರಹಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಡಿಸಿಪಿ ಮುಂದಿನ ಎಸ್ಸಿ-ಎಸ್ಟಿ ಸಭೆಯ ಮುಂಚೆ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.