ETV Bharat / state

ಕೇರಳದ ಹೈವೇಯಲ್ಲಿ ದರೋಡೆ: ಆರೋಪಿಯೊಂದಿಗೆ ಕಡಬ ತಾಲೂಕಿಗೆ ಬಂದ ಕೇರಳ ಪೊಲೀಸರು - ಕೇರಳ ಪೊಲೀಸರು

ಕಾಣಿಯೂರಿನಲ್ಲಿರುವ ಚಾರ್ವಾಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದಲ್ಲಿ ಹೈವೇ ದರೋಡೆಯ ಆರೋಪಿಗಳು ಕದ್ದ ಮಾಲನ್ನು ಅಡವಿರಿಸಿ ಸಾಲ ಪಡೆದಿದ್ದಾರೆ ಎಂಬ ವಿಚಾರ ಕೃತ್ಯದಲ್ಲಿ ಭಾಗಿಯಾದ ಆರೋಪಿಯೊಬ್ಬನ ತನಿಖೆಯ ವೇಳೆ ಪತ್ತೆಯಾದ ಹಿನ್ನೆಲೆಯಲ್ಲಿ ಕೇರಳದ ಪೊಲೀಸರ ತಂಡ ಇಲ್ಲಿಗೆ ಭೇಟಿ ನೀಡಿದೆ.

Kerala police
ಕೇರಳ ಪೊಲೀಸ್
author img

By

Published : Mar 2, 2021, 2:10 PM IST

ದಕ್ಷಿಣ ಕನ್ನಡ: ಕೇರಳದ ಹೈವೇಗಳಲ್ಲಿ ದರೋಡೆ ನಿರತವಾಗಿದ್ದ ದುಷ್ಕರ್ಮಿಗಳ ತಂಡವು ಕದ್ದ ಚಿನ್ನಾಭರಣಗಳನ್ನು ಕಡಬ ತಾಲೂಕಿನ ಕಾಣಿಯೂರಿನ ಸಹಕಾರಿ ಸಂಘವೊಂದರಲ್ಲಿ ಅಡಮಾನವಿರಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಇದರ ತನಿಖೆಗಾಗಿ ಕೇರಳ ಪೋಲೀಸರ ತಂಡ ಆರೋಪಿ ಜತೆ ಇಂದು ಕಾಣಿಯೂರಿಗೆ ಆಗಮಿಸಿದೆ.

ಕಾಣಿಯೂರಿನಲ್ಲಿರುವ ಚಾರ್ವಾಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದಲ್ಲಿ ಹೈವೇ ದರೋಡೆಯ ಆರೋಪಿಗಳು ಕದ್ದ ಮಾಲು ಅಡವಿರಿಸಿ ಸಾಲ ಪಡೆದಿದ್ದಾರೆ ಎಂಬ ವಿಚಾರ ಕೃತ್ಯದಲ್ಲಿ ಭಾಗಿಯಾದ ಆರೋಪಿಯೊಬ್ಬನ ತನಿಖೆಯ ವೇಳೆ ಪತ್ತೆಯಾದ ಹಿನ್ನೆಲೆಯಲ್ಲಿ ಕೇರಳದ ಪೊಲೀಸರ ತಂಡ ಇಲ್ಲಿಗೆ ಭೇಟಿ ನೀಡಿದೆ.

ಕೇರಳದಲ್ಲಿ ಖತಾರ್ನಕ್ ದುಷ್ಕರ್ಮಿಗಳ ತಂಡವೊಂದು ಹೆದ್ದಾರಿಗಳಲ್ಲಿ ದರೋಡೆ ಕೃತ್ಯದಲ್ಲಿ ನಿರತವಾಗಿತ್ತು. ಹೆದ್ದಾರಿಯಲ್ಲಿ ಸಾಗುವ ವಾಹನಗಳನ್ನು ರಾತ್ರಿ ವೇಳೆ ಅಡ್ಡಗಟ್ಟಿ ದರೋಡೆ ಮಾಡುವ ಈ ತಂಡದ ಓರ್ವ ಸದಸ್ಯನನ್ನು ಇತ್ತೀಚಿಗೆ ಕಾಞಂಗಾಡ್ ಪೊಲೀಸರು ಬಂಧಿಸಿದ್ದರು.

ಬಂಧಿತ ಆರೋಪಿಯ ವಿಚಾರಣೆ ವೇಳೆ ತಮ್ಮ ತಂಡವು ಕದ್ದ ಚಿನ್ನಾಭರಣಗಳನ್ನು ಕಡಬ ತಾಲೂಕಿನ ಚಾರ್ವಾಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದಲ್ಲಿ ಅಡವಿಟ್ಟು ಸಾಲ ಪಡೆದಿರುವುದಾಗಿ ತಿಳಿಸಿದ್ದ. ಅಲ್ಲದೇ ಕೃತ್ಯಕ್ಕೆ ಬಳಸಿದ ಚಾಕು ತಲುವಾರು ಇತ್ಯಾದಿ ಮಾರಾಕ ಆಯುಧಗಳನ್ನು ಅಲ್ಲಿಯೇ ಬಿಸಾಡಿರುವುದಾಗಿಯೂ ಬಗ್ಗೆ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಇಲಾಖಾ ವಾಹನದಲ್ಲಿ ಕಾಣಿಯೂರಿನ ಈ ಸಹಕಾರಿ ಸಂಘಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಸಹಕಾರಿ ಸಂಘದ ಹಿಂಬದಿಯಲ್ಲಿ ಆರೋಪಿಗಳು ಬಿಸಾಡಿರುವ ಮಾರಕಾಸ್ತ್ರಗಳು ಪತ್ತೆಯಾಗಿದೆ ಎನ್ನಲಾಗಿದೆ. ಸದ್ಯ ಇದರ ಮಹಜರು ನಡೆಯುತ್ತಿದೆ. ಅಡವಿಟ್ಟ ಚಿನ್ನಾಭರಣಗಳ ಪರಿಶೀಲನೆ ನಡೆಯುತ್ತಿದೆ.

ಕೇರಳದ ನಿವಾಸಿ ರಾಜೀವ್ ಬಂಧಿತ ಆರೋಪಿಯಾಗಿದ್ದು, ಈತ ನೀಡಿದ ಮಾಹಿತಿಯಂತೆ ಪೊಲೀಸರು ತನಿಖೆಗೆ ಚಾರ್ವಾಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘಕ್ಕೆ ಆಗಮಿಸಿದ್ದರು. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಆರೋಪಿಗಳಾದ ಉನ್ಮೇಶ್ ಹಾಗೂ ಜೋಗಿ ಎಂಬವರು ಪರಾರಿಯಾಗಿದ್ದು, ಇವರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಈ ಮೂವರು ಆರೋಪಿಗಳು ಕಾಣಿಯೂರಿನ ಮಠತ್ತಾರು ಎಂಬಲ್ಲಿ ರಬ್ಬರ್ ತೋಟವೊಂದನ್ನು ಲೀಸ್​ಗೆ ಪಡೆದು ರಬ್ಬರ್ ಟ್ಯಾಪಿಂಗ್ ನಡೆಸುತ್ತಿದ್ದರು. ಹಾಗಾಗಿ ಇಲ್ಲಿನ ಸ್ಥಳೀಯ ವಿಳಾಸ ನೀಡಿ ಆಧಾರ್ ಕಾರ್ಡ್ ಕೂಡ ಮಾಡಿಸಿಕೊಂಡಿದ್ದರು. ಈ ಆಧಾರ್ ಕಾರ್ಡ್​ ವಿಳಾಸವನ್ನು ಚಾರ್ವಾಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘಕ್ಕೆ ದಾಖಲೆಯಾಗಿ ನೀಡಿ ಸಂಘದಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆದಿದ್ದರು ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.