ETV Bharat / state

ಹಠಾತ್ತನೇ ಬ್ರೇಕ್​ ಹಾಕಿದ ಬಸ್​​ ಚಾಲಕ... ಕೆಳಗೆ ನುಗ್ಗಿದ ಬೈಕ್

ಉಚ್ಚಿಲದಲ್ಲಿ ಖಾಸಗಿ ಸಿಟಿ ಬಸ್ಸೊಂದು ಹಠಾತ್ತಾಗಿ ಬ್ರೇಕ್ ಹೊಡೆದ ಕಾರಣ ಹಿಂದಿನಿಂದ ಧಾವಿಸುತ್ತಿದ್ದ ಬೈಕ್ ಸವಾರರು ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣವಾಗಿ ಬಸ್ಸಿನ ಒಳಗೆ ನುಗ್ಗಿದೆ.

author img

By

Published : Jul 12, 2021, 9:03 PM IST

ಬಸ್​ ಕೆಳಗೆ ನುಗ್ಗಿದ ಬೈಕ್
ಬಸ್​ ಕೆಳಗೆ ನುಗ್ಗಿದ ಬೈಕ್

ಉಳ್ಳಾಲ: ಬಸ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಉಚ್ಚಿಲ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಘಟನೆ ಸಂಭವಿಸಿದೆ.

ಬೈಕ್ ಸವಾರ ಆಂಧ್ರ ಪ್ರದೇಶದ ಮೂಲದ ಶಶಿಧರ್ ರೆಡ್ಡಿ ಚಿಂತಾಜನಕ ಸ್ಥಿತಿಯಲ್ಲಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಧ್ರ ಮೂಲದ ಶಶಿಧರ್ ರೆಡ್ಡಿ (27) ಮತ್ತು ಶಾನು ಭಾಝ್ (31) ಎಂಬವರು ತಲಪಾಡಿ ಟೋಲ್ ಪ್ಲಾಜಾದ ಸಿಬ್ಬಂದಿಗಳಾಗಿದ್ದು, ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

ಉಚ್ಚಿಲದಲ್ಲಿ ಖಾಸಗಿ ಸಿಟಿ ಬಸ್ ಚಾಲಕ ಹಠಾತ್ತಾಗಿ ಬ್ರೇಕ್ ಹೊಡೆದ ಕಾರಣ ಹಿಂದಿನಿಂದ ಧಾವಿಸುತ್ತಿದ್ದ ಬೈಕ್ ಸವಾರರು ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣವಾಗಿ ಬಸ್ಸಿನ ಒಳಗೆ ನುಗ್ಗಿದೆ. ಬೈಕ್ ಸವಾರ ಶಶಿಧರ್ ತಲೆಗೆ ಗಂಭೀರ ಗಾಯಗಳಾಗಿದ್ದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಹ ಸವಾರ ಶಾನು ಭಾಝ್ ಕೂಡ ಗಾಯಾಳುವಾಗಿ ಚಿಕಿತ್ಸ ಪಡೆಯುತ್ತಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ : '1 ನೋಟು ಕೊಟ್ರೆ 3 ಕೊಡ್ತೀವಿ.. ದ್ರಾವಣ ಹಾಕಿ ಹಣ ದ್ವಿಗುಣ ಮಾಡ್ತೀವಿ..' ಸೆರೆ ಸಿಕ್ಕರು ಡಬ್ಲಿಂಗ್ ವಂಚಕರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.