ಸುಬ್ರಹ್ಮಣ್ಯ: ಹಿಂದಿ ಚಲನಚಿತ್ರ ರಂಗದ ಖ್ಯಾತ ನಟ ರಿಷಿ ಕಪೂರ್ ಕುಟುಂಬ ತುಳುನಾಡಿನ ಐತಿಹಾಸಿಕ ಮತ್ತು ಪುಣ್ಯ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ 2003ರಲ್ಲಿ ಆಗಮಿಸಿ ಸರ್ಪಸಂಸ್ಕಾರ ಮಾಡಿಸಿತ್ತು.
ರಿಷಿ ಕಪೂರ್ ಕುಟುಂಬ 2003 ರ ಸೆಪ್ಟೆಂಬರ್ ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿ, ಕ್ಷೇತ್ರದಲ್ಲಿ ನಡೆಯುವ ವಿಶೇಷ ಸೇವೆಯಾದ ಸರ್ಪಸಂಸ್ಕಾರ ಪೂಜಾ ಕಾರ್ಯವನ್ನು ನೆರವೇರಿಸಿತ್ತು. ರಾಜ್ಕಪೂರ್, ಅವರ ಪತ್ನಿ ಕೃಷ್ಣಾ ಕಪೂರ್, ಮಕ್ಕಳಾದ ರಣಧೀರ್ ಕಪೂರ್, ರಿಷಿ ಕಪೂರ್, ರಾಜೀವ್ ಕಪೂರ್, ರಿಷಿಯ ಪತ್ನಿ ನಟಿ ನೀತೂ ಕಪೂರ್ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದ್ದರು.
ಸುಬ್ರಹ್ಮಣ್ಯದಲ್ಲಿ ಖಾಸಗಿ ವಸತಿಗೃಹದ ಮಾಲಿಕರಾದ ವಿ ಎಸ್ ನಾಯಕ್ ಅವರು ಈ ಸಿನಿಮಾ ತಾರೆಗಳನ್ನು ಸುಬ್ರಹ್ಮಣ್ಯಕ್ಕೆ ಕರೆತಂದಿದ್ದರು. ಈ ಸಮಯದಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ಸೇವೆ ನಡೆಸಿದ ರಿಷಿ ಕಪೂರ್ ಕುಟುಂಬವು ಐದು ದಿನಗಳು ಸುಬ್ರಹ್ಮಣ್ಯದಲ್ಲೇ ಉಳಿದುಕೊಂಡಿತ್ತು. ಆ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಶಾಂತಲಾ ಸ್ಟುಡಿಯೋ ಮಾಲಿಕರಾದ ಲೋಕೇಶ್ ಬಿ.ಎನ್ ಎಂಬುವರು ರಿಷಿ ಕಪೂರ್ ಕುಟುಂಬದ ಪೋಟೋವನ್ನು ಕ್ಲಿಕ್ಕಿಸಿದ್ದರು.