ಮಂಗಳೂರು: ಕರಾವಳಿಯಲ್ಲಿ ಜೂ.15ರಿಂದ ಜುಲೈ 31ರವರೆಗೆ 47 ದಿನಗಳ ಯಾಂತ್ರೀಕೃತ ಮೀನುಗಾರಿಕೆಗೆ ನಿರ್ಬಂಧ ವಿಧಿಸಲಾಗಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಸಡಿಲಿಕೆ ಮಾಡಲಾಗಿರುವ ಮೀನುಗಾರಿಕಾ ಅವಧಿ ನಿನ್ನೆಗೆ ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಜುಲೈ 31ರವರೆಗೆ ಸಮುದ್ರ ಮೀನುಗಾರಿಕೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.
ಈ ಹಿನ್ನೆಲೆಯಲ್ಲಿ ಜೂ.15ರಿಂದ ಜುಲೈ 31ರವರೆಗೆ 10 ಅಶ್ವಶಕ್ತಿಯ ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಬೋಟ್ ಮೀನುಗಾರಿಕೆಗೆ ನಿಷೇಧ ಇರಲಿದೆ. ಈ ನಿಯಮ ಉಲ್ಲಂಘಿಸಿದವರ ವಿರುದ್ಧ ಕರ್ನಾಟಕ ಕಡಲ ಮೀನುಗಾರಿಕೆ ಕಾಯ್ದೆ1986ರ ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ. ಪ್ರತೀ ವರ್ಷ ಸಮುದ್ರ ಮೀನುಗಾರಿಕೆಗೆ ಜೂನ್ ಮೊದಲ ವಾರದಲ್ಲಿಯೇ ನಿರ್ಬಂಧ ವಿಧಿಸಲಾಗುತ್ತಿತ್ತು. ಆದರೆ, ಈ ಬಾರಿ ಜೂನ್ ಆರಂಭವಾದರೂ 15 ದಿನಗಳ ಕಾಲ ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ.