ಮಂಗಳೂರು: ಕೊರೊನಾ ಹಿನ್ನೆಲೆ ಸಾರ್ವಜನಿಕ ಪ್ರವೇಶಕ್ಕೆ ನಿಷೇಧ ಹೇರಿದ್ದ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮಕ್ಕೆ ನಾಳೆಯಿಂದ ಪ್ರವಾಸಿಗರು ಭೇಟಿ ನೀಡಲು ಅವಕಾಶ ಮಾಡಿಕೊಡಲಾಗಿದೆ.
ನಾಳೆಯಿಂದ ವಿಜ್ಞಾನ ಕೇಂದ್ರ ಮತ್ತು ತಾರಾಲಯ ಹೊರತುಪಡಿಸಿ ಇತರ ಆಕರ್ಷಣೆಯ ಸ್ಥಳಗಳಾದ ಲೇಕ್ ಗಾರ್ಡನ್, ಹರ್ಬೇರಿಯಂ, ಬೊಟಾನಿಕಲ್ ಮ್ಯೂಸಿಯಂ, ಸಂಸ್ಕೃತಿ ಗ್ರಾಮವನ್ನು ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ಸೋಮವಾರ ರಜಾ ದಿನವಾಗಿರುತ್ತದೆ.
ಇನ್ನು ವೀಕ್ಷಣೆಗೆ ಬರುವ ಸಾರ್ವಜನಿಕರು ಸರ್ಕಾರದ ಆದೇಶದಂತೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು, ಮಾಸ್ಕ್ ಧರಿಸಿರುವಂತೆ ಸೂಚಿಸಲಾಗಿದೆ.