ಮಂಗಳೂರು: ಮದುವೆ ಕಾರ್ಯಕ್ರಮವೊಂದರಲ್ಲಿ ಬೃಹತ್ ಪರದೆಯ ಮೂಲಕ ಲೋಕಸಭಾ ಚುನಾವಣಾ ಫಲಿತಾಂಶ ನೋಡಲು ವ್ಯವಸ್ಥೆ ಮಾಡಿದ ಘಟನೆ ಕರ್ನಾಟಕದ ಗಡಿ ಕಾಸರಗೋಡು ಜಿಲ್ಲೆಯ ಪೆರ್ಲ ಎಂಬಲ್ಲಿ ನಡೆದಿದೆ.
ಪೆರ್ಲದ ಶಂಕರ ಸದನ ಮಂಟಪದಲ್ಲಿ ಪ್ರದೀಪ್ ಮತ್ತು ಸೌಮ್ಯ ಎಂಬುವರ ಮದುವೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಆದರೆ ಮದುವೆಗೆ ಬಂದ ಬಂಧುಗಳು, ಸ್ನೇಹಿತರಿಗೆ ಲೋಕಸಭಾ ಚುನಾವಣೆಯ ಫಲಿತಾಂಶ ವೀಕ್ಷಿಸಲು ಬೃಹತ್ ಪರದೆಯ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮದುವೆ ಕಾರ್ಯಕ್ರಮಕ್ಕೆ ಬಂದಿರುವವರು ಚುನಾವಣಾ ಫಲಿತಾಂಶವನ್ನು ವೀಕ್ಷಿಸಿದರು.