ETV Bharat / state

ರೈಲ್ವೆ ನಿಲ್ದಾಣ, ಏರ್​ಪೋರ್ಟ್​ಗಳಲ್ಲಿ ಪಾಲನೆ ಆಗುತ್ತಿದೆಯೇ ಕೋವಿಡ್​ ನಿಯಮಗಳು? - covid rules in mangalore

ಕೊರೊನಾ ಕಾರಣದಿಂದಾಗಿ ಕಳೆದ ವರ್ಷ ರೈಲು ಮತ್ತು ವಿಮಾನ ಸಂಚಾರವನ್ನು ಹಲವು ತಿಂಗಳುಗಳ ಕಾಲ ನಿರ್ಬಂಧಿಸಲಾಗಿತ್ತು. ಬಳಿಕ ಪ್ರಯಾಣಿಕರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೋವಿಡ್​ ನಿಯಮಗಳೊಂದಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಯ್ತು. ಇದೀಗ ಕರ್ನಾಟಕದಲ್ಲಿ ಮತ್ತೆ 14 ದಿನಗಳ ಜನತಾ ಕರ್ಫ್ಯೂ ಜಾರಿಯಲ್ಲಿದೆ. ಆದ್ರೆ ಜನರು ನಾನಾ ಕಡೆಗಳಿಂದ ವಿಮಾನ ಮತ್ತು ರೈಲುಗಳಲ್ಲಿ ಸಂಚರಿಸಿ ಊರು ಸೇರುತ್ತಿದ್ದಾರೆ. ರೈಲು ಮತ್ತು ವಿಮಾನ ಸಂಚಾರ ಮಾಡುವಾಗ ಕೋವಿಡ್​​ ನಿಯಮಗಳು ಸಂಪೂರ್ಣವಾಗಿ ಪಾಲನೆಯಾಗುತ್ತಿವೆಯಾ? ಅನ್ನೋ ಪ್ರಶ್ನೆ ಉದ್ಭವಿಸಿದೆ. ಈ ಬಗ್ಗೆ ಒಂದು ರಿಪೋರ್ಟ್‌ ಇಲ್ಲಿದೆ.

is covid rules are following in railway stations and airports
ರೈಲ್ವೆ ನಿಲ್ದಾಣ, ಏರ್​ಪೋರ್ಟ್​ಗಳಲ್ಲಿ ಪಾಲನೆ ಆಗುತ್ತಿದೆಯೇ ಕೋವಿಡ್​ ನಿಯಮಗಳು?
author img

By

Published : Apr 30, 2021, 10:04 AM IST

ಮಂಗಳೂರು/ಬೆಂಗಳೂರು: ಕಳೆದ ವರ್ಷ ಕೋವಿಡ್​ ಕಾರಣದಿಂದ ಸಂಪೂರ್ಣ ಸ್ಥಗಿತಗೊಂಡಿದ್ದ ರೈಲು ಮತ್ತು ವಿಮಾನ ಸಂಚಾರ ಸೇವೆ ಕೋವಿಡ್‌ ನಿಯಮಾವಳಿಗಳೊಂದಿಗೆ ಮತ್ತೆ ಕಾರ್ಯಾರಂಭಿಸಿದೆ. ಕೋವಿಡ್‌ ಎರಡನೇ ಅಲೆ ಕಾರಣದಿಂದ ಕೆಲವೆಡೆಗೆ ನಿರ್ಬಂಧ ಹೇರಲಾಗಿದೆ. ಆದ್ರೆ ಕಟ್ಟುನಿಟ್ಟಿನ ಕೋವಿಡ್​​ ನಿಯಮಗಳನ್ವಯ ವಿಮಾನ ಮತ್ತು ರೈಲು ಸಂಚಾರಕ್ಕೆ ಅವಕಾಶವಿದೆ. ಆದ್ರೆ ಈ ಸಂಚಾರದ ವೇಳೆಯಲ್ಲಿ ಪ್ರಯಾಣಿಕರ ಕೋವಿಡ್​ ನಿಯಮ ಪಾಲನೆ ಮೇಲೆ ಹದ್ದಿನ ಕಣ್ಣಿಡುವುದು ಒಂದು ದೊಡ್ಡ ಸವಾಲೇ ಸರಿ. ಹೌದು, ಪ್ರಯಾಣಿಕರು ಮಾಸ್ಕ್​ ಧರಿಸುವುದು, ಅಂತರ ಕಾಪಾಡುವುದು, ಆರ್​ಟಿ-ಪಿಸಿಆರ್​ ವರದಿ ಹೊಂದುವುದು ಕಡ್ಡಾಯವಾಗಿದ್ದು, ರೈಲ್ವೆ ಮತ್ತು ಏರ್​ಪೋರ್ಟ್ ಸಿಬ್ಬಂದಿ ನಿಯಮ ಪಾಲನೆಯಾಗುವಂತೆ ನೋಡಿಕೊಳ್ಳಬೇಕಿದೆ

ರೈಲ್ವೆ ನಿಲ್ದಾಣ, ಏರ್​ಪೋರ್ಟ್​ಗಳಲ್ಲಿ ಪಾಲನೆ ಆಗುತ್ತಿದೆಯೇ ಕೋವಿಡ್​ ನಿಯಮಗಳು?

ಬೆಂಗಳೂರು ರೈಲ್ವೆ ಪೊಲೀಸ್​ ಸಿಬ್ಬಂದಿ ಮತ್ತು ಗಗನಸಖಿಯರು ಪ್ರಯಾಣಿಕರನ್ನು ಗಮನಿಸಿ ನಿಯಮ ಪಾಲನೆಯಾಗುವಂತೆ ನೋಡಿಕೊಳ್ಳುತ್ತಾರೆ. ಅದರಲ್ಲೂ ರೈಲ್ವೆ ಪೊಲೀಸ್​ ಮತ್ತು ಸಿಬ್ಬಂದಿ ಹೆಚ್ಚು ಪ್ರಯಾಣಿಕರೊಂದಿಗೆ ಸಂವಹನ ನಡೆಸುತ್ತಾರೆ. ಈ ವೇಳೆ ಹಲವರು ಸೋಂಕಿಗೊಳಗಾದ ಉದಾಹರಣೆಗಳಿವೆ.

ಇನ್ನು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ಕ್ರಮ‌ ಪಾಲನೆಯಾಗುತ್ತಿದೆ. ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಮಾತ್ರ ಕೊರೊನಾ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎಂಬ ಆರೋಪಗಳಿವೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊರೊನಾ ಟೆಸ್ಟ್ ಮಾಡುವ ವ್ಯವಸ್ಥೆ ಇದ್ದು, ಎಲ್ಲಾ ನಿಯಮಗಳು ಚಾಚು ತಪ್ಪದೇ ಪಾಲನೆಯಾಗ್ತಿವೆ. ಅದ್ರೆ ರೈಲ್ವೆ ನಿಲ್ದಾಣಕ್ಕೆ ಒಮ್ಮೆಯೇ ಸಾವಿರಾರು ಪ್ರಯಾಣಿಕರು ಬರುವುದರಿಂದ ಅವರ ತಪಾಸಣೆಯೇ ಒಂದು ದೊಡ್ಡ ಸವಾಲು.

ವಿಮಾನ ನಿಲ್ದಾಣಕ್ಕೆ ಹೋಲಿಸಿದರೆ ಹೆಚ್ಚು ಪ್ರಯಾಣಿಕರಿಂದ ರೈಲು ನಿಲ್ದಾಣದಲ್ಲೇ ನಿಯಮ ಉಲ್ಲಂಘನೆ ಹೆಚ್ಚು. ಹಾಗಾಗಿ ಮತ್ತಷ್ಟು ಸಿಬ್ಬಂದಿ ನೇಮಕಗೊಂಡು ಸೂಕ್ತ ವ್ಯವಸ್ಥೆ ಆಗಬೇಕಿದೆ. ಎಲ್ಲ ಪ್ರಯಾಣಿಕರೂ ಸಹ ನಿಯಮ ಪಾಲಿಸಿ ಸಹಕರಿಸಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.