ಕಡಬ: ಅಪ್ರಾಪ್ತ ಸೊಸೆಯನ್ನೆ ಗರ್ಭಿಣಿಯನ್ನಾಗಿಸಿ ಜೈಲು ಸೇರಿದ ಮಾವ - ಈಟಿವಿ ಭಾರತ್ ಕನ್ನಡ
ಕಡಬ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಅಪ್ರಾಪ್ತ ಸೊಸೆಯನ್ನೆ ಕಾಮುಕ ಮಾವನೋರ್ವ ದೈಹಿಕವಾಗಿ ಬಳಸಿಕೊಂಡು ಗರ್ಭಿಣಿಯನ್ನಾಗಿಸಿದ್ದಾನೆ. ಆಶಾ ಕಾರ್ಯಕರ್ತೆಯೋರ್ವರು ಬಾಲಕಿಯ ಮನೆಗೆ ಭೇಟಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕಡಬ(ದಕ್ಷಿಣ ಕನ್ನಡ) : ಅಪ್ರಾಪ್ತ ಸೊಸೆಯನ್ನೆ ಗರ್ಭಿಣಿಯನ್ನಾಗಿಸಿದ ಕಾಮುಕ ಮಾವನೋರ್ವ ಜೈಲು ಪಾಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ. ಸ್ವತಃ ಮಾವನೇ ತನ್ನ ಅಪ್ರಾಪ್ತ ಸೊಸೆಯ ದೈಹಿಕವಾಗಿ ಬಳಸಿಕೊಂಡು ಗರ್ಭಿಣಿಯನ್ನಾಗಿಸಿದ್ದಾನೆ. ಕಡಬ ತಾಲೂಕಿನ ಕೊಂಬಾರಿನ ಮರುವಂಜೆಯ ನಿವಾಸಿ ರುಕ್ಮಯ್ಯ ಎಂಬಾತ ಸೊಸೆಯನ್ನು ಗರ್ಭಿಣಿಯನ್ನಾಗಿಸಿದ ಕಾಮುಕ ಮಾವ.
ಆರೋಪಿಯು ತನ್ನ ಸಂಬಂಧಿಯಾದ 17 ವರ್ಷದ ಬಾಲಕಿಯ ಮೇಲೆ ಕಳೆದ ಫೆಬ್ರವರಿ ತಿಂಗಳಿನಿಂದ ನಾಲ್ಕೈದು ಬಾರಿ ನಿರಂತರವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಇದರ ಪರಿಣಾಮ ಆಕೆ ಗರ್ಭಿಣಿಯಾಗಿದ್ದಾಳೆ. ಆಶಾ ಕಾರ್ಯಕರ್ತೆಯೋರ್ವರು ಬಾಲಕಿಯ ಮನೆಗೆ ಭೇಟಿ ನೀಡಿದಾಗ ವಿಷಯ ಹೊರಬಂದಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಕಡಬ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಿರುವುದಾಗಿ ತಿಳಿದು ಬಂದಿದೆ.
TAGGED:
Rape of a minor girl