ಪುತ್ತೂರು(ದಕ್ಷಿಣ ಕನ್ನಡ): ಗಡಿಭಾಗವಾದ ಈಶ್ವರಮಂಗಲದಲ್ಲಿ ಅನ್ಯಕೋಮಿನ ವ್ಯಕ್ತಿ ಮೆಡಿಕಲ್ಸ್ನ ಒಳಗೆ ನುಗ್ಗಿ ಮಹಿಳಾ ಸಿಬ್ಬಂದಿಯ ಮಾನಭಂಗಕ್ಕೆ ಯತ್ನಿಸಿರುವ ಆರೋಪ ಪ್ರಕರಣ ಇಂದು ನಡೆದಿದೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಪೇಟೆಯಲ್ಲಿರುವ ಮೆಡಿಕಲ್ಸ್ ಔಷಧಿ ಖರೀದಿಸಲು ಇಬ್ರಾಹಿಂ ಕುಕ್ಕಾಜೆ(58 ವರ್ಷ) ಬಂದಿದ್ದು, ಮೆಡಿಕಲ್ ಶಾಪ್ ನಲ್ಲಿ ಯುವತಿಯೊಬ್ಬಳೇ ಇರುವುದನ್ನು ಕಂಡು ನೇರವಾಗಿ ಒಳನುಗ್ಗಿ ಆಕೆಯ ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ದುರುಳನ ನೀಚ ಕೃತ್ಯದಿಂದ ಭಯಭೀತಳಾದ ಯುವತಿ ಬೊಬ್ಬೆ ಹೊಡೆದಿದ್ದಾಳೆ. ಈ ವೇಳೆ ಸುತ್ತಮುತ್ತಲಿನ ಜನರು ಜಮಾಯಿಸಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪುತ್ತೂರು ಗ್ರಾಮಾಂತರ ಸಂಪ್ಯ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಅತ್ಯಾಚಾರ ಯತ್ನ ಪ್ರಕರಣ ದಾಖಲಾಗಿದೆ.
ಓದಿ: ಟೊಮೇಟೊ ಕ್ರೇಟ್ ಜೊತೆ ಮದ್ಯ ಸಾಗಣೆ: ಗುಂಡ್ಲುಪೇಟೆಯಲ್ಲಿ ಖದೀಮ ಅಂದರ್