ETV Bharat / state

ನಳಿನ್ ಕುಮಾರ್ ಕಟೀಲು ಮೇಲೆ ಸಾವಿರ ಎಫ್ಐಆರ್ ಹಾಕಬಹುದು: ರಮಾನಾಥ ರೈ ತಿರುಗೇಟು - ಮಾಜಿ ಸಚಿವ ರಮಾನಾಥ ರೈ ತಿರುಗೇಟು

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮೇಲೆ ಶಿವಮೊಗ್ಗದಲ್ಲಿ ದಾಖಲಾದ ಎಫ್ಐಆರ್ ​ ಹಿಂಪಡೆಯಲು ಬಿಡೋದಿಲ್ಲ ಎಂದು ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ನೀಡಿರುವ ಹೇಳಿಕೆಗೆ ಮಾಜಿ ಸಚಿವ ರಮಾನಾಥ ರೈ ತಿರುಗೇಟು ನೀಡಿದ್ದಾರೆ.

Ramanath Rai spark against Nalin Kumar Kateel
ರಮಾನಾಥ ರೈ
author img

By

Published : May 22, 2020, 3:40 PM IST

ಮಂಗಳೂರು: ನಳಿನ್ ಕುಮಾರ್ ಕಟೀಲು ಮೇಲೆ ಸಾವಿರ ಎಫ್ಐಆರ್ ಹಾಕಬಹುದು. ಅವರು ತಿಳಿವಳಿಕೆ ಇಲ್ಲದೇ ಮಾತಾಡಿದ್ದಾರೆ. ಅವರ ಬಗ್ಗೆ ನಾನು ಹೆಚ್ಚು ಮಾತನಾಡಲು ಹೋಗೋದಿಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ತಿರುಗೇಟು ನೀಡಿದ್ದಾರೆ.

ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಮಾಜಿ ಸಚಿವರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಮೇಲೆ ಶಿವಮೊಗ್ಗದಲ್ಲಿ ದಾಖಲಾದ ಎಫ್ಐಆರ್​ಅನ್ನು ಹಿಂಪಡೆಯಲು ಬಿಡೋದಿಲ್ಲ ಎಂದು ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಸಿದರು. ಅವರ ಮಟ್ಟ ಅಷ್ಟೇ ಇರೋದು, ಅದಕ್ಕಿಂತ ಜಾಸ್ತಿ ಇಲ್ಲ ಆದ್ದರಿಂದ ನಾನು ಏನೂ ಹೇಳೋದಿಲ್ಲ ಎಂದರು‌.

ರಮಾನಾಥ ರೈ

ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವುದಾದರೆ, ಬಹಳಷ್ಟಿದೆ. ಚುನಾವಣೆ ಪೂರ್ವದಲ್ಲಿ ಸ್ವಿಜರ್ಲೆಂಡ್ ನಲ್ಲಿ ಕಪ್ಪು ಹಣ ಇದೆ ಅದನ್ನು ತರುತ್ತೇವೆ. ದೇಶದ ಜನರ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ ಎಂದಿದ್ದರು. ಪ್ರತಿಯೊಬ್ಬರ ಖಾತೆಗೆ ಬರಬೇಕೆಂದು ನಾನು ಹೇಳುತ್ತಿಲ್ಲ. ನೂರು ದಿವಸದಲ್ಲಿ ಕಪ್ಪು ಹಣ ತರುತ್ತೇವೆ ಎಂದಿದ್ದು, ಆರು ವರ್ಷವಾದರೂ ಇನ್ನೂ ತರಲು ಸಾಧ್ಯವಾಗಿಲ್ಲ. ಡೀಸೆಲ್​​​ - ಪೆಟ್ರೋಲ್ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 15 ರೂ. ಗೆ ಕೊಡುವಷ್ಟು ಬಂದಿದೆ. ನಮ್ಮಲ್ಲಿ ಅದು ಸಾಧ್ಯವಾಗಿಲ್ಲ ಎಂದು ರಮಾನಾಥ ರೈ ವ್ಯಂಗ್ಯವಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.