ಮಂಗಳೂರು : ಪವಿತ್ರ ರಂಜಾನ್ನ ಚಂದ್ರದರ್ಶನ ಆಗಿರುವ ಹಿನ್ನೆಲೆ ಕರಾವಳಿಯಲ್ಲಿ ನಾಳೆಯಿಂದ ಉಪವಾಸ ಆರಂಭವಾಗಲಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಾಳೆಯಿಂದಲೇ ರಂಜಾನ್ ಉಪವಾಸ ಪ್ರಾರಂಭವಾಗಲಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಏಪ್ರಿಲ್ 14 ರಿಂದ ಶುರುವಾಗಲಿದೆ.
ಕೇರಳದ ಕ್ಯಾಲಿಕೆಟ್ನಲ್ಲಿ ಚಂದ್ರ ದರ್ಶನವಾದ ಹಿನ್ನೆಲೆ ಮಂಗಳವಾರದಿಂದ ರಂಜಾನ್ ಉಪವಾಸ ಆರಂಭಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಜಮಾ ಅತ್ ಖಾಜಿ ತ್ವಾಕಾ ಅಹಮದ್ ಮುಸ್ಲಿಯರ್ ಘೋಷಿಸಿದ್ದಾರೆ.