ಮಂಗಳೂರು: ಭೂ ಕುಸಿತ ಉಂಟಾಗಿ ಹಾನಿಯಾಗಿದ್ದ ಪಡೀಲ್-ಕುಲಶೇಖರ ರೈಲ್ವೆ ಹಳಿಯ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ರೈಲು ಮಾರ್ಗ ಸಂಚಾರಕ್ಕೆ ಅರ್ಹವಾಗಿದೆ ಎಂದು ರೈಲ್ವೆ ತಂತ್ರಜ್ಞರು ದೃಢಪಡಿಸಿದ್ದಾರೆ. ಈ ಹಿನ್ನೆಲೆ ರೈಲು ಸೇವೆ ಪುನಾರಂಭಗೊಂಡಿದೆ.
ಕಳೆದ ಎಂಟು ದಿನಗಳಿಂದ ಸ್ಥಗಿತಗೊಂಡಿದ್ದ ಬೆಂಗಳೂರು, ಕೇರಳ ರೈಲು ಸಂಚಾರ ಮತ್ತೆ ಆರಂಭಗೊಂಡಿದೆ. ಭೂ ಕುಸಿತ ಉಂಟಾದ ಹಿನ್ನೆಲೆ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾದ 400 ಮೀ. ಹೊಸ ಹಳಿಯಲ್ಲಿ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ದಕ್ಷಿಣ ರೈಲ್ವೆ ಹೇಳಿದೆ.
ಪ್ರಥಮ ಹಂತದಲ್ಲಿ ಮಂಗಳೂರು ಜಂಕ್ಷನ್ನಿಂದ ಪಣಂಬೂರಿಗೆ ಸರಕು ಬೋಗಿಗಳನ್ನು ಓಡಿಸಲಾಯಿತು. ಬಳಿಕ ಇದೇ ಮಾರ್ಗದಲ್ಲಿ ವಾಪಸ್ ಬಂದಿವೆ. ಆದ್ದರಿಂದ ಪ್ರಯಾಣಿಕರ ರೈಲು ಸಂಚಾರಕ್ಕೆ ಹಳಿ ಸಿದ್ಧವಾಗಿದೆ ಎಂದು ರೈಲ್ವೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.