ETV Bharat / state

ಸೋಂಕಿನಿಂದ ಮೃತಪಟ್ಟ ತಾಯಿ-ಮಗನ ಶವ ಕೊಡಲು ಖಾಸಗಿ ಆಸ್ಪತ್ರೆಯಿಂದ 10 ಲಕ್ಷ ರೂ. ಬಿಲ್!?

author img

By

Published : May 19, 2021, 7:44 PM IST

ಕೊರೊನಾ ವೈರಸ್​ನಿಂದ ಮೃತಪಟ್ಟ ತಾಯಿ-ಮಗನ ಶವಗಳನ್ನು ನೀಡಬೇಕಾದರೆ ಕುಟುಂಬಸ್ಥರು 10 ಲಕ್ಷ ಕಟ್ಟಬೇಕೆಂದು ಮಂಗಳೂರಿನ ಖಾಸಗಿ ಆಸ್ಪತ್ರೆ ಹೇಳಿದೆ ಎಂಬ ಆರೋಪ ಕೇಳಿಬಂದಿದೆ.

rs-10-lakh-bill-from-private-hospital-to-gave-death-bodies
ಕೊರೊನಾ ಸೋಂಕಿತ ಮೃತ ದೇಹ

ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್​ನಿಂದ ಮೃತಪಟ್ಟ ತಾಯಿ-ಮಗನ ಮೃತದೇಹ ಬಿಟ್ಟುಕೊಡಲು 10 ಲಕ್ಷ ಬಿಲ್ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ತಾಯಿ-ಮಗ ಇಬ್ಬರಿಗೂ ಸೋಂಕು ತಗುಲಿದ್ದು, ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಾಯಿ ವಾರದ ಹಿಂದೆ ಮೃತಪಟ್ಟರೆ, ಮಗ ನಿನ್ನೆ ಮೃತಪಟ್ಟಿದ್ದಾರೆ. ತಾಯಿಯ ಆಸ್ಪತ್ರೆ ಬಿಲ್ 8 ಲಕ್ಷ ರೂ. ಆಗಿದ್ದು, ಅದನ್ನು ಕಟ್ಟಲಾಗಿತ್ತು. ಆದರೆ ಇದೀಗ ಅವರ ಮಗನ ಮೃತದೇಹ ನೀಡಲು ಆಸ್ಪತ್ರೆ 10 ಲಕ್ಷ ರೂ. ಕಟ್ಟಲು ಕೇಳಿದೆ ಎನ್ನಲಾಗ್ತಿದೆ.

ಮೃತಪಟ್ಟವರ ಕುಟುಂಬಸ್ಥರು, ಕಾಂಗ್ರೆಸ್ ಮುಖಂಡ ಸುಹೈಲ್ ‌ಕಂದಕ್ ಮತ್ತಿತರರು ತೆರಳಿ ಈ ಬಗ್ಗೆ ಮಾತನಾಡಿದ ಬಳಿಕ ಆಸ್ಪತ್ರೆಯವರು 4.60 ಲಕ್ಷ ರೂ. ಕಟ್ಟಲು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ನಡುವೆ 14 ಡೋಸ್ ರೆಮ್​ಡೆಸಿವಿರ್​ ನೀಡಲಾಗಿದೆ. ಇದರಿಂದಲೇ ಸೋಂಕಿತರು ಮೃತಪಟ್ಟಿದ್ದಾರೆಂದು ಸಂಬಂಧಿಕರು ದೂರಿದ್ದಾರೆ.

ಓದಿ: ವ್ಯರ್ಥ ಆಗಬಾರದೆಂದು ಮೋದಿ ವ್ಯಾಕ್ಸಿನ್‌ ಬೇರೆ ದೇಶಗಳಿಗೆ ಕಳುಹಿಸಿದರು.. ಶಾಸಕ ಚರಂತಿಮಠ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.