ಮಂಗಳೂರು: ಸೆ. 2 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎನ್ಎಂಪಿಎ ಬರ್ತ್ ನಂಬರ್ 14 ( ರೂ. 280.71 ಕೋಟಿ) ಮತ್ತು ಎಂಆರ್ಪಿಎಲ್ನ ಬಿಎಸ್ 6 ಉನ್ನತಿಕರಣ ಯೋಜನೆ (ರೂ. 1829 ಕೋಟಿ) ಸೇರಿದಂತೆ ವಿವಿಧ ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.
ಎನ್ಎಮ್ಪಿಎಯ ಕುಳಾಯಿ ಮೀನುಗಾರಿಕಾ ಬಂದರು (196.51 ಕೋಟಿ) , ಇಂಟಿಗ್ರೇಟೆಡ್ ಎಲ್ಪಿ ಜಿ ಆ್ಯಂಡ್ ಬಲ್ಕ್ ಲಿಕ್ವಿಡ್ ಪಿಒಎಲ್ ಫೆಸಿಲಿಟಿ ( ರೂ. 500 ಕೋಟಿ ) ಸ್ಟೋರೇಜ್ ಟ್ಯಾಂಕ್ ಆ್ಯಂಡ್ ಎಡಿಬಿಲ್ ಆಯಿಲ್ ರಿಫೈನರಿ (ರೂ. 100 ಕೋಟಿ), ಬಿಟ್ಯುಮೆನ್ ಸ್ಟೋರೇಜ್ ಆ್ಯಂಡ್ ಅಲೈಡ್ ಫೆಸಿಲಿಟಿ (ರೂ. 100 ಕೋಟಿ) ಬಿಟ್ಯುಮೆನ್, ಎಡಿಬಲ್ ಆಯಿಲ್ ಸ್ಟೋರೇಜ್ ಆ್ಯಂಡ್ ಅಲೈಡ್ ಫೆಸಿಲಿಟಿ (ರೂ.100 ಕೋಟಿ) ಎಂ ಆರ್ಪಿಎಲ್ನ ಉಪ್ಪು ನೀರನ್ನು ಶುದ್ದೀಕರಿಸುವ ಘಟಕ (Desalination of Ongc Mrpl ರೂ. 677 ಕೋಟಿ ) ಯೋಜನೆಗಳ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಅವರು ಹೇಳಿದರು.
ಫಲಾನುಭವಿಗಳಿಗೆ ಆಹ್ವಾನ: ಮಂಗಳೂರಿನ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಫಲಾನುಭವಿಗಳಿಗೆ ಯೋಜನೆಗಳನ್ನು ಹಸ್ತಾಂತರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಭಾಗವಹಿಸುವಂತೆ ಆಹ್ವಾನ ಕಳುಹಿಸಲಾಗಿದೆ. ಫಲಾನುಭವಿಗಳನ್ನು ಕಡ್ಡಾಯವಾಗಿ ಭಾಗಿಯಾಗುವಂತೆ ಒತ್ತಡ ಹೇರಿಲ್ಲ. ಇಚ್ಚೆಯುಳ್ಳವರು ಆಗಮಿಸಬಹುದು ಎಂದರು.
ಭದ್ರತೆ ಬಗ್ಗೆ ಮಾಹಿತಿ: ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾತನಾಡಿ, ಪ್ರಧಾನಮಂತ್ರಿ ಆಗಮಿಸುವ ಹಿನ್ನೆಲೆಯಲ್ಲಿ ಭದ್ರತೆಗಾಗಿ ಪೊಲೀಸ್ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಸಿಆರ್, ಕೆಎಸ್ಆರ್ಪಿ, ಆರ್ಎಪಿ, ಹೋಮ್ ಗಾರ್ಡ್ಗಳನ್ನು ಭದ್ರತೆಗಾಗಿ ನಿಯೋಜಿಸಲಾಗುತ್ತಿದೆ. ನಾಳೆ ಅವರನ್ನು ನಿಯೋಜಿಸಲಾಗುವುದು ಎಂದು ಮಾಹಿತಿ ಒದಗಿಸಿದರು.
ಇದನ್ನೂ ಓದಿ: ಮೋದಿ ಮಂಗಳೂರು ಭೇಟಿ ಕಾರ್ಯಕ್ರಮದ ಸಮಯ ಬದಲಾವಣೆ: ಶಾಲಾ ಕಾಲೇಜುಗಳಿಗೆ ರಜೆ
ಅವರಿಗೆ ಊಟ, ವಸತಿ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗುವುದು. ಇದರ ಜೊತೆಗೆ ಆಂತರಿಕ ಭದ್ರತಾ ಫೋರ್ಸ್, ಸೀ ಗಾರ್ಡ್ ಫೋರ್ಸ್, ಆ್ಯಂಟಿ ಡ್ರೋನ್ ಆ್ಯಕ್ಷನ್ಗೆ ಗರುಡ ಫೋರ್ಸ್ ಕಾರ್ಯನಿರ್ವಹಿಸಲಿದೆ. ನಾಳೆ ಎಸ್ ಪಿ ಜಿಯವರು ರಿಯಲ್ ಟೈಮ್ ರಿಹರ್ಸಲ್ ನಡೆಸಲಿದ್ದು, ಸಂಜೆ ನಗರದಲ್ಲಿ ಪೊಲೀಸರಿಂದ ರೂಟ್ ಮಾರ್ಚ್ ಇರಲಿದೆ ಎಂದು ಹೇಳಿದರು.