ಮಂಗಳೂರು: ರಂಜಾನ್ ಹಬ್ಬದ ಸಡಗರ ಎಲ್ಲೆಡೆ ತುಂಬಿ ಹೋಗಿದ್ದು, ಹಬ್ಬ ಹತ್ತಿರ ಬರುತ್ತಿದ್ದಂತೆ ಮಾರುಕಟ್ಟೆಗಳಲ್ಲಿ, ಬಟ್ಟೆ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿದೆ.
ಬಡವ, ಶ್ರೀಮಂತರೆನ್ನದೆ ಮುಸ್ಲಿಂ ಬಾಂಧವರು ಒಂದು ತಿಂಗಳಿನಿಂದ ಶ್ರದ್ಧಾ-ಭಕ್ತಿಯಿಂದ ಉಪವಾಸ ಆಚರಿಸಿದ್ದು, ಹಬ್ಬದ ಸಂಭ್ರಮವನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ. ರಂಜಾನ್ ಹಬ್ಬ ನಾಳೆ ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಚಂದ್ರದರ್ಶಕ್ಕಾಗಿ ಕಾಯುತ್ತಿದ್ದಾರೆ.
ರಂಜಾನ್ ಹಬ್ಬವನ್ನು ಸಡಗರದಿಂದ ಆಚರಿಸಲು ಎಲ್ಲಾ ಗ್ರಾಹಕರು ವೈವಿಧ್ಯಮಯ ಉಡುಪುಗಳ ಖರೀದಿಗೆ ಮುಗಿಬಿದ್ದಿದ್ದಾರೆ.