ETV Bharat / state

ಮಂಗಳೂರು ಬೀಚಿನಲ್ಲಿ ಪೊಲೀಸ್ ದಾಳಿ.. ಗಾಂಜಾ ಪ್ರಕರಣ ಪತ್ತೆ, ಹಲವರು ವಶ - ಮಂಗಳೂರು ಬೀಚ್​ ಸುದ್ದಿ, c

ಮಂಗಳೂರು ಬೀಚಿನಲ್ಲಿ ದಾಳಿ ನಡೆಸಿದ ಪೊಲೀಸರು ಅಮಲು ಪದಾರ್ಥ ಸೇವಿಸುತ್ತಿದ್ದ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

Police raid, Police raid on Mangalore beach, Mangalore beach, Mangalore beach news,  ಬೀಚಿನಲ್ಲಿ ಪೊಲೀಸ್ ದಾಳಿ, ಮಂಗಳೂರು ಬೀಚಿನಲ್ಲಿ ಪೊಲೀಸ್ ದಾಳಿ, ಮಂಗಳೂರು ಬೀಚ್​, ಮಂಗಳೂರು ಬೀಚ್​ ಸುದ್ದಿ,
ಮಂಗಳೂರು ಬೀಚಿನಲ್ಲಿ ಪೊಲೀಸ್ ದಾಳಿ
author img

By

Published : Jan 8, 2021, 6:51 AM IST

ಮಂಗಳೂರು; ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರ ಸೂಚನೆಯಂತೆ ನಿನ್ನೆ ಪೊಲೀಸರು ಹಠಾತ್ತನೇ ನಗರದ ಬೀಚ್​ಗಳಲ್ಲಿ ದಾಳಿ ಮಾಡಿ ಅಮಲು ಪದಾರ್ಥ ಸೇವಿಸುತ್ತಿದ್ದವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಂಗಳೂರು ಬೀಚಿನಲ್ಲಿ ಪೊಲೀಸ್ ದಾಳಿ

ಮಂಗಳೂರಿನ ಪಣಂಬೂರು, ಸೋಮೇಶ್ವರ, ತಣ್ಣೀರುಬಾವಿ ಮತ್ತು ಸುರತ್ಕಲ್ ಬೀಚ್​ಗಳಿಗೆ ರಾತ್ರಿ ವೇಳೆ ಏಕಕಾಲದಲ್ಲಿ ದಾಳಿ ಮಾಡಿದ ಪೊಲೀಸರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ 70 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ವೇಳೆ, ಕತ್ತಲಾದರೂ ಬೀಚ್​ಗಳಲ್ಲಿ ಅನಗತ್ಯ ತಿರುಗಾಡುವವರನ್ನು ವಿಚಾರಣೆ ನಡೆಸಲಾಯಿತು. ಈ ವೇಳೆ ಹಲವರಲ್ಲಿ ಮದ್ಯದ ಬಾಟಲಿಗಳು ಸಿಕ್ಕಿದೆ. ಸುಮಾರು 65 ಮಂದಿ ಮದ್ಯ ಸೇವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Police raid, Police raid on Mangalore beach, Mangalore beach, Mangalore beach news,  ಬೀಚಿನಲ್ಲಿ ಪೊಲೀಸ್ ದಾಳಿ, ಮಂಗಳೂರು ಬೀಚಿನಲ್ಲಿ ಪೊಲೀಸ್ ದಾಳಿ, ಮಂಗಳೂರು ಬೀಚ್​, ಮಂಗಳೂರು ಬೀಚ್​ ಸುದ್ದಿ,
ಮಂಗಳೂರು ಬೀಚಿನಲ್ಲಿ ಪೊಲೀಸ್ ದಾಳಿ

ಬೀಚ್​ನಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವರ 17 ಬೈಕ್ ಮತ್ತು 7 ಕಾರುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದರಲ್ಲಿ 12 ಬೈಕ್ ಮತ್ತು 2 ಕಾರುಗಳಲ್ಲಿ ಹಳೆ ಪ್ರಕರಣಗಳು ಬಾಕಿಯಿದೆ. ಹತ್ತಕ್ಕಿಂತ ಹೆಚ್ಚು ಬೈಕ್​ಗಳಿಗೆ 10 ಕ್ಕಿಂತ ಹೆಚ್ಚಿನ ಪ್ರಕರಣಗಳು ಇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೀಚ್​ಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸ್ಥಳೀಯರ ದೂರಿನ ಆಧಾರದಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ಮಾರ್ಗದರ್ಶನದಲ್ಲಿ ಡಿಸಿಪಿ, ಎಸಿಸಿಗಳ ಮೇಲ್ವಿಚಾರಣೆಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್​ಗಳು ತಲಾ 20 ಪೊಲೀಸ್ ಸಿಬ್ಬಂದಿಗಳ‌ ತಂಡ ರಚಿಸಿ ಈ ದಾಳಿ ನಡೆಸಲಾಗಿತ್ತು. ವಶಕ್ಕೆ ತೆಗೆದುಕೊಂಡವರನ್ನು ಮಂಗಳೂರಿನ ಪುರಭವನದ ಸಭಾಂಗಣದಲ್ಲಿ ಕೂರಿಸಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ಎಚ್ಚರಿಕೆ ನೀಡಿದರು.

ದಾಳಿಯ ವೇಳೆಯಲ್ಲಿ ಒಂದು ಗಾಂಜಾ ಪ್ರಕರಣ ಪತ್ತೆಯಾಗಿದೆ. ಗಾಂಜಾಕ್ಕೆ ಚಾಕಲೇಟ್ ಮಿಶ್ರಣ ಮಾಡಿ ಟ್ಯಾಬ್ಲೆಟ್ ರೀತಿ ಮಾಡಿ ಮಾರಾಟ ಮಾಡುತ್ತಿರುವ ಪ್ರಕರಣ ಪತ್ತೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.