ETV Bharat / state

ಅಕ್ರಮ ದನ ಸಾಗಾಟ ಆರೋಪಿಗೆ ಕೊರೊನಾ: ಆರೋಪಿ ಬಂಧಿಸಿದ್ದ ಪೊಲೀಸರು ಕ್ವಾರಂಟೈನ್ - Police in self quarantine who arrested covid positive accused

ದನ ಸಾಗಾಟ ನಡೆಸುತ್ತಿದ್ದ ಆರೋಪಿ ಕೊರೊನಾ ವೈರಸ್​ ತಗುಲಿರುವ ಹಿನ್ನೆಲೆ ಆತನನ್ನು ಬಂಧಿಸಿದ್ದ ಪೊಲೀಸರು ಸ್ವಯಂ ಕ್ವಾರಂಟೈನ್ ಆಗುವಂತಹ ಅನಿವಾರ್ಯತೆ ಎದುರಾಗಿದೆ.

police-in-self-quarantine-who-arrested-covid-positive-accused
ಅಕ್ರಮ ದನ ಸಾಗಾಟ ಆರೋಪಿಗೆ ಕೊರೊನಾ
author img

By

Published : Jul 18, 2020, 3:13 AM IST

ಸುಳ್ಯ: ಅಕ್ರಮ ದನ ಸಾಗಾಟ ನಡೆಸುತ್ತಿರುವುದನ್ನ ತಡೆದ ಪೊಲೀಸರ ಮೇಲೆಯೇ ಪಿಕಪ್​ ವಾಹನ ಹತ್ತಿಸಲು ಮುಂದಾಗಿ ಬಂಧಿತನಾಗಿದ್ದ ಆರೋಪಿಗೆ ಕೊರೊನಾ ದೃಢಪಟ್ಟಿದ್ದು, ಬಂಧನ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸರು ಸ್ವಯಂ ಕ್ವಾರಂಟೈನ್ ಆಗಿದ್ದಾರೆ.

ಜುಲೈ 14ರಂದು ಸುಳ್ಯದ ಕಸಬಾ ಗ್ರಾಮದ ಜ್ಯೋತಿ ವೃತ್ತದ ಸಮೀಪ ಅಕ್ರಮ ದನ ಸಾಗಾಟ ಪ್ರಕರಣದಲ್ಲಿ ಬಂಧಿತನಾಗಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಆರೋಪಿಯು ಮೂಲತಃ ಕೊಡಗು ಜಿಲ್ಲೆಯವನಾಗಿದ್ದು, ಆತನಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸುಳ್ಯದ ಪೊಲೀಸ್ ಠಾಣಾಧಿಕಾರಿ ಸೇರಿದಂತೆ ಎಲ್ಲಾ ಪೊಲೀಸರು ಸ್ವಯಂ ಕ್ವಾರಂಟೈನ್ ಆಗಿದ್ದಾರೆಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.