ETV Bharat / state

ಯುವಕರಿಂದ ಸರ್ಕಾರಿ ಬಸ್ ತಡೆದು ಗಲಾಟೆ ಪ್ರಕರಣ.. ಧರ್ಮಸ್ಥಳ ಪೊಲೀಸರಿಂದ ಮೂವರ ಬಂಧನ

ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ಸರ್ಕಾರಿ ಬಸ್​ ನಿಲ್ಲಿಸಿ ಗಲಾಟೆ ಮಾಡಿದ ಯುವಕರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.

ಬಸ್ ತಡೆದು ಗಲಾಟೆ  ಮಾಡಿದ ದೃಶ್ಯ
ಬಸ್ ತಡೆದು ಗಲಾಟೆ ಮಾಡಿದ ದೃಶ್ಯ
author img

By

Published : Jun 19, 2023, 12:14 PM IST

Updated : Jun 19, 2023, 12:29 PM IST

ಬೆಳ್ತಂಗಡಿ(ದಕ್ಷಿಣ ಕನ್ನಡ): ವಿದ್ಯಾರ್ಥಿಗಳನ್ನು ಬಸ್ಸಿನಲ್ಲಿ ಮುಂದೆ ಹೋಗಿ ಎಂದು ಕಂಡಕ್ಟರ್ ಮುಂದೆ ತಳ್ಳಿದ ಎಂಬ ಕಾರಣಕ್ಕಾಗಿ ಬಸ್ ನಿಲ್ಲಿಸಿ ದಾಂಧಲೆ ಮಾಡಿದ ಘಟನೆ ಜೂ. 17 ರಂದು ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ನಡೆದಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜೂನ್ 18 ರಂದು ಕಂಡಕ್ಟರ್ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಗಳೂರಿನಿಂದ ಮೂಡಿಗೆರೆಗೆ ಸಂಚರಿಸುವ ಸರ್ಕಾರಿ ಬಸ್ಸಿಗೆ ಉಜಿರೆಯಲ್ಲಿ ವಿದ್ಯಾರ್ಥಿಗಳು ಹತ್ತಿದ್ದಾರೆ. ಈ ವೇಳೆ ನಿರ್ವಾಹಕ ವಿದ್ಯಾರ್ಥಿಗಳನ್ನು ಬಸ್ ಒಳಗೆ ಮುಂದೆ ಹೋಗಲು ಕೈ ಹಿಡಿದು ಮುಂದೆ ಕಳುಹಿಸುವ ಸಂದರ್ಭ ಬಸ್ ಕಂಡಕ್ಟರ್ ಹಾಗೂ ಕೆಲವು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಅದಲ್ಲದೇ ಈ ವಿಚಾರವನ್ನು ವಿದ್ಯಾರ್ಥಿಗಳು ಚಾರ್ಮಾಡಿಯ ಯುವಕರಿಗೆ ತಿಳಿಸಿ ಬಸ್ ಅಡ್ಡ ಹಾಕುವಂತೆ ಸೂಚಿಸಿದ್ದಾರೆ. ಈ ವಿಚಾರವನ್ನು ಬಸ್ಸಿನಲ್ಲಿದ್ದವರು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಧರ್ಮಸ್ಥಳ ಠಾಣಾ ಇನ್ಸ್​​​​ಪೆಕ್ಟರ್ ಅನಿಲ್ ಕುಮಾರ್ ಡಿ ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ಬಸ್ ನಿಲ್ಲಿಸುವಂತೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ.

ಅವರು ಚೆಕ್ ಪೋಸ್ಟ್​ನಲ್ಲಿ ಬಸ್ ತಡೆದು ಹೆಚ್ಚಿನ ಗಲಾಟೆ ಆಗದಂತೆ ನೋಡಿಕೊಂಡಿದ್ದರು. ಆದರೆ, ಅಲ್ಲಿಗೆ ಬಂದ ಯುವಕರ ತಂಡ ಏಕಾಏಕಿ ಕಂಡೆಕ್ಟರ್ ಬಳಿ​ ಗಲಾಟೆ ಮಾಡಿದ್ದಾರೆ. ಈ ವೇಳೆ, ಕಂಡಕ್ಟರ್ ಪರವಾಗಿ ಮಾತನಾಡಿದ ಬಸ್ ಪ್ರಯಾಣಿಕರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದು. ಅದಲ್ಲದೇ ವಿಡಿಯೋ ಮಾಡುತಿದ್ದ ವ್ಯಕ್ತಿಯೊಬ್ಬರಿಗೆ ಹಲ್ಲೆ ಮಾಡಿದ್ದರು.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಚಿಕ್ಕಮಗಳೂರು ವಿಭಾಗದ ಮೂಡಿಗೆರೆ ಘಟಕದ ಡಿಪೋಗೆ ಸೇರಿದ ಸರಕಾರಿ ಬಸ್ ಕಂಡಕ್ಟರ್ ಶಿವಕುಮಾರ್.ಕೆ.ಎಮ್ ಧರ್ಮಸ್ಥಳ ಪೊಲೀಸ್ ಠಾಣೆಗೆ ಬಂದು ದುರ್ವರ್ತನೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಸಂಬಂಧ ಪ್ರಕರಣ ದಾಖಲಾಯಿಸಿದ್ದಾರೆ. ಅದರಂತೆ ಅಪರಿಚಿತರ ಮೇಲೆ ಧರ್ಮಸ್ಥಳ ಠಾಣೆಯಲ್ಲಿ ಸೆಕ್ಷನ್​ 143. 147. 353. 341. 504. 506 ಜೊತೆಗೆ 149 ಐಪಿಸಿ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.

ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಕರಣದಲ್ಲಿ ಭಾಗಿಯಾದ ಮೂರು ಜ‌ನ ಆರೋಪಿಗಳಾದ ಮಹಮ್ಮದ್ ಶಬೀರ್ (21), ಮಹಮ್ಮದ್ ಮಹಾರೂಫ್ (22), ಮಹಮ್ಮದ್ ಮುಬಶೀರ್ (23) ಎಂಬವರನ್ನು ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅನಿಲ್‌ ಕುಮಾರ್ ನೇತೃತ್ವದ ತಂಡ ಜೂನ್ 18 ರಂದು ರಾತ್ರಿ ಬಂಧಿಸಿದ್ದಾರೆ. ಇನ್ನೂ ಹಲವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದು ಧರ್ಮಸ್ಥಳ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಸ್ನೇಹಿತರ ಜಾಲಿ ರೈಡ್​ಗೆ ಫುಡ್ ಡೆಲಿವರಿ ಬಾಯ್​​ ಬಲಿ.. ಅಪಘಾತ ಎಸಗಿ ಮೃತದೇಹ 100 ಮೀಟರ್​ ಎಳೆದೊಯ್ದರು!

Last Updated : Jun 19, 2023, 12:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.