ಮಂಗಳೂರು: ಪಿಲಿಕುಳ ಮೃಗಾಲಯದ ಹಳೇ ತಲೆಮಾರಿನ ಹುಲಿ 21 ವರ್ಷ ಪ್ರಾಯದ ವಿಕ್ರಮ್ ನಿನ್ನೆ ಸಾವನ್ನಪ್ಪಿದೆ.
ವಿಕ್ರಮ್ ಹುಲಿಯನ್ನು 4 ವರ್ಷದ ಮರಿಯಾಗಿದ್ದ ಸಂದರ್ಭದಲ್ಲಿ 2003ರಲ್ಲಿ ಶಿವಮೊಗ್ಗ ಜಿಲ್ಲೆಯ ತ್ಯಾವರೆಕೊಪ್ಪ ಸಫಾರಿಯಿಂದ ತರಲಾಗಿತ್ತು. ಈ ಹುಲಿಗೆ 10 ಮರಿಗಳಿವೆ. ಕದಂಬ, ಕೃಷ್ಣ, ವಿನಯ, ಒಲಿವರ್, ಅಕ್ಷಯ, ಮಂಜು, ಅಮರ್, ಅಕ್ಬರ್, ಆಂಟನಿ ಮತ್ತು ನಿಷ ಎಂಬ ಮರಿಗಳಿವೆ. ಅವುಗಳನ್ನು ದೇಶದ ವಿವಿಧ ಮೃಗಾಲಯಗಳಾದ ರಾಜಸ್ಥಾನ, ಗುಜರಾತ್, ತೆಲಂಗಾಣ, ಆಂಧ್ರ ಪ್ರದೇಶ, ಮೈಸೂರು ಮೃಗಾಲಯಗಳಿಗೆ ಕಳುಹಿಸಿಕೊಡಲಾಗಿತ್ತು.
ಸಂದರ್ಶಕರಿಗೆ ಸುಲಭವಾಗಿ ಸಿಗುತ್ತಿದ್ದ ವಿಕ್ರಮ್ ಸುಮಾರು 2 ತಿಂಗಳುಗಳಿಂದ ಪಶುವೈಧ್ಯಾಧಿಕಾರಿಗಳ ಚಿಕಿತ್ಸೆಯಲ್ಲಿ ವಿಶ್ರಾಂತಿ ಪಡೆಯುತ್ತಿತ್ತು. ವಯೋ ಸಹಜವಾದ ದೃಷ್ಟಿ ಹೀನತೆ, ಸಂಧಿವಾತ ಮತ್ತು ಮೂತ್ರಪಿಂಡಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಸುಮಾರು ಒಂದು ವಾರದಿಂದ ಆಹಾರ ತ್ಯಜಿಸಿದ್ದ ವಿಕ್ರಮ್ಗೆ ಡ್ರಿಪ್ಸ್, ಆ್ಯಂಟಿಬಯೋಟಿಕ್ ಮತ್ತು ಇತರ ಚಿಕಿತ್ಸೆ ನೀಡಲಾಗುತ್ತಿತ್ತು.