ETV Bharat / state

ಖಾಸಗಿ ಬಸ್​ನಲ್ಲಿ ವಿದ್ಯಾರ್ಥಿಗಳ ಅಪಾಯಕಾರಿ ಪ್ರಯಾಣ: ಫೋಟೋ ವೈರಲ್ - ವಿದ್ಯಾರ್ಥಿಗಳ ಅಪಾಯಕಾರಿ ಪ್ರಯಾಣದ ಫೋಟೋ ವೈರಲ್

ಖಾಸಗಿ ಬಸ್​ ಮೂಡುಬಿದಿರೆಯಿಂದ ಬೆಳ್ತಂಗಡಿಗೆ ಆಗಮಿಸುವಾಗ ವೇಣೂರಿನ ವಿದ್ಯಾರ್ಥಿಗಳು ಈ ರೀತಿ‌ ನೇತಾಡಿಕೊಂಡು ಅಪಾಯಕಾರಿ ರೀತಿಯಲ್ಲಿ ಪ್ರಯಾಣ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಈ ಕುರಿತು ನಿಖರವಾದ ಮಾಹಿತಿ ತಿಳಿದು ಬರಬೇಕಿದೆ.

Photo of students Dangerous travel in a private bus goes viral
ವಿದ್ಯಾರ್ಥಿಗಳ ಅಪಾಯಕಾರಿ ಪ್ರಯಾಣದ ಫೋಟೋ ವೈರಲ್
author img

By

Published : Mar 18, 2021, 7:53 PM IST

ಬೆಳ್ತಂಗಡಿ: ಮೂಡುಬಿದಿರೆ -ಬೆಳ್ತಂಗಡಿ ನಡುವೆ ಸಂಚರಿಸುವ ಖಾಸಗಿ ಬಸ್​ನ ಫುಟ್​ ಬೋರ್ಡ್​ನಲ್ಲಿ ವಿದ್ಯಾರ್ಥಿಗಳು ಅಪಾಯಕಾರಿ ರೀತಿಯಲ್ಲಿ ನೇತಾಡುತ್ತಾ ಪ್ರಯಾಣ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಳ್ತಂಗಡಿ-ಮೂಡುಬಿದಿರೆ ಮಾತ್ರವಲ್ಲದೆ ತಾಲೂಕಿನ ಬಹುತೇಕ ಕಡೆಗಳಲ್ಲಿ ವಿದ್ಯಾರ್ಥಿಗಳು ಅನಿವಾರ್ಯವಾಗಿ ಫುಟ್​ಬೋರ್ಡ್​ನಲ್ಲಿ ನಿಂತು ಪ್ರಯಾಣಿಸುವುದು ಸರ್ವೇ ಸಾಮಾನ್ಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಸ್​ಗಳ ಕೊರತೆ, ಬಸ್​ ಇದ್ದರೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಮತ್ತು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜಿಗೆ ತಲುಪಬೇಕಾದ ಕಾರಣದಿಂದ ಈ ರೀತಿ ಫುಟ್​ಬೋರ್ಡ್​ನಲ್ಲಿ ನೇತಾಡಿಕೊಂಡು ಹೋಗುತ್ತಾರೆ. ಆದರೆ, ಈ ಪೋಟೋದಲ್ಲಿ ಕಾಣುವ ರೀತಿ ವಿದ್ಯಾರ್ಥಿಗಳು ನೇತಾಡಿಕೊಂಡು ಹೋಗಿರುವುದು ನಿಜಕ್ಕೂ ಅಪಾಯಕಾರಿ.

ಇದನ್ನೂ ಓದಿ: ಭಟ್ಕಳ; ಟಿಪ್ಪರ್ ಲಾರಿಗಾಗಿ ಪೊಲೀಸ್​ ಠಾಣೆ ಆವರಣ ಶೋಧಿಸಲು ಕೋರ್ಟ್ ಆದೇಶ

ಫೋಟೋ ಗಮನಿಸಿದ ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದು, ಪ್ರಯಾಣದ ವೇಳೆ ವಿದ್ಯಾರ್ಥಿಗಳಿಗೆ ಏನಾದರು ಅಪಾಯ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸುತ್ತಿದ್ದಾರೆ. ಕೋವಿಡ್​ ಸಂದರ್ಭದಲ್ಲಿ ಈ ರೀತಿ ಜನರನ್ನು ತುಂಬಿಸಿಕೊಂಡು ಹೋಗಿರುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಹೀಗಾಗಿ, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಒಂದು ವೇಳೆ ಬಸ್​ಗಳ ಕೊರತೆಯಿದ್ದರೆ, ಹೆಚ್ಚುವರಿ ಬಸ್​ ಒದಗಿಸಿ, ಮುಂದಾಗುವ ಅಪಾಯವನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.