ETV Bharat / state

ಸ್ವತಃ ವಾಹನ ಚಲಾಯಿಸಿ ಕಸ ಕೊಂಡೊಯ್ತಾರೆ ಪೆರುವಾಯಿ ಗ್ರಾ.ಪಂ ಉಪಾಧ್ಯಕ್ಷೆ

ಪೆರುವಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನೆಫಿಸಾ ತಸ್ಲಿ ಸ್ವತಃ ವಾಹನ ಚಲಾಯಿಸಿ ಮನೆ ಮನೆಗೆ ಹೋಗಿ ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ.

peruvayi  gram panchayat Vice President collecting garbage from houses
ವಾಹನ ಚಲಾಯಿಸಿ ಕಸ ಕೊಂಡೊಯ್ದ ಪೆರುವಾಯಿ ಗ್ರಾ.ಪಂ ಉಪಾಧ್ಯಕ್ಷೆ ನೆಫೀಸಾ ತಸ್ಲಿ
author img

By

Published : May 24, 2022, 11:27 AM IST

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶದ ಪೆರುವಾಯಿ ಗ್ರಾಮ ಪಂಚಾಯತ್ 8 ಸದಸ್ಯರಿರುವ ಸಣ್ಣ ಪಂಚಾಯತ್. ಉಪಾಧ್ಯಕ್ಷೆ ನೆಫಿಸಾ ತಸ್ಲಿ (29) ಅವರು ಕಸ ಕೊಂಡೊಯ್ಯುವ ವಾಹನವನ್ನು ಸ್ವತಃ ತಾವೇ ಡ್ರೈವ್ ಮಾಡಿಕೊಂಡು ಮನೆ, ಅಂಗಡಿಗಳಿಗೆ ತೆರಳಿ ತ್ಯಾಜ್ಯ ಸಂಗ್ರಹಿಸುವ ಕಾರ್ಯಕ್ಕೆ ಪ್ರೇರಣೆ ನೀಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.

ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛ ವಾಹಿನಿಗೆ ಚಾಲನೆ ನೀಡಿದ್ದೇನೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 600 ಮನೆಗಳಿದ್ದು, ಪ್ರತಿ ಮನೆಯಿಂದ ವಾರಕ್ಕೆ ಎರಡು ಬಾರಿಯಾದರೂ ತ್ಯಾಜ್ಯ ಸಂಗ್ರಹವಾಗುವಂತೆ ಮಾರ್ಗಸೂಚಿ ಸಿದ್ಧಪಡಿಸಿದ್ದೇವೆ. ನಾಲ್ಕು ತಿಂಗಳ ಹಿಂದೆ ಗ್ರಾಮ ಪಂಚಾಯಿತಿಗೆ ವಾಹನ ಬಂದಿತ್ತು. ಗ್ರಾಮದ ಮಹಿಳೆಯರು ಸಮಾಜದಲ್ಲಿ ಮುಂದೆ ಬರಬೇಕು ಎಂಬ ಉದ್ದೇಶದಿಂದ ಮಹಿಳಾ ಚಾಲಕರನ್ನು ನೇಮಿಸಲು ತೀರ್ಮಾನಿಸಲಾಗಿತ್ತು.

ಅದರಂತೆ ನಿಯೋಜಿತರಾಗಿರುವ ಚಾಲಕಿ ಇನ್ನೂ ಸಮರ್ಪಕ ತರಬೇತಿ ಪಡೆದಿರಲಿಲ್ಲ. ನಾನು ಕಾರು ಚಲಾಯಿಸಿಕೊಂಡು ಕಚೇರಿಗೆ ಬರುತ್ತೇನೆ, ಡ್ರೈವಿಂಗ್ ನನಗೆ ಗೊತ್ತಿರುವ ಕಾರಣ ನಾನೇ ಏಕೆ ಇದನ್ನು ನಿರ್ವಹಿಸಬಾರದು ಎಂದು ಯೋಚಿಸಿ ಪಿಡಿಒ ಮತ್ತು ಇತರೆ ಸದಸ್ಯರ ಪ್ರೋತ್ಸಾಹದಿಂದ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಗ್ರಾ.ಪಂ ಉಪಾಧ್ಯಕ್ಷೆ ನೆಫಿಸಾ ತಸ್ಲಿ ತಿಳಿಸಿದರು.

ಇದನ್ನೂ ಓದಿ: ಪರಿಷತ್ ಚುನಾವಣೆ​​: ಪಟ್ಟಿ ಪ್ರಕಟವಾದ ಬೆನ್ನಲ್ಲೇ ಕಾಂಗ್ರೆಸ್​​ನಲ್ಲಿ ಭುಗಿಲೆದ್ದ ಅಸಮಾಧಾನ

ಲಘು ಮೋಟಾರು ವಾಹನ ಹಾಗೂ ಭಾರಿ ವಾಹನಗಳ ಚಾಲನಾ ಪರವಾನಗಿಯನ್ನು ಹೊಂದಿರುವ ಇವರು, ಪ್ರಥಮ ಬಾರಿ ಚುನಾಯಿತ ಪ್ರತಿನಿಧಿಯಾಗಿದ್ದಾರೆ. ಸದಸ್ಯೆ ಆಗುವ ಮೊದಲೇ ಅವರು ಪಂಚಾಯಿತಿಯಲ್ಲಿ ನಡೆಯುತ್ತಿದ್ದ ಸ್ವಚ್ಛತಾ ಆಂದೋಲನಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.