ETV Bharat / state

ಪಾಕ್​ ಪರ ಘೋಷಣೆ ಕೂಗಿರುವ ಸಂಘ ಪರಿವಾರದವರನ್ನು ಇನ್ನೂ ಬಂಧಿಸಿಲ್ಲ: ಸಿಎಫ್ಐ - pro pakistan slogan in mangalore

ಪಾಕಿಸ್ತಾನ ಪರ ಘೋಷಣೆ ಕೂಗಿರುವರನ್ನ ಬಿಟ್ಟು ಅಮಾಯಕರನ್ನು ಬಂಧಿಸಿರುವ ಪೊಲೀಸರು ಅವರನ್ನ ಇಂದಿಗೂ ಬಿಡುಗಡೆ ಮಾಡಿಲ್ಲ ಎಂದು ಸಿಎಫ್ಐ ಜಿಲ್ಲಾಧ್ಯಕ್ಷ ಹಸನ್ ಸಿರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

outrage-to-arrest-of-sangh-parivar-activist-who-shouted-pro-pakistan-slogan
ಸಿಎಫ್ಐ ಪ್ರತಿಭಟನೆ
author img

By

Published : Jan 4, 2021, 10:10 PM IST

ಮಂಗಳೂರು: ಗ್ರಾ.ಪಂ ಚುನಾವಣೆಯ ವಿಜಯೋತ್ಸವ ಸಂದರ್ಭದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಸಂಘ ಪರಿವಾರದ ಕಾರ್ಯಕರ್ತನನ್ನು ತಕ್ಷಣ ಬಂಧಿಸಬೇಕೆಂದು‌ ಸಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಬಲ್ಮಠ ಬಳಿರುವ ಡಾ‌.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ‌ ಪ್ರತಿಭಟಿಸಿದ ಅವರು, ಈ ಸಂದರ್ಭದಲ್ಲಿ ಬಿಜೆಪಿ ಬಾವುಟವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಸಿಎಫ್ಐ ಪ್ರತಿಭಟನೆ

ಓದಿ: ಮಗನ ಮಾತೇ ಅಂತಿಮವಾದರೆ ಪಕ್ಷಕ್ಕಾಗಿ ದುಡಿದವರ ಪಾಡೇನು?: ಸಿಎಂ ಸಭೆಯಲ್ಲಿ ಯತ್ನಾಳ್, ಕತ್ತಿ ಕಿಡಿ!

ಪ್ರತಿಭಟನಾಕಾರರನ್ನುದ್ದೇಶಿಸಿ ಸಿಎಫ್ಐ ಜಿಲ್ಲಾಧ್ಯಕ್ಷ ಹಸನ್ ಸಿರಾಜ್ ಮಾತನಾಡಿ, ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆಂದು ಅಮಾಯಕರನ್ನು ಪೊಲೀಸರು ಬಂಧಿಸಿ ಇಂದಿಗೂ ಬಿಡುಗಡೆ ಮಾಡಿಲ್ಲ. ಮಾಧ್ಯಮ ಹಾಗೂ ಬಿಜೆಪಿಯವರ ಇಲ್ಲಸಲ್ಲದ ಹೇಳಿಕೆಯಿಂದ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಆದರೆ, ನಿಜವಾಗಿಯೂ ಬಿಜೆಪಿ ಕಾರ್ಯಕರ್ತನೋರ್ವನು ಈ ಘೋಷಣೆಯನ್ನು ಕೂಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದರೂ, ಇಲ್ಲಿಯವರೆಗೆ ಆತನ ಬಂಧನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರಿಗೆ ಪಕ್ಷದ ಒತ್ತಡ ಇರಬಹುದು. ಆದರೆ, ಅವರು ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಬೇಕಾಗಿದೆ. ಪೊಲೀಸರಿಗೆ ರಾಜಕೀಯ ಒತ್ತಡವಿದ್ದಲ್ಲಿ ಸಿಎಫ್ಐ ನಾಯಕರಲ್ಲಿ ಹೇಳಿ. ನಾವು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು‌ ಸದಾ ಸಿದ್ಧರಿದ್ದೇವೆ. ಆದರೆ ದ.ಕ.ಜಿಲ್ಲೆಯಲ್ಲಿ ನಡೆಯುವ ಈ ದ್ವಿಮುಖ‌ ನೀತಿಯನ್ನು ಸಿಎಫ್ಐ ಖಂಡಿಸುತ್ತದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.