ETV Bharat / state

ಪೊಲೀಸ್​ನಂತೆಯೇ ತಪಾಸಣೆ ನಡೆಸುವ ವ್ಯಕ್ತಿ... ಕಡಬ ಜನರ ಆಕ್ರೋಶ

ವ್ಯಕ್ತಿಯೋರ್ವ ಪೊಲೀಸ್ ಇಲಾಖೆಯ ಸಿಬ್ಬಂದಿ ಸೋಗಿನಲ್ಲಿ ಲಾಠಿ ಹಿಡಿದು ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಆಗಮಿಸುವ ಪ್ರವಾಸಿಗರು ಹಾಗೂ ಸ್ಥಳೀಯ ವಾಹನ ಸವಾರರೊಂದಿಗೆ ಒರಟಾಗಿ ವರ್ತಿಸುತ್ತಿದ್ದಾನೆ. ಈತನ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

kadaba
ಕಡಬ
author img

By

Published : Jan 20, 2021, 8:12 PM IST

ಕಡಬ(ದ.ಕ): ವಾಹನಗಳನ್ನು ತಪಾಸಣೆ ನಡೆಸಿ ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸುವುದು ಪೊಲೀಸರ ಕರ್ತವ್ಯ. ಆದರೆ ಕಡಬದ ಮರ್ದಾಳ ಎಂಬಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಪಡದ ಖಾಸಗಿ ವ್ಯಕ್ತಿಯೋರ್ವ ಲಾಠಿ ಬೀಸಿ ವಾಹನಗಳನ್ನು ಅಡ್ಡಗಟ್ಟಿ ನಿಲ್ಲಿಸುತ್ತಿದ್ದು, ವಾಹನ ಸವಾರರಲ್ಲಿ ಹಲವು ಅನುಮಾನಕ್ಕೆ ಕಾರಣವಾಗಿದೆ.

ಪೊಲೀಸ್​ನಂತೆಯೇ ತಪಾಸಣೆ ನಡೆಸುವ ವ್ಯಕ್ತಿ

ಇಂದು ಸಾಯಂಕಾಲ ಕಡಬ ತಾಲೂಕಿನ ಮರ್ದಾಳ ಸಮೀಪ ಕರ್ಮಾಯಿ ಕ್ರಾಸ್​ನಲ್ಲಿ ಪೊಲೀಸರ ಜೊತೆಗೆ ಇಂಟರ್ ಸೆಪ್ಟರ್ ವಾಹನ ಇರುವಾಗಲೇ ಲಾಠಿ ಹಿಡಿದು ವಾಹನಗಳನ್ನು ಅಡ್ಡಗಟ್ಟುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈತನನ್ನು ಕಡಬದ ವಾಹನ ಚಾಲಕ ಲೋಕೇಶ್ ಎಂದು ಹೇಳಲಾಗುತ್ತಿದೆ. ಪೊಲೀಸ್ ಇಲಾಖೆಯ ಸಿಬ್ಬಂದಿಯಂತೆ ಲಾಠಿ ಹಿಡಿದು ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಆಗಮಿಸುವ ಪ್ರವಾಸಿಗರು ಹಾಗೂ ಸ್ಥಳೀಯ ವಾಹನ ಸವಾರರೊಂದಿಗೆ ಒರಟಾಗಿ ವರ್ತಿಸುವ ಈತನ ನಡೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ಗ್ರಾಪಂ ಚುನಾವಣೆಯಲ್ಲಿ ಬಿಜೆಪಿಯಿಂದ ಅಕ್ರಮ: ವಸಂತ ಬಂಗೇರ ಆರೋಪ

ಈಗಾಗಲೇ ಕಡಬ ಪೊಲೀಸ್ ಠಾಣೆಯನ್ನು ಮಾದರಿ ಠಾಣೆಯನ್ನಾಗಿ ಮಾಡಲು ಶ್ರಮಿಸುತ್ತಿರುವ ಕಡಬ ಎಸ್​​ಐ ರುಕ್ಮ ನಾಯ್ಕ್ ಅವರ ಪ್ರಯತ್ನಕ್ಕೆ ಈ ಘಟನೆ ಸೇರಿದಂತೆ ಕಡಬದಲ್ಲಿ ಕೆಲವು ಪೊಲೀಸ್ ಸಿಬ್ಬಂದಿ ಕಪ್ಪುಚುಕ್ಕೆ ತರುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಮಾತು ಕೇಳಿ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.