ETV Bharat / state

ನಮ್ಮ ದೇಶಕ್ಕೆ ಜಾತ್ಯತೀತತೆ ಅವಶ್ಯಕತೆ ಇಲ್ಲ: ಕಲ್ಲಡ್ಕ ಪ್ರಭಾಕರ ಭಟ್ ಅಭಿಮತ - ಮಂಗಳೂರಿನ ರಾಮಕೃಷ್ಣ ‌ಮಠ

ನಮ್ಮ ದೇಶಕ್ಕೆ ಜಾತ್ಯತೀತತೆ ಅವಶ್ಯಕತೆ ಇಲ್ಲ ಎಂದು ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮಂಗಳೂರಿನಲ್ಲಿ ಪ್ರತಿಪಾದಿಸಿದ್ರು.

ನಮ್ಮ ದೇಶಕ್ಕೆ ಜಾತ್ಯಾತೀತತೆ ಅವಶ್ಯಕತೆ ಇಲ್ಲ..!
author img

By

Published : Sep 11, 2019, 9:25 PM IST

ಮಂಗಳೂರು: ಕಳೆದ 70 ವರ್ಷಗಳಲ್ಲಿ 'ಜಾತ್ಯತೀತತೆ' ಎಂಬ ಪದ ಇಡೀ ದೃಷ್ಟಿಕೋನವನ್ನೇ ಬದಲಾಯಿಸಿದೆ. ನಮ್ಮ ದೇಶಕ್ಕೆ ಜಾತ್ಯಾತೀತತೆ ಅವಶ್ಯಕತೆ ಇಲ್ಲ ಎಂದು ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

ಮಂಗಳೂರಿನ ರಾಮಕೃಷ್ಣ ‌ಮಠ ಆಯೋಜಿಸಿದ ಸ್ವಾಮಿ ವಿವೇಕಾನಂದರ ಶಿಕಾಗೋ ಭಾಷಣದ 125 ನೇ ವರ್ಷಾಚಾರಣೆಯ ಪ್ರಯುಕ್ತ ಸ್ವಚ್ಛ ಭಾರತ್, ಶ್ರೇಷ್ಠ ಭಾರತ್ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜಾತ್ಯಾತೀತತೆ ಎಂದರೆ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವುದು. ನಮ್ಮ ದೇಶದಲ್ಲಿ ಮೊದಲಿನಿಂದಲೂ ಅದನ್ನೇ ಮಾಡಲಾಗಿದೆ. ಪಾರ್ಸಿಗಳು ಇಲ್ಲಿ ಬಂದಾಗ ನಾವು ಅವಕಾಶ ಕೊಟ್ಟೆವು. ಅವರ ಜನಸಂಖ್ಯೆ 63 ಸಾವಿರ ಇದ್ದರೂ ಅವರು ಅಲ್ಪಸಂಖ್ಯಾತ ಸ್ಥಾನಮಾನ ಕೇಳಿಲ್ಲ ಎಂದ್ರು.

'ನಮ್ಮ ದೇಶಕ್ಕೆ ಜಾತ್ಯಾತೀತತೆ ಅವಶ್ಯಕತೆ ಇಲ್ಲ'- ಕಲ್ಲಡ್ಕ ಪ್ರಭಾಕರ ಭಟ್

ನಮ್ಮ ದೇಶ ಯಾವತ್ತೂ ಜಾತ್ಯಾತೀತ ವಿರೋಧಿ ಆಗಿರಲಿಲ್ಲ. ಕಳೆದ 70 ವರ್ಷಗಳಿಂದ ಹಿಂದೂ ಸಮಾಜ ಸೋತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

ಕಾರ್ಯಕ್ರಮದಲ್ಲಿ ರಾಮಕೃಷ್ಣ ‌ಮಿಷನ್ ಕಾರ್ಯದರ್ಶಿ ಸ್ವಾಮಿ ಜಿತಕಮನಂದಾಜಿ, ರಾಮಕೃಷ್ಣ ಮಠದ ಹೈದರಾಬಾದ್​ನ ಸ್ವಾಮಿ ಬುದ್ದಿದನಂದಾಜಿ, ಮಾಜಿ ವಿಧಾನಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಪರಿಸರವಾದಿ ದಿನೇಶ್ ಹೊಳ್ಳ ಉಪಸ್ಥಿತರಿದ್ದರು.

Intro:ಮಂಗಳೂರು: ಕಳೆದ 70 ವರ್ಷಗಳಲ್ಲಿ ಜಾತ್ಯಾತೀತತೆ ಎಂಬ ಪದ ಇಡೀ ದೃಷ್ಟಿಕೋನ ಬದಲಾಯಿಸಿದೆ. ನಮ್ಮ ದೇಶಕ್ಕೆ ಜಾತ್ಯಾತೀತತೆ ಅವಶ್ಯಕತೆ ಇಲ್ಲ ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು ‌

Body:ಮಂಗಳೂರಿನ ರಾಮಕೃಷ್ಣ ‌ಮಠ ಆಯೋಜಿಸಿದ ಸ್ವಾಮಿ ವಿವೇಕಾನಂದರ ಶಿಕಾಗೋ ಭಾಷಣದ 125 ನೇ ವರ್ಷಾಚಾರಣೆಯ ಪ್ರಯುಕ್ತ ಸ್ವಚ್ಚ ಭಾರತ್, ಶ್ರೇಷ್ಠ ಭಾರತ್ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಜಾತ್ಯಾತೀತತೆ ಎಂದರೆ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವುದು. ನಮ್ಮ ದೇಶದಲ್ಲಿ ಮೊದಲಿನಿಂದಲೂ ಅದನ್ನೆ ಮಾಡಲಾಗಿದೆ. ಪಾರ್ಶಿಯರು ಇಲ್ಲಿ ಬಂದಾಗ ನಾವು ಅವಕಾಶ ಕೊಟ್ಟೆವು. ಅವರ ಸಂಖ್ಯೆ 63 ಸಾವಿರ ಇದ್ದರೂ ಅವರು ಅಲ್ಪಸಂಖ್ಯಾತ ಸ್ಥಾನಮಾನ ಕೇಳಿಲ್ಲ. ನಮ್ಮ ದೇಶ ಯಾವತ್ತೂ ಜಾತ್ಯಾತೀತ ವಿರೋಧಿ ಆಗಿರಲಿಲ್ಲ. ಕಳೆದ 70 ವರ್ಷಗಳಿಂದ ಹಿಂದೂ ಸಮಾಜ ಸೋತಿದೆ ಎಂದರು.
ನಾವೆಲ್ಲರೂ ಒಂದೇ ದೇವರ ಮಕ್ಕಳೆಂದು ಸಂದೇಶ ನೀಡಿದವರು ವಿವೇಕಾನಂದರು, ಭಗತ್ ಸಿಂಗ್ ರಂತಹ ಸಾತಂತ್ರ್ಯ ಸೇನಾನಿಗಳಿಗೆ ಪ್ರೇರಕರಾಗಿದ್ದವರು, ಸಮಸ್ಯೆಗೆ ಅಂಜಿ ಓಡಬೇಡಿ, ಸಮಸ್ಯೆಯನ್ನು ಎದುರಿಸಿ ಎಂದು ಚಿಂತನೆ ನೀಡಿದವರು ವಿವೇಕಾನಂದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಮಕೃಷ್ಣ ‌ಮಿಷನ್ ಕಾರ್ಯದರ್ಶಿ ಸ್ವಾಮಿ ಜಿತಕಮನಂದಾಜಿ, ರಾಮಕೃಷ್ಣ ಮಠದ ಹೈದರಾಬಾದ್ ನ ಸ್ವಾಮಿ ಬುದ್ದಿದನಂದಾಜಿ, ಮಾಜಿ ವಿಧಾನಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಪರಿಸರವಾದಿ ದಿನೇಶ್ ಹೊಳ್ಳ, ಮ್ಯಾಜಿಷಿಯನ್ ಕುದ್ರೋಳಿ ಗಣೇಶ್, ಶ್ರೀಕೃಷ್ಣ ಉಪಾಧ್ಯಾಯ ಉಪಸ್ಥಿತರಿದ್ದರು.

ಬೈಟ್ - ಕಲ್ಲಡ್ಕ ಪ್ರಭಾಕರ್ ಭಟ್, ಆರ್ ಎಸ್ ಎಸ್ ಮುಖಂಡರು

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.