ETV Bharat / state

ರೈಲು ಹಳಿಗೆ ಬಿದ್ದ ಮರ: ಕೆಂಪು ವಸ್ತ್ರ ಪ್ರದರ್ಶಿಸಿ ರೈಲು ನಿಲ್ಲಿಸಿದ ವೃದ್ಧೆ

ರೈಲು ಹಳಿ ಮೇಲೆ ಮರ ಬಿದ್ದಿದ್ದನ್ನು ಗಮನಿಸಿದ ವೃದ್ಧೆ ಕೆಂಪು ವಸ್ತ್ರವನ್ನು ಪ್ರದರ್ಶಿಸಿ ರೈಲು ನಿಲ್ಲಿಸುವ ಮೂಲಕ ಅನಾಹುತ ತಪ್ಪಿಸಿದ್ದಾರೆ.

ಚಂದ್ರಾವತಿ
ಚಂದ್ರಾವತಿ
author img

By

Published : Apr 4, 2023, 11:31 AM IST

ಮಂಗಳೂರು: ರೈಲ್ವೆ ಹಳಿಗೆ ದೊಡ್ಡ ಗಾತ್ರದ ಮರ ಬಿದ್ದದ್ದನ್ನು ಗಮನಿಸಿದ 70 ವರ್ಷದ ವೃದ್ಧೆಯೊಬ್ಬರು ಕೆಂಪು ವಸ್ತ್ರ ಪ್ರದರ್ಶಿಸಿ ರೈಲು ತಡೆಯುವ ಮೂಲಕ ಸಮಯಪ್ರಜ್ಞೆ ತೋರಿಸಿದ್ದಾರೆ. ಈ ಮೂಲಕ ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿದ್ದಾರೆ. ನಗರದ ಪಡೀಲ್‌ ಜೋಕಟ್ಟೆ ಮಧ್ಯೆ ಇರುವ ಪಚ್ಚನಾಡಿ ಸಮೀಪದ ಮಂದಾರದಲ್ಲಿ ಮಾರ್ಚ್ 21 ರಂದು ಈ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ನಗರದ ಕುಡುಪು ಆಯರ ಮನೆ ಚಂದ್ರಾವತಿ ಅವರು ಸಂಭಾವ್ಯ ರೈಲು ಅವಘಡವನ್ನು ತಪ್ಪಿಸಿದವರು.

ಮಾರ್ಚ್ 21ರಂದು ಮಧ್ಯಾಹ್ನ 2.10ರ ಸುಮಾರಿಗೆ ರೈಲ್ವೆ ಹಳಿಗೆ ಮರ ಉರುಳಿತ್ತು. ಅದೇ ಸಂದರ್ಭದಲ್ಲಿ ಮಂಗಳೂರಿನಿಂದ ಮುಂಬಯಿಗೆ ಮತ್ಸ್ಯಗಂಧ ರೈಲು ಚಲಿಸುತಿತ್ತು. ಇದನ್ನು ಗಮನಿಸಿದ ಚಂದ್ರಾವತಿ ಅವರು ಮನೆಯಲ್ಲಿದ್ದ ಕೆಂಪು ಬಟ್ಟೆಯನ್ನು ತಂದು ರೈಲು ಬರುವ ಸಮಯದ ವೇಳೆ ಪ್ರದರ್ಶಿಸಿದ್ದಾರೆ.​ ಅಪಾಯವನ್ನು ಅರಿತ ಲೋಕೋಪೈಲೆಟ್ ರೈಲಿನ ವೇಗವನ್ನು ಕಡಿಮೆ ಮಾಡಿ ರೈಲು ನಿಲ್ಲಿಸಿದ್ದಾರೆ. ಇದರಿಂದ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ. ಬಳಿಕ ಸ್ಥಳೀಯರು ಹಾಗೂ ರೈಲ್ವೆ ಇಲಾಖೆಯ ಕಾರ್ಮಿಕರು ಸೇರಿ ರೈಲು ಹಳಿ ಮೇಲೆ ಬಿದ್ದಿದ್ದ ಮರವನ್ನು ತೆರವು ಮಾಡಿದ್ದಾರೆ.

ಈ ಬಗ್ಗೆ ಚಂದ್ರಾವತಿ ಅವರು ಮಾತನಾಡಿ, "ಮಧ್ಯಾಹ್ನ ಊಟ ಮಾಡಿ ಮನೆಯ ಅಂಗಳದಲ್ಲಿ ಕುಳಿತಿದ್ದೆ. ನನ್ನ ಅಕ್ಕ ಮನೆಯಲ್ಲಿ ನಿದ್ರಿಗೆ ಜಾರಿದ್ದರು. ಅದೇ ವೇಳೆ ಮನೆ ಎದುರಿನ ರೈಲು ಹಳಿಗೆ ಬೃಹದ್ದಾಕಾರದ ಮರವೊಂದು ಹಳಿ ಮೇಲೆ ಬಿದ್ದಿದ್ದು ಕಂಡಿತು. ಎಂದಿನಂತೆ ಆ ಸಮಯಕ್ಕೆ ಮಂಗಳೂರಿನಿಂದ ಮುಂಬಯಿಗೆ ರೈಲು ಸಂಚರಿಸುವ ಬಗ್ಗೆ ನನಗೆ ಮಾಹಿತಿ ಇತ್ತು. ಏನು ಮಾಡಬೇಕು ಎಂದು ತೋಚಲಿಲ್ಲ.

ಯಾರಿಗಾದರೂ ಕರೆ ಮಾಡಿ ತಿಳಿಸ ಬೇಕು ಎಂದು ಮನೆ ಒಳಗಡೆ ಹೋಗ ಬೇಕು ಅನ್ನುವಷ್ಟರಲ್ಲೆ ರೈಲಿನ ಹಾರ್ನ್ ಶಬ್ದ ಕೇಳಿಸಿದೆ. ಕೂಡಲೇ ಅಲ್ಲೇ ಕೆಂಪು ಬಟ್ಟೆ ಕಂಡಿದ್ದು, ಅದನ್ನೇ ಹಿಡಿದು ಹಳಿಯ ಬಳಿಗೆ ಓಡಿ ಹೋದೆ. ನನಗೆ ಹೃದಯದ ಆಪರೇಷನ್‌ ಆಗಿದೆ. ಆದರೂ ಅದನ್ನು ಲೆಕ್ಕಿಸದೇ ಓಡಿ ರೈಲು ನಿಲ್ಲಿಸಿದೆ. ಸುಮಾರು ಅರ್ಧ ತಾಸು ರೈಲು ಹಳಿ ಮೇಲೆ ನಿಂತಿತ್ತು. ಸ್ಥಳೀಯರ ಸಹಕಾರದಿಂದ ಬಳಿಕ ಮರ ತೆರವು ಮಾಡಲಾಯಿತು" ಎಂದು ಹೇಳಿದ್ದಾರೆ. ಇನ್ನು ಚಂದ್ರಾವತಿ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ: ಬೆಂಳೂರಿನಿಂದ ಹೊರಟಿದ್ದ ವಿಮಾನ ಹೈದರಾಬಾದ್​ನಲ್ಲಿ ತುರ್ತು ಭೂ ಸ್ಪರ್ಶ!

ರಾಜಧಾನಿ ಬೆಂಗಳೂರಿನಲ್ಲಿ ವಿಮಾನ ತುರ್ತು ಭೂ ಸ್ಪರ್ಶ: ಸರಿಸುಮಾರು 200 ಪ್ರಯಾಣಿಕರನ್ನ ಹೊತ್ತು ದುಬೈಗೆ ಹೊರಟಿದ್ದ ಎತಿಹಾದ್ ಏರ್ ವೇಸ್ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದೆ. ಏಪ್ರಿಲ್​ 2 ರಾತ್ರಿ 9.07 ಸಮಯದಲ್ಲಿ ಈ ಘಟನೆ ನಡೆದಿದೆ. ವಿಮಾನ ನಿಲ್ದಾಣದಿಂದ EY 237 ಸಂಖ್ಯೆಯ ಎತಿಹಾದ್​​ ವಿಮಾನ ಅಬು ಧಾಬಿಗೆ ಸಂಚರಿಸುತ್ತಿತ್ತು.

ಇದನ್ನೂ ಓದಿ: ಹಿಮ್ಮುಖ ಚಲಿಸಿದ ಬಸ್ ನಿಲ್ಲಿಸಿದ ವಿದ್ಯಾರ್ಥಿ.. ಬಾಲಕನ ಸಮಯ ಪ್ರಜ್ಞೆಗೆ ಹಲವರು ಅಪಾಯದಿಂದ ಪಾರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.