ETV Bharat / state

ಸುಳ್ಯ - ಕೊಡಗು ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿದ ಮಾಹಿತಿ ಇಲ್ಲ: ವದಂತಿ ಹಬ್ಬಿಸದಂತೆ ಅಧಿಕಾರಿಗಳಿಂದ ಮನವಿ - Mild tremors in Karnataka

ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಭೂಮಿ ಕಂಪಿಸುತ್ತಿರುವ ಬಗ್ಗೆ ಕೆಲವರು ವಿನಾ ಕಾರಣ ವದಂತಿಗಳನ್ನು ಹಬ್ಬಿಸುತ್ತಿದ್ದು ಈ ಬಗ್ಗೆ ಅಧಿಕಾರಿಯೊಬ್ಬರು ಅಭಯ ನೀಡಿದ್ದಾರೆ. ಅಲ್ಲದೇ ಜನರು ಯಾವುದೇ ಕಾರಣಕ್ಕೂ ಭಯಭೀತರಾಗುವ ಅಗತ್ಯವೇ ಇಲ್ಲ ಎಂದೂ ಹೇಳಿದ್ದಾರೆ.

Officer reaction about mild earthquake in Karnataka

author img

By

Published : Jul 2, 2022, 2:15 PM IST

ಸುಳ್ಯ: ಸುಳ್ಯ ತಾಲೂಕಿನ ಸಂಪಾಜೆ, ಚೆಂಬು, ಪೆರಾಜೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಭೂಕಂಪ ಆಗಿರುವ ಬಗ್ಗೆ ಸ್ಥಳೀಯರಿಂದ ಅಥವಾ ಅಧಿಕಾರಿಗಳಿಂದ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಯಾವುದೇ ದೂರುಗಳು ಬಂದಿಲ್ಲ. ಹಾಗಾಗಿ ದಯಮಾಡಿ ಯಾರೂ ವದಂತಿಯನ್ನು ಹಬ್ಬಿಸಬೇಡಿ ಎಂದು ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಅನನ್ಯ ವಾಸುದೇವ್ ಅವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಭೂಕಂಪದ ಹಿನ್ನೆಲೆ ಕೊಡಗಿಗೆ ಭೇಟಿ ಕೊಟ್ಟ ಭೂ ವಿಜ್ಞಾನಿಗಳು

ಸಾಮಾಜಿಕ ಜಾಲತಾಣದಲ್ಲಿ ಇಂದು ಸಂಪಾಜೆ ಸೇರಿದಂತೆ ಸುಳ್ಯ ಹಾಗೂ ಕೊಡಗಿನ ಹಲವು ಭಾಗಗಳಲ್ಲಿ ಬೆಳಗ್ಗೆ ಸುಮಾರು 3:00ಗಂಟೆಗೆ ಭಾರಿ ಶಬ್ದದೊಂದಿಗೆ ಭೂಕಂಪ ಸಂಭವಿಸಿದ್ದು, ಜನರೆಲ್ಲ ಭಯಗೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಅನನ್ಯ ವಾಸುದೇವ್ ಅವರು ವಿಪತ್ತು ನಿರ್ವಹಣೆ ಎಂಬುದು ಅಧಿಕಾರಿಗಳ ಮಾತ್ರ ಹೊಣೆ ಅಲ್ಲ.

ಇದರಲ್ಲಿ ಪ್ರಮುಖವಾಗಿ ಮಾಧ್ಯಮಗಳು, ಸಾರ್ವಜನಿಕರ ಪಾತ್ರವು ಬಹಳ ಇದೆ. ಜನರಲ್ಲಿ ಸಾಧ್ಯವಾದಷ್ಟು ಧೈರ್ಯ ತುಂಬುವ ಕೆಲಸ ಮಾಡಬೇಕೇ ವಿನಃ ಅನಗತ್ಯವಾಗಿ ಯಾರೂ ಸುಳ್ಳು ಸುದ್ದಿ ಪ್ರಚಾರಪಡಿಸಬಾರದು. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ನಾವು ಜವಾಬ್ದಾರಿ ಅರಿತು ಕೆಲಸ ಮಾಡಬೇಕಿದೆ. ಈ ಹಿಂದಿನ ದಿನಗಳಲ್ಲಿ ಕಂಪನ ಸಂಭವಿಸಿದ್ದು ನಿಜ, ಅದು ಭೂಮಿ ತನ್ನ ಸಮತೋಲನ ಕಾಪಾಡುವ ಸಂದರ್ಭದಲ್ಲಿ ಈ ತರಹ ಕಂಪನಗಳು ಆಗುತ್ತದೆ. ಕರ್ನಾಟಕದ ಇತರ ಕೆಲವು ಭಾಗಗಳು ಝೋನ್ 2ರಲ್ಲಿ ಬರುತ್ತದೆ. ಆದರೆ, ಕರಾವಳಿ ಮತ್ತು ಮಲೆನಾಡು ಪ್ರದೇಶಗಳು ಝೋನ್ 3ರಲ್ಲಿ ಬರುತ್ತದೆ.

ಇದನ್ನು ಓದಿ: ದಕ್ಷಿಣ ಕನ್ನಡ - ಕೊಡಗು ಜಿಲ್ಲೆ ಗಡಿಭಾಗದಲ್ಲಿ ಮತ್ತೆ ಕಂಪಿಸಿದ ಭೂಮಿ: ಬೆಚ್ಚಿಬಿದ್ದ ಜನ

ಇಲ್ಲಿ ಸಾಮಾನ್ಯವಾಗಿ 2ರಿಂದ 3ಸೆಕೆಂಡ್​​ಗಳು ಕಂಪನ ಸಾಧ್ಯತೆಗಳು ಇರುತ್ತವೆ. ಕೆಲವು ಕಡೆಗಳಲ್ಲಿ ಭೂಮಿ, ಮನೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಿರುಕುಗಳು ಕಾಣಬಹುದು. ಜನರ ಸುರಕ್ಷತಾ ದೃಷ್ಟಿಯಿಂದ ನಾವು ಸದಾ ಈ ಪ್ರದೇಶಗಳಲ್ಲಿ ಗಮನ ಕೊಡುತ್ತಿದ್ದೇವೆ. ಜನರು ಯಾವುದೇ ಕಾರಣಕ್ಕೂ ಭಯಭೀತರಾಗುವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.