ETV Bharat / state

ಕೊಂಕಣ್ ರೈಲ್ವೆ ಮೂಲಕ ಗುಜರಾತ್‌ಗೆ ಅಡಕೆ ಸಾಗಣೆ: ನಾಳೆ ಸಾಂಕೇತಿಕ ಚಾಲನೆ - Konkan Railway Engineer Suresh Gowda

ರೈಲ್ವೆ, ಕೃಷಿಕರು, ವ್ಯಾಪಾರಿಗಳಿಗೆ ಲಾಭ ತರುವ ನಿಟ್ಟಿನಲ್ಲಿ ಕೊಂಕಣ್ ರೈಲ್ವೆ ಮೂಲಕ ಗುಜರಾತ್‌ಗೆ ಅಡಕೆ ಸಾಗಣೆಗೆ ಸಾಂಕೇತಿಕವಾಗಿ ಸೆ.23 ಬುಧವಾರ ಬೆಳಗ್ಗೆ 9.30 ಕ್ಕೆ ಎಪಿಎಂಸಿ ಪ್ರಾಂಗಣದಲ್ಲಿ ಚಾಲನೆ ನೀಡಲಾಗುವುದು.

Puttur News Puttur APMC General Meeting
ಎಪಿಎಂಸಿ ಸಾಮಾನ್ಯ ಸಭೆ
author img

By

Published : Sep 22, 2020, 7:06 PM IST

ಪುತ್ತೂರು: ರೈಲ್ವೆ ಕೃಷಿಕರು, ವ್ಯಾಪಾರಿಗಳಿಗೆ ಲಾಭ ತರುವ ನಿಟ್ಟಿನಲ್ಲಿ ಕೊಂಕಣ್ ರೈಲ್ವೆ ಮೂಲಕ ಗುಜರಾತ್‌ಗೆ ಅಡಕೆ ಸಾಗಣೆಗೆ ಸಾಂಕೇತಿಕವಾಗಿ ಸೆ.23 ಬುಧವಾರ ಬೆಳಗ್ಗೆ 9.30 ಕ್ಕೆ ಎಪಿಎಂಸಿ ಪ್ರಾಂಗಣದಲ್ಲಿ ಚಾಲನೆ ನೀಡಲಾಗುವುದು.

ಈ ನಿಟ್ಟಿನಲ್ಲಿ ಎಲ್ಲ ಮಾತುಕತೆಗಳನ್ನು ಮಾಡಲಾಗಿದ್ದು, ಅ.3 ರಂದು ಎಪಿಎಂಸಿಯಲ್ಲಿ ನಡೆಯುವ ವಿವಿಧ ಕಾಮಗಾರಿಗಳ ಉದ್ಘಾಟನಾ ಸಂದರ್ಭದಲ್ಲಿ ಅಧಿಕೃತ ಚಾಲನೆಯನ್ನು ಸಚಿವರ ಸಮ್ಮುಖದಲ್ಲಿ ಮಾಡಲಾಗುವುದು ಎಂದು ಕೊಂಕಣ್ ರೈಲ್ವೆ ಇಂಜಿನಿಯರ್ ಸುರೇಶ್ ಗೌಡ ತಿಳಿಸಿದ್ದಾರೆ.

ಅವರು ಮಂಗಳವಾರ ಎಪಿಎಂಸಿ ಸಭಾಂಗಣದಲ್ಲಿ ನಡೆದ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ಈ ವಿಷಯ ತಿಳಿಸಿದರು. ಪುತ್ತೂರು, ಸುಳ್ಯ, ಬೆಳ್ತಂಗಡಿ ಮುಂತಾದ ಕರಾವಳಿ ಜಿಲ್ಲೆಗಳಿಂದ ರೈತರು ಬೆಳೆಯುವ ಕೃಷಿ ಉತ್ಪನ್ನ ಆಧರಿತ ವಸ್ತುಗಳನ್ನು ಡೋರ್ ಟು ಡೋರ್ ಡೆಲಿವರಿ ಮಾಡುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಸಂಬಂಧಪಟ್ಟ ಟ್ರಾನ್ಸ್ಪೋರ್ಟರ್‌ಗಳಿಂದ, ಎಪಿಎಂಸಿ, ಕ್ಯಾಂಪ್ಕೋದಿಂದ ಹಸಿರು ನಿಶಾನೆ ಸಿಕ್ಕಿದೆ ಎಂದು ಅವರು ತಿಳಿಸಿದರು.

ಮಂಗಳವಾರ ಎಪಿಎಂಸಿ ಸಭಾಂಗಣದಲ್ಲಿ ನಡೆದ ಎಪಿಎಂಸಿ ಸಾಮಾನ್ಯ ಸಭೆ ನಡೆಯಿತು.

ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಮಾತನಾಡಿ, ಮೊದಲಿಗೆ ಬುಧವಾರ ಕ್ಯಾಂಪ್ಕೋ ವತಿಯಿಂದ ಅಡಕೆಯನ್ನು ರೈಲಿನ ಮೂಲಕ ಸಾಗಣೆ ಮಾಡಲಾಗುವುದು. ಹೀಗೆ ಸೆ.26 ರ ತನಕ ಪ್ರಾಯೋಗಿಕವಾಗಿ ರೈಲಿನಲ್ಲಿ ಅಡಕೆ ಸಾಗಣೆ ಮಾಡಲಾಗುವುದು. ಈ ಮಧ್ಯೆ ಉಂಟಾಗುವ ಸಾಧಕ ಬಾಧಕಗಳನ್ನು ಕುರಿತು ಚರ್ಚಿಸಿ ಎಲ್ಲ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.

ಸೆ.26 ರಂದು ಎಪಿಎಂಸಿ ಪ್ರಾಂಗಣದಲ್ಲಿ ನಿಗದಿಯಾಗಿದ್ದ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮವನ್ನು ವಿಧಾನಸಭಾ ಅಧಿವೇಶನದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದು, ಅ.3 ರಂದು ನಡೆಯಲಿದೆ. ಈ ಕುರಿತ ಕಾರ್ಯಕ್ರಮಗಳ ವಿವರಗಳನ್ನು ಅಧ್ಯಕ್ಷ ದಿನೇಶ್ ಮೆದು ಸಭೆಯ ಮುಂದಿಟ್ಟರು. ಉಳಿದಂತೆ ಎಪಿಎಂಸಿಯಲ್ಲಿ ಆಗಸ್ಟ್ ತಿಂಗಳು ಬಂದಿರುವ ಆದಾಯ, ಖರ್ಚುಗಳ ಲೆಕ್ಕಪತ್ರವನ್ನು, ಹಿಂದಿನ ಸಭೆಯ ನಡಾವಳಿಯನ್ನು ಕಾರ್ಯದರ್ಶಿ ರಾಮಚಂದ್ರ ಸಭೆಯ ಮುಂದಿಟ್ಟರು.

ಸಭೆಯಲ್ಲಿ ಉಪಾಧ್ಯಕ್ಷ ಮಂಜುನಾಥ್ ಎನ್.ಎಸ್., ಸದಸ್ಯರಾದ ಬೂಡಿಯಾರ್ ರಾಧಾಕೃಷ್ಣ ರೈ, ಬಾಲಕೃಷ್ಣ ಸುವರ್ಣ, ಮೇದಪ್ಪ ಗೌಡ, ಕುಶಾಲಪ್ಪ ಗೌಡ, ರೈಲ್ವೇ ಇಂಜಿನಿಯರ್‌ಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.