ETV Bharat / state

ಮಂಗಳೂರಿನಲ್ಲಿ‌ ಕೊರೊನಾ ಇಲ್ಲ, ಭಯ ಬೇಡ: ಜಿಲ್ಲಾಧಿಕಾರಿ

author img

By

Published : Mar 9, 2020, 2:59 PM IST

ಮಂಗಳೂರಿನಲ್ಲಿ ಯಾವುದೇ ಕೊರೊನಾ ಶಂಕಿತ ಪ್ರಕರಣ ಕೂಡಾ ಪತ್ತೆಯಾಗಿಲ್ಲ. ಯಾರೂ ಈ ಬಗ್ಗೆ ಭಯ ಪಡುವುದು ಬೇಡ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ.

Sindhu B. Rupesh
ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್

ಮಂಗಳೂರು: ನಗರದಲ್ಲಿರುವ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ದುಬೈನಿಂದ ಬಂದಿರುವ ವ್ಯಕ್ತಿಗೆ ಕೇವಲ ಜ್ವರ ಅಷ್ಟೇ ಇರೋದು. ಬೇರೆ ಯಾವುದೇ ಲಕ್ಷಣಗಳು ಇರಲಿಲ್ಲ. ಅವರಿಗೆ ಜ್ವರದ ಲಕ್ಷಣ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯ ವಿಶೇಷ ಘಟಕದಲ್ಲಿ ದಾಖಲಿಸಲಾಗಿತ್ತು. ಆದರೆ ಈ ಸಂದರ್ಭ ಅವರು ನಮಗೆ ಸಹಕಾರ ನೀಡಿರಲಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್

ಆದರೆ ರೋಗದ ಲಕ್ಷಣ ಏನಾದರೂ ಇದ್ದಲ್ಲಿ ತೊಂದರೆಯಾಗುತ್ತೆ ಎಂಬ ಉದ್ದೇಶದಿಂದ ನಾವು ಆ ವ್ಯಕ್ತಿಯನ್ನು ಒಪ್ಪಿಸಿ ತಪಾಸಣೆ ನಡೆಸುತ್ತೇವೆ ಎಂದರು. ಅವರು ಈ ಬಗ್ಗೆ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಅವರನ್ನು ಬರೀ ತಪಾಸಣೆ ಮಾತ್ರ ಮಾಡಲಿದ್ದೇವೆ. ಆದರೆ ಅವರು ನಮಗೆ ತಪಾಸಣೆಗೆ ಸಹಕಾರ ನೀಡಿಲ್ಲ ಎಂದರು.

ಮಂಗಳೂರಿನಲ್ಲಿ ಕೊರೊನಾ ಶಂಕಿತ ಪ್ರಕರಣಗಳೂ ಪತ್ತೆಯಾಗಿಲ್ಲ. ಯಾರೂ ಈ ಬಗ್ಗೆ ಭಯ ಪಡುವುದು ಬೇಡ. ಸಾರ್ವಜನಿಕವಾಗಿ ಸಂಚರಿಸುವಾಗ ಮುಂಜಾಗ್ರತೆ ವಹಿಸಿಕೊಳ್ಳಿ.‌ ವಿಮಾನ ನಿಲ್ದಾಣದಲ್ಲಿ ಬರುವ ಪ್ರತೀ ಪ್ರಯಾಣಿಕರನ್ನು ನಮ್ಮ ಆರೋಗ್ಯಾಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ 20 ಸಾವಿರಕ್ಕೂ ಅಧಿಕ ಮಂದಿಯನ್ನು ನಾವು ತಪಾಸಣೆ ನಡೆಸಿದ್ದೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.