ಮಂಗಳೂರಿನ ಸುರತ್ಕಲ್ನ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ (ಎನ್ಐಟಿಕೆ)ನಲ್ಲಿ ಖಾಲಿ ಇರುವ ವಿವಿಧ ಬೋಧಕೇತರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿ, ಪಿಯುಸಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 112 ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಯಲಿದೆ. ಗ್ರೂಪ್ ಸಿ ಮಟ್ಟದ ಈ ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಕೆ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆ ವಿವರ: ಸೂಪರಿಂಟೆಂಡೆಂಟ್ 4, ಸೀನಿಯರ್ ಟೆಕ್ನಿಶಿಷಿಯನ್ 18, ಸೀನಿಯರ್ ಅಸಿಸ್ಟೆಂಟ್ 11, ಟೆಕ್ನಿಶಿಯನ್ 35, ಜ್ಯೂನಿಯರ್ ಅಸಿಸ್ಟೆಂಟ್ 23, ಆಫೀಸರ್ ಅಟೆಂಡೆಂಟ್ 21.
ವಿದ್ಯಾರ್ಹತೆ: ಸೂಪರಿಂಟೆಂಡೆಂಟ್ ಹುದ್ದೆಗೆ ಅಭ್ಯರ್ಥಿಗಳು ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು. ಉಳಿದ ಹುದ್ದೆಗಳಿಗೆ ಅಭ್ಯರ್ಥಿಗಳು ಡಿಪ್ಲೊಮಾ ಅಥವಾ ಪಿಯುಸಿ ಪದವಿ ಶಿಕ್ಷಣವನ್ನು ಪಡೆದಿರಬೇಕು.
ವಯೋಮಿತಿ: ಸೂಪರಿಂಟೆಂಡೆಂಟ್ ಹುದ್ದೆಗೆ 30 ವರ್ಷ ಸೀನಿಯರ್ ಟೆಕ್ನಿಶಿಯನ್, ಸೀನಿಯರ್ ಅಸಿಸ್ಟೆಂಟ್ ಹುದ್ದೆಗೆ 33 ಮತ್ತು ಉಳಿದ ಹುದ್ದೆಗಳಿಗೆ 27 ವರ್ಷದ ವಯೋಮಿತಿ ದಾಟಿರಬಾರದು.
ವೇತನ: ಸೂಪರಿಂಟೆಂಡೆಂಟ್ ಹುದ್ದೆಗೆ 9,300-43,800 ರೂ. ವೇತನ, ಉಳಿದ ಹುದ್ದೆಗಳಿಗೆ ಮಾಸಿಕ 5,200- 20,200 ರೂ. ವೇತನ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 500 ರೂ. ಮತ್ತು ಒಬಿಸಿ ಸೇರಿದಂತೆ ಇತರೆ ಅಭ್ಯರ್ಥಿಗಳಿಗೆ 1000 ರೂ. ಅರ್ಜಿ ಶುಲ್ಕ ಇದೆ.
ಆಯ್ಕೆ ವಿಧಾನ: ಈ ಹುದ್ದೆಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು
ಅಭ್ಯರ್ಥಿಗಳು nitk.ac.in ಜಾಲತಾಣದ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಮುನ್ನ ಅಧಿಕೃತ ಅಧಿಸೂಚನೆಯನ್ನು ಅಭ್ಯರ್ಥಿಗಳ ಸಂಪೂರ್ಣವಾಗಿ ಓದುವುದು ಅವಶ್ಯ. ಅಭ್ಯರ್ಥಿಗಳು ಆಗಸ್ಟ್ 17ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಸಲು ಕಡೆಯ ದಿನ ಸೆಪ್ಟೆಂಬರ್ 6 ಆಗಿದೆ.
ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು 011- 40759000/011-69227700 ಈ ಸಂಖ್ಯೆಗೆ ಕರೆ ಮಾಡಬಹುದು ಅಥವಾ crenit@nta.ac.in ಈ ಇಮೇಲ್ ವಿಳಾಸಕ್ಕೆ ಸಂಪರ್ಕಿಸಬಹುದಾಗಿದೆ. ಜೊತೆಗೆ ಸಂಪೂರ್ಣ ಮಾಹಿತಿಗೆ ಎನ್ಐಟಿಕೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ: Canara Bank Recruitment: ಪ್ರೊಬೆಷನರಿ ಸೇರಿದಂತೆ 500 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ