ETV Bharat / state

ಸುಬ್ರಹ್ಮಣ್ಯ, ಧರ್ಮಸ್ಥಳ, ಬೆಳ್ತಂಗಡಿ, ಉಪ್ಪಿನಂಗಡಿ ಠಾಣೆಗಳಿಗೆ ಹೊಸ ಸಬ್‌ಇನ್ಸ್​​ಪೆಕ್ಟರ್​​ಗಳ ನೇಮಕ - ಸಬ್​​​ ಇನ್ಸ್​​ಪೆಕ್ಟರ್​​ಗಳ ನೇಮಕ

ಉಪ್ಪಿನಂಗಡಿ, ಧರ್ಮಸ್ಥಳ, ಬೆಳ್ತಂಗಡಿ ಮತ್ತು ಸುಬ್ರಹ್ಮಣ್ಯ ಪೊಲೀಸ್ ಠಾಣೆಗಳಿಗೆ ಹೊಸ ಪಿಎಸ್ಐಗಳನ್ನು ನೇಮಕ ಮಾಡಿ ಆದೇಶಿಸಲಾಗಿದೆ.

Subramanya
ಸಾಂದರ್ಭಿಕ ಚಿತ್ರ
author img

By

Published : Jul 16, 2021, 3:55 PM IST

ಸುಬ್ರಹ್ಮಣ್ಯ: ಉಪ್ಪಿನಂಗಡಿ, ಧರ್ಮಸ್ಥಳ, ಬೆಳ್ತಂಗಡಿ ಮತ್ತು ಸುಬ್ರಹ್ಮಣ್ಯ ಪೊಲೀಸ್ ಠಾಣೆಗಳಿಗೆ ನೂತನ ಪಿಎಸ್ಐಗಳನ್ನು ನೇಮಕ ಮಾಡಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಆದೇಶ ಹೊರಡಿಸಿದ್ದಾರೆ.

ಸುಬ್ರಹ್ಮಣ್ಯ ಠಾಣಾ ಪಿಎಸ್ಐ ಎನ್.ಕೆ ಓಮನ ಅವರನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಹಿಳಾ ಎಸ್ಐ ಆಗಿ ವರ್ಗಾವಣೆಗೊಳಿಸಲಾಗಿದೆ. ಸುಬ್ರಹ್ಮಣ್ಯಕ್ಕೆ ನೂತನ ಎಸ್​​ಐ ಆಗಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಳೆದ ಕೆಲವು ಸಮಯಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್​​ಐ ಜಂಬೂರಾಜ್ ಮಹಾಜನ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಧರ್ಮಸ್ಥಳದಲ್ಲಿ ಎಸ್ಐ ಪವನ್ ನಾಯಕ್ ಅವರು ವರ್ಗಾವಣೆಗೊಂಡ ಬಳಿಕ ತೆರವಾಗಿದ್ದ ಸ್ಥಾನಕ್ಕೆ ವೇಣೂರು ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ತರಬೇತಿಯಲ್ಲಿದ್ದ (ಪ್ರೊಬೆಷನರಿ) ಸಬ್ ಇನ್ಸ್‌ಪೆಕ್ಟರ್ ಕೃಷ್ಣಕಾಂತ್ ಅಯ್ಯಪ್ಪ ಪಾಟೀಲ್ ಅವರನ್ನು ನಿಯೋಜಿಸಲಾಗಿದೆ.

ಬೆಳ್ತಂಗಡಿ ಠಾಣೆಯಲ್ಲಿ ಪ್ರೊಬೆಷನರಿ ಸಬ್ ಇನ್ಸ್‌ಪೆಕ್ಟರ್ ಆಗಿ ತರಬೇತಿ ಪೂರ್ತಿಗೊಳಿಸಿದ ಸಂದೀಪ್ ಕುಮಾರ್ ಶೆಟ್ಟಿ ಅವರನ್ನು ಬೆಳ್ತಂಗಡಿ ಠಾಣೆಗೆ ಹೆಚ್ಚುವರಿ ಎಸ್​​ಐ ಆಗಿ ನೇಮಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.