ಮಂಗಳೂರು: ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಎಸ್ಡಿಪಿಐ ಕಾರ್ಯಕರ್ತರು ಪಾಕಿಸ್ತಾನ ಪರ ಘೋಷಣೆ ಹಾಕಿರುವ ವಿಡಿಯೋವನ್ನು ಮಾಧ್ಯಮದಲ್ಲಿ ಗಮನಿಸಿದ್ದು, ಇದೊಂದು ರಾಷ್ಟ್ರ ವಿರೋಧಿ ಕೃತ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಭಾರತದ ಅನ್ನ ತಿಂದು, ಗಾಳಿ, ನೀರು ಸೇವಿಸಿ ಇನ್ನೊಂದು ದೇಶಕ್ಕೆ ಜೈಕಾರ ಹಾಕುವುದು ರಾಷ್ಟ್ರ ವಿರೋಧಿ ಕೃತ್ಯ. ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿ ಅವರಲ್ಲಿ ಮಾತನಾಡಿದ್ದೇನೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಹೊರಗಡೆ ಗೂಂಡಾಗಿರಿ ಮಾಡುತ್ತಿತ್ತು, ಈಗ ಪರಿಷತ್ನಲ್ಲೂ ಮಾಡುತ್ತಿದೆ: ಕಟೀಲ್
ಇಂತಹ ಹಲವಾರು ಘಟನೆಗಳನ್ನು ಎಸ್ಡಿಪಿಐ ಮಾಡಿದೆ. ರಾಜಕೀಯ ಪಕ್ಷವಾಗಿರುವ ಎಸ್ಡಿಪಿಐ ವಿಚಾರ, ಸಿದ್ಧಾಂತ ಮರೆತು ಕೆಲಸ ಮಾಡುತ್ತಿದೆ. ಅವರಿಗೆ ರಾಷ್ಟ್ರದ ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ನಂಬಿಕೆ ಇಲ್ಲ.
ಇದರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಕೃತ್ಯದಲ್ಲಿ ತೊಡಗಿಸಿಕೊಂಡ ಎಸ್ಡಿಪಿಐ, ಪಿಎಫ್ಐನವರನ್ನು ಬಂಧಿಸಿ, ರಾಷ್ಟ್ರ ವಿರೋಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಒತ್ತಾಯಿಸುತ್ತೇನೆ ಎಂದರು.