ಮಂಗಳೂರು: ಕಾಂಗ್ರೆಸ್ ಇಂಟೆಕ್ ಕಾರ್ಮಿಕ ಸಂಘಟನೆಯ ಮುಖಂಡರಾಗಿರುವ ರಾಕೇಶ್ ಮಲ್ಲಿ, ತಮಗೆ ಮುತ್ತಪ್ಪ ರೈ ಅವರ ಪುತ್ರ ಹಾಗೂ ಸಹಚರರಿಂದ ಕೊಲೆ ಬೆದರಿಕೆ ಇರುವುದಾಗಿ ಪೊಲೀಸ್ ರಕ್ಷಣೆ ಕೋರಿ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ, ರಾಕೇಶ್ ಮಲ್ಲಿಯವರಿಗೆ ಜೀವ ಭಯವಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದರು.
ಮುತ್ತಪ್ಪ ರೈ ಹಾಗೂ ರಾಕೇಶ್ ಮಲ್ಲಿ ಜೊತೆಯಲ್ಲಿಯೇ ಗುರುತಿಸಿಕೊಂಡಿದ್ದು, ಮುತ್ತಪ್ಪ ರೈ ಅವರ ಕೊನೆಗಾಲದಲ್ಲಿ ಬೇರೆಯಾಗಿದ್ದರು. ಇದೀಗ ಅವರ ಪುತ್ರ ಹಾಗೂ ಸಹಚರರಿಂದಲೇ ತಮಗೆ ಕೊಲೆ ಬೆದರಿಕೆ ಇದೆ. ಜೀವ ಭಯವಿರುವ ಕಾರಣ ತಮಗೆ ಗನ್ ಮ್ಯಾನ್ ರಕ್ಷಣೆ ಕೋರಿ ರಾಕೇಶ್ ಮಲ್ಲಿ ದೂರು ನೀಡಿರುವುದು ಕುತೂಹಲ ಮೂಡಿಸಿದೆ.