ದಕ್ಷಿಣ ಕನ್ನಡ: ಕ್ಷಯರೋಗ ನಿರ್ಮೂಲನೆಗಾಗಿ ನವೆಂಬರ್ 25ರಿಂದ ಡಿಸೆಂಬರ್ 10ರವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ನಡೆಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಕ್ಷಯರೋಗವನ್ನು ಆರಂಭದಲ್ಲಿ ಪತ್ತೆ ಹಚ್ಚಿ ಶೀಘ್ರ ಗುಣಮುಖ ಮಾಡಬಹುದು ಎಂದು ತಿಳಿಸಿದರು.
ಸರಕಾರದಿಂದ ಕ್ಷಯರೋಗಕ್ಕೆ ಉಚಿತ ಚಿಕಿತ್ಸೆ ಇದೆ. ಒಂದು ವೇಳೆ ಖಾಸಗಿ ವೈದ್ಯರಲ್ಲಿಗೆ ರೋಗಿಗಳು ಹೋದರೆ ಜಿಲ್ಲಾ ಕ್ಷಯ ಚಿಕಿತ್ಸಾ ಕೇಂದ್ರಕ್ಕೆ ಮಾಹಿತಿ ನೀಡುವಂತೆ ವಿನಂತಿಸಿದರು.
ಎರಡು ವಾರಕ್ಕಿಂತ ಹೆಚ್ಚು ದಿನ ಕೆಮ್ಮು, ರಾತ್ರಿ ಹೊತ್ತು ಹಗುರ ಜ್ವರ, ಎದೆಯಲ್ಲಿ ನೋವು, ಕಫದಲ್ಲಿ ರಕ್ತ, ತೂಕ ಕಡಿಮೆಯಾಗುವುದು ಮತ್ತು ಹಸಿವೆಯಾಗದಿರುವುದು ಕಂಡುಬಂದರೆ ಈ ಆಂದೋಲನ ಸಂದರ್ಭದಲ್ಲಿ ಮನೆ ಮನೆಗೆ ಭೇಟಿ ನೀಡುವ ಆರೋಗ್ಯ ಕಾರ್ಯಕರ್ತರಿಗೆ ಮಾಹಿತಿ ನೀಡುವಂತೆ ವಿನಂತಿಸಿದರು.