ETV Bharat / state

ಕೋವಿಡ್​ ಟೆಸ್ಟ್: ದ.ಕ ಜಿಲ್ಲೆಯಲ್ಲಿ ಪ್ರಾಥಮಿಕ ಸಂಪರ್ಕ, ಸೋಂಕು ಲಕ್ಷಣ ಇರುವವರಿಗೆ ಮೊದಲ ಆದ್ಯತೆ - ಮಂಗಳೂರು ಕೋವಿಡ್​ ಟೆಸ್ಟ್

ಸೋಂಕು ಭೀತಿಯಿಂದ ಹೆಚ್ಚು ಹೆಚ್ಚು ಜನರು ಪರೀಕ್ಷೆಗೆ ಒಳಗಾಗುತ್ತಿದ್ದು, ಜಿಲ್ಲೆಯಲ್ಲಿ ಪ್ರತಿದಿನ 4,000ವರೆಗೆ ಕೋವಿಡ್​​ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿರುವವರಲ್ಲಿ ರೋಗ ಲಕ್ಷಣಗಳಿದ್ದರೆ ಮತ್ತು ರೋಗ ಲಕ್ಷಣಗಳಿದ್ದು ಪರೀಕ್ಷೆಗೆ ಬರುವ ಇತರರ ಕೊರೊನಾ ಪರೀಕ್ಷೆಯನ್ನು ಆದ್ಯತೆ ಮೇಲೆ ಮಾಡಲಾಗುತ್ತಿದೆ.

corona test
ಕೋವಿಡ್​ ಟೆಸ್ಟ್
author img

By

Published : May 14, 2021, 10:51 AM IST

ಮಂಗಳೂರು: ದಿನೇ ದಿನೆ ಕೋವಿಡ್​ ಉಲ್ಭಣಗೊಳ್ಳುತ್ತಿದೆ. ಜನರಲ್ಲಿ ಸೋಂಕು ತಗುಲುವ ಭಯ ಮೊದಲಿಗಿಂತಲೂ ಹೆಚ್ಚಾಗಿದೆ. ಕೊರೊನಾ ಭೀತಿಯಿಂದ ಕೋವಿಡ್​ ಟೆಸ್ಟ್​​​ಗೆ ಒಳಗಾಗುವವರ ಸಂಖ್ಯೆ ಕೂಡ ಹೆಚ್ಚಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯು ರೋಗ ಲಕ್ಷಣ ಇರುವವರ ಪರೀಕ್ಷೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

ಕೋವಿಡ್​​ ಮೊದಲನೇ ಅಲೆಯ ಸಂದರ್ಭದಲ್ಲಿ ಬೆಂಗಳೂರು ಹೊರತುಪಡಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಮೊದಲನೇ ಅಲೆಗೆ ಹೋಲಿಸಿದರೆ ಎರಡನೇ ಅಲೆಯಲ್ಲಿ ಹೆಚ್ಚಿನ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಿಸಿಕೊಂಡಿವೆ. ಈ ಕಾರಣದಿಂದಾಗಿ ಸಹಜವಾಗಿ ಭಯಭೀತರಾಗಿರುವ ಜನರು ಕೊರೊನಾ ಪರೀಕ್ಷೆ ನಡೆಸಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಿದ್ದಾರೆ.

ಕೋವಿಡ್​ ಟೆಸ್ಟ್ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಪ್ರತಿಕ್ರಿಯೆ

ಪ್ರಾಥಮಿಕ ಸಂಪರ್ಕ, ಸೋಂಕು ಲಕ್ಷಣ ಇರುವವರಿಗೆ ಪರೀಕ್ಷೆ:

ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ರೋಗ ಲಕ್ಷಣ ಇರುವವರ ಪರೀಕ್ಷೆಗೆ ಮೊದಲ ಆದ್ಯತೆ ನೀಡುತ್ತಿದೆ. ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿರುವವರಲ್ಲಿ ರೋಗ ಲಕ್ಷಣಗಳಿದ್ದರೆ ಮತ್ತು ರೋಗ ಲಕ್ಷಣಗಳಿದ್ದು ಪರೀಕ್ಷೆಗೆ ಬರುವ ಇತರರ ಕೊರೊನಾ ಪರೀಕ್ಷೆಯನ್ನು ಮೊದಲ ಆದ್ಯತೆ ಮೇಲೆ ಮಾಡಲಾಗುತ್ತಿದೆ.

4,000ವರೆಗೆ ಕೋವಿಡ್ ಟೆಸ್ಟ್:

ಜಿಲ್ಲೆಯಲ್ಲಿ ಪ್ರತಿದಿನ 4,000ದವರೆಗೆ ಕೋವಿಡ್​​ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಕಿಶೋರ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ ಚರಂಡಿಗಳ ದುರಸ್ತಿ ಕಾರ್ಯ!

ಜಿಲ್ಲೆಯಲ್ಲಿ 8 ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಿರುವುದರಿಂದ ಹೆಚ್ಚಾಗಿ ಖಾಸಗಿ ಆಸ್ಪತ್ರೆ ಲ್ಯಾಬ್​ನಲ್ಲಿಯೂ ಪರೀಕ್ಷೆ ನಡೆಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲೂ ಸಕಲ ವ್ಯವಸ್ಥೆ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ನಡೆಯುತ್ತಿದೆ.

ಆಕ್ಸಿಜನ್, ಔಷಧಗಳ ಸಮಸ್ಯೆ ಇಲ್ಲ:

ಜಿಲ್ಲೆಯಲ್ಲಿ ಈವರೆಗೆ ಆಕ್ಸಿಜನ್, ಔಷಧಗಳ ಸಮಸ್ಯೆ ತಲೆದೋರಿಲ್ಲ. ಈಗಾಗಲೇ ಕುವೈತ್​​​, ಬಹರೈನ್ ಮೊದಲಾದ ಕಡೆಯಿಂದ ಮಂಗಳೂರು ಬಂದರ್​ಗೆ ಬಂದಿರುವ ಆಕ್ಸಿಜನ್​​​ ದೊಡ್ಡ ಪ್ರಮಾಣದಲ್ಲಿ ಜಿಲ್ಲೆಗೆ ಸಿಕ್ಕಿರುವುದರಿಂದ ಆಕ್ಸಿಜನ್ ಕೊರತೆ ಆತಂಕ ದೂರವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.