ETV Bharat / state

ಲಾಭದಲ್ಲಿದ್ದ ಕರಾವಳಿ ಬ್ಯಾಂಕ್​ಗಳನ್ನು ಬೇರೆ ಬ್ಯಾಂಕ್​ ಜತೆ ವಿಲೀನಗೊಳಿಸಿದ್ದು ಯಾಕೆ.. ಮೋದಿಗೆ ಖರ್ಗೆ ಪ್ರಶ್ನೆ - ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್

ಮೋದಿಯವ್ರೇ ನೀವು ಹೇಳ್ತಿರಾ ನಾನೂ ತಿನ್ನಲ್ಲ. ಬೇರೆಯವರನ್ನು ತಿನ್ನಲೂ ಬಿಡಲ್ಲ ಅಂತ ಆದ್ರೆ ಕರ್ನಾಟಕದಲ್ಲಿ 40 ಪರ್ಸೆಂಟ್ ಸರ್ಕಾರ ಇದೆ. ಇವೆರೇನು ಮಾಡ್ತಾ ಇರೋದು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ.

AICC President Mallikarjun Kharge spoke at the function in Sullya.
ಸುಳ್ಯದಲ್ಲಿ ನಡೆದ ಕಾಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು.
author img

By

Published : Apr 25, 2023, 5:00 PM IST

Updated : Apr 25, 2023, 6:20 PM IST

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಸುಳ್ಯ(ದಕ್ಷಿಣ ಕನ್ನಡ): ಕರಾವಳಿ ಭಾಗದಲ್ಲಿ ಸ್ಥಾಪನೆಯಾಗಿ, ಲಾಭದಲ್ಲಿದ್ದ ಬ್ಯಾಂಕ್‌ಗಳನ್ನು ನಷ್ಟದ ಅಥವಾ ಬೇರೆ ಬೇರೆ ಬ್ಯಾಂಕ್ ಜತೆ ವಿಲೀನ ಮಾಡಿದ್ದೇ ಬಿಜೆಪಿ ಸರ್ಕಾರದ ಸಾಧನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಗಿ ಟೀಕಿಸಿದರು.

ಸುಳ್ಯದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಜಿ. ಕೃಷ್ಣಪ್ಪ ಪರ ಮತಯಾಚಿಸಿ ಮಾತನಾಡಿದರು. ಈ ಬಾರಿ ಎಲ್ಲರೂ ಸೇರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು. ಈಗಿರುವ ಸರ್ಕಾರ 40 ಪರ್ಸೆಂಟ್ ಸರ್ಕಾರ, ಕೆಲಸ ತೆಗೆದುಕೊಂಡಿರುವ ಕಾಂಟ್ರ್ಯಾಕ್ಟರ್‌ಗಳು ಹೇಳ್ತಿದ್ದಾರೆ. ಇಂತಹ ಕೆಟ್ಟ ಸರ್ಕಾರವನ್ನು ತೆಗೆಯಬೇಕಿದೆ ಎಂದು ಹೇಳಿದರು.

ಹಿಂದೆ ಬಡವರು ಬ್ಯಾಂಕ್‌ಗೆ ಹೋಗುವಂತೆ ಮಾಡಿದ್ದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು. ಮಂಗಳೂರು-ಉಡುಪಿ ಜನರು ಬ್ಯಾಂಕ್‌ಗಳನ್ನು ಸ್ಥಾಪನೆ ಮಾಡಿದ್ದರು. ಆದರೆ ಇದೀಗ ಕರಾವಳಿಯ ಕೆಲ ಬ್ಯಾಂಕ್‌ಗಳನ್ನು ಬೇರೆ ಬೇರೆ ಬ್ಯಾಂಕ್​ಗಳ ಜತೆ ವಿಲೀನ ಮಾಡಿದ್ದು, ಯಾತಕ್ಕಾಗಿ ಅಂತ ಮೋದಿಜಿ ಹೇಳಬೇಕು ಎಂದು ಖರ್ಗೆ ಸವಾಲ್ ಹಾಕಿದ್ರು.

ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಯಾವ ಪ್ರಯೋಜನವೂ ಆಗಿಲ್ಲ. ಕಾಂಗ್ರೆಸ್ ಸರ್ಕಾರ ಇರುವಾಗ ಅದೆಷ್ಟೋ ಕಾರ್ಯಕ್ರಮಗಳನ್ನು ಕೊಟ್ಟು ಮಂಗಳೂರು ಮತ್ತು ಉಡುಪಿಯ ಅಭಿವೃದ್ಧಿ ಮಾಡಿದೆ. ಕರಾವಳಿಯಲ್ಲಿ ಧರ್ಮ ಧರ್ಮಗಳ ನಡುವೆ ಕಿಡಿಹೊತ್ತಿಸುವುದು ಬಿಜೆಪಿಯ ಕೆಲಸ ಎಂದು ಎಐಸಿಸಿ ಅಧ್ಯಕ್ಷರು ಆರೋಪಿಸಿದರು.

ಆದ್ರೆ ಮೋದಿಜಿ ಅವರು ಕೇಳ್ತಾರೆ 70 ವರ್ಷಗಳಲ್ಲಿ ಕಾಂಗ್ರೆಸ್ ಏನ್ ಮಾಡಿದೆ ಅಂತ. ಸ್ವಾಮಿ 70 ವರ್ಷಗಳಲ್ಲಿ ಕಾಂಗ್ರೆಸ್ ಮಾಡಿದ ಸಾಧನೆಯನ್ನು ನೀವೆಂದೂ ಮಾಡಿಲ್ಲ. ರೈತರಿಗೆ 72000 ಕೋಟಿ ಪ್ಯಾಕೇಜ್ ನೀಡಿರುವಂತದ್ದು ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ. ದೊಡ್ಡ ದೊಡ್ಡ ಕಾರ್ಖಾನೆಗಳನ್ನು ಸ್ಥಾಪಿಸಿದ್ದೂ ಕಾಂಗ್ರೆಸ್ ಸರ್ಕಾರ ಎಂದು ತಿರುಗೇಟು ನೀಡಿದ್ರು.

ಅಧಿಕಾರಗೋಸ್ಕರ ಬಿಜೆಪಿ ಸಮಾಜವನ್ನು ವಿಭಜನೆ ಮಾಡ್ತಾರೆ. ಜಾತಿ ಜಾತಿ ಗಳ ನಡುವೆ ಕಿಡಿಹೊತ್ತಿಸಿ ಅಶಾಂತಿ ನಿರ್ಮಿಸ್ತಾರೆ. ಕರ್ನಾಟಕ ಶೈಕ್ಷಣಿಕವಾಗಿ ಮುಂದಿದೆ. ಕರ್ನಾಟಕದಲ್ಲಿ ಮುಂದೆ ಕಾಂಗ್ರೆಸ್ ಸರ್ಕಾರ ಬಂದಲ್ಲಿ ಮೆಡಿಕಲ್ ಕಾಲೇಜು ಬಡವರಿಗಾಗಿ ಸ್ಥಾಪನೆ ಮಾಡಲಾಗುತ್ತದೆ. ಕರಾವಳಿಯ ಅಡಕೆ ರೋಗ ನಿವಾರಣೆ ಮಾಡಬೇಕಾದ್ರೆ ಬಿಜೆಪಿ ಸರ್ಕಾರ ರಿಸರ್ಚ್ ಮಾಡ್ಬೇಕು ಅಂತಾರೆ. ಆದ್ರೆ ನಮ್ಮ ಸರ್ಕಾರ ಬಂದಲ್ಲಿ ಎಷ್ಟೇ ಖರ್ಚಾದ್ರು ಅದಕ್ಕೆ ಪರಿಹಾರ ಕೊಡುವಲ್ಲಿ ಸಫಲರಾಗ್ತೇವೆ ಎಂದು ಖರ್ಗೆ ಅಭಯ ನೀಡಿದ್ರು.

ಬಡವರಿಗಾಗಿ ಇರುವುದು ಕಾಂಗ್ರೆಸ್ ಸರ್ಕಾರ ಹೊರತು ಬಿಜೆಪಿಯಲ್ಲ. ಮೋದಿಜಿ ದೊಡ್ಡ ದೊಡ್ಡ ಕೆಲಸವನ್ನು ಮಾಡೋದು ಬಿಟ್ಟು ಹೋಗೊ ರೈಲಿಗೆ ಫ್ಲ್ಯಾಗ್ ತೋರಿಸ್ತಾರೆ. ಸುಮ್ಮನೇ ಪ್ರಚಾರ ತೆಗೆದುಕೊಂಡು ಅಭಿವೃದ್ಧಿ ಮಾಡಿದ್ದೀವಿ ಅಂತ ಹೇಳಬೇಡಿ. ಕಾಂಗ್ರೆಸ್ ಸರ್ಕಾರದ ಈ ಬಾರಿಯ ಗ್ಯಾರಂಟಿ ಕಾರ್ಡ್‌ನಲ್ಲಿ ಏನಿದೆ ಅದು ನಿಮಗೆ ಪಕ್ಕ ಗ್ಯಾರಂಟಿ ವಿಷಯಗಳು ಎಂದರು.

ಯುವಕರಿಗೆ ಬಿಜೆಪಿ ಸರ್ಕಾರ ಉದ್ಯೋಗ ಕೊಡುವ ಭರವಸೆ ನೀಡಿತು. ಆದ್ರೆ ಇಲ್ಲಿಯವರೆಗೂ ಈಡೇರಿಲ್ಲ. ಆದ್ರೆ ಕಾಂಗ್ರೆಸ್ ಸರ್ಕಾರ ಯುವಕರಿಗೆ ಪ್ರತಿಜ್ಞೆ ಮಾಡುತ್ತೆ ಖಂಡಿತವಾಗಿ ಉದ್ಯೋಗ ನೀಡುವಂತ ಕೆಲಸ ಮಾಡುತ್ತದೆ. ಬಿಜೆಪಿಯವರು ಆಶ್ವಾಸನೆ ಕೊಡುವದನ್ನು ಬಿಟ್ಟು ಬಿಡಿ, ದೇಶದಲ್ಲಿ ಅದೆಷ್ಟೊ ನೌಕರಿಗಳಿವೆ ಅದನ್ನ ಮೊದಲು ಭರ್ತಿ ಮಾಡಿ. ಮೋದಿಯವ್ರೇ ನೀವು ಹೇಳ್ತಿರಾ ನಾನೂ ತಿನ್ನಲ್ಲ. ಬೇರೆಯವರನ್ನು ತಿನ್ನಲೂ ಬಿಡಲ್ಲ ಅಂತ.ಆದ್ರೆ ಕರ್ನಾಟಕದಲ್ಲಿ 40 ಪರ್ಸೆಂಟ್ ಸರ್ಕಾರ ಇದೆ. ಇವೆರೇನು ಮಾಡ್ತಾ ಇರೋದು ಸ್ವಾಮಿ ಎಂದು ಖರ್ಗೆ ಪ್ರಶ್ನಿಸಿದರು.

ಈ ನಡುವೆ ಮಳೆ ಸುರಿಯಿತು. ಕಾಂಗ್ರೆಸ್ ಪಕ್ಷಕ್ಕೆ ಸುಳ್ಯದಲ್ಲಿ ಮಳೆ ಬರುವ ಮೂಲಕ ಶುಭ ಸೂಚನೆ ಸಿಕ್ಕಿದೆ. ದೇಶದ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್‌ನ್ನು ಗೆಲ್ಲಿಸಿ ಎಂದು ಪ್ರಚಾರ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದರು.

ಇದನ್ನೂಓದಿ:ಲಿಂಗಾಯತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ, ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಯಾಚಿಸಬೇಕು: ಬಿಎಸ್ ವೈ

Last Updated : Apr 25, 2023, 6:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.