ಮಂಗಳೂರು: ರಫೇಲ್ ಡೀಲ್ನಲ್ಲಿ ಬಹುದೊಡ್ಡ ಹಗರಣವನ್ನು ನರೇಂದ್ರ ಮೋದಿ ಸರ್ಕಾರ ಮಾಡಿದ್ದು, ಯುದ್ಧ ವಿಮಾನಗಳ ತಯಾರಿಕೆಯ ಯಾವುದೇ ಅನುಭವ ಇಲ್ಲದ ಅಂಬಾನಿ ಕಂಪನಿಗೆ ನೀಡಿದೆ. ಈ ಮೂಲಕ ಹೆಚ್ಎಎಲ್ ಕಂಪನಿಯನ್ನು ಮೋದಿಯವರು ಕಡೆಗಣಿಸಿದ್ದಾರೆ ಎಂದು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮುಖಂಡ ಶತ್ರುಘ್ನ ಸಿನ್ಹಾ ಹೇಳಿದರು.
ನಗರದ ಹೊರವಲಯದ ಮುಡಿಪುವಿನಲ್ಲಿ ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಯವರ ಚುನಾವಣಾ ಪ್ರಚಾರ ಭಾಷಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಮಿಥುನ್ ರೈಯವರನ್ನು ಬಹುಮತದಿಂದ ಗೆಲ್ಲಿಸಬೇಕು ಎಂದು ಹೇಳಿದರು.
ಈ ಸಂದರ್ಭ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.