ETV Bharat / state

ವಿಪತ್ತು ನಿರ್ವಹಣಾ ಸಂದರ್ಭ ಕಾರ್ಯಾಚರಣೆ.. ವಿವಿಧ ಇಲಾಖೆಗಳ ತಂಡದಿಂದ ಅಣಕು ಪ್ರದರ್ಶನ

author img

By

Published : Jun 19, 2019, 6:00 PM IST

ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯಂತೆ ದಕ್ಷಿಣ ಕ‌ನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ವಿಪತ್ತು ನಿರ್ವಹಣಾ ಸಂದರ್ಭ ಕಾರ್ಯಾಚರಣೆ ಬಗ್ಗೆ ಅಣಕು ಪ್ರದರ್ಶನ ನಡೆಸಲಾಗಿದೆ.

ವಿವಿಧ ಇಲಾಖೆಗಳ ತಂಡದಿಂದ ಅಣಕು ಪ್ರದರ್ಶನ

ಮಂಗಳೂರು: ಭೂ ಕುಸಿತ ಸಂಭವಿಸಿದಾಗ ಮುಂಜಾಗ್ರತಾ ಹಿನ್ನೆಲೆಯಲ್ಲಿ ಯಾವ ರೀತಿ ಕಾರ್ಯಾಚರಣೆ ಕೈಗೊಳ್ಳಬಹುದು ಎಂದು ನಗರದ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಅದ್ಯಪಾಡಿ ಎಂಬಲ್ಲಿ ಅಣಕು ಕಾರ್ಯಾಚರಣೆ ನಡೆಸಲಾಯಿತು‌.

ವಿವಿಧ ಇಲಾಖೆಗಳ ತಂಡದಿಂದ ಅಣಕು ಪ್ರದರ್ಶನ

ಎನ್​ಡಿಆರ್​ಎಫ್, ಜಿಲ್ಲಾಡಳಿತದ ಪ್ರಕೃತಿ ವಿಕೋಪ ಘಟಕ, ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಕೈಗೊಂಡ ಭೂಕುಸಿತ ನಿರ್ವಹಣಾ ಸಂಬಂಧಿ ಅಣಕು‌ ಕಾರ್ಯಾಚರಣೆ ಯಶಸ್ವಿಯಾಗಿ ನಡೆಯಿತು.

ದ.ಕ‌. ಮತ್ತು ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂಬ ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯಂತೆ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮಳೆ ಸಂದರ್ಭ ಭೂಕುಸಿತ ಸಂಭವಿಸಿದಾಗ ಯಾವ ರೀತಿ ಕಾರ್ಯಾಚರಣೆ ಕೈಗೊಳ್ಳಬಹುದು ಎಂದು ಮಾಹಿತಿ ಪಡೆಯಲು ಜೂ.17ರಂದು ಎಲ್ಲ ವಿಭಾಗಗಳ ಅಧಿಕಾರಿಗಳ ಸಭೆ ಕರೆದಿದ್ದರು. ಈ ಹಿನ್ನೆಲೆಯಲ್ಲಿ ಭೂಕುಸಿತವಾದಾಗ ಯಾವ ರೀತಿ ಕಾರ್ಯಾಚರಣೆ ಕೈಗೊಳ್ಳಬಹುದು ಎಂಬ ಅಣಕು ಪ್ರದರ್ಶನ ನಡೆಯಿತು.

ಇದೇ ವೇಳೆ, ಮಾತನಾಡಿದ ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಭೂಕುಸಿತವಾದಾಗ ಮುಂಜಾಗ್ರತಾ ಕ್ರಮವಾಗಿ ಯಾವ ರೀತಿ ಕಾರ್ಯಾಚರಣೆ ನಡೆಸಬಹುದು ಎಂಬ ಅಣಕು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಆಂಧ್ರಪ್ರದೇಶದ ಗುಂಟೂರಿನ ಎನ್​ಡಿಆರ್​ಎಫ್ ತಂಡದೊಂದಿಗೆ ನಮ್ಮ ತಂಡ ಕೈಜೋಡಿಸಿ ಕೆಲಸ ಮಾಡಿದ್ದು, ಇದರಿಂದ ನಮಗೆ ಸಾಕಷ್ಟು ಅನುಭವವಾಯಿತು. ಕಳೆದ ಒಂದುವರೆ ವರ್ಷಗಳಿಂದ ವಿಪತ್ತು ನಿರ್ವಹಣೆಯಲ್ಲಿ ಸಾಕಷ್ಟು ಕೆಲಸ ನಿರ್ವಹಿಸಿದ್ದೇವೆ. ಈ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಸಂದರ್ಭ ಕಾರ್ಯಾಚರಣೆ ಮಾಡುವ ನಮ್ಮ ಎಲ್ಲಾ ಇಲಾಖೆಗಳಿಗೂ ಬೇಕಾದ ಸೌಲಭ್ಯ ಹಾಗೂ ಪ್ರೋತ್ಸಾಹ ನೀಡಿದ್ದೇವೆ ಎಂದು ಹೇಳಿದರು.

ಅಲ್ಲದೆ ನಮ್ಮ ತಂಡಗಳು ಕಳೆದ ಬಾರಿಯ ಕೊಡಗಿನಲ್ಲಿ ನಡೆದ ಭೂಕುಸಿತ ಹಾಗೂ ದ.ಕ.ದಲ್ಲಿ ನಡೆದ ನೆರೆ ಅವಾಂತರದ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದೆ. ಆದ್ದರಿಂದ ಮುಂದಿನ ಮಳೆಗಾಲದಲ್ಲಿ ನಾವು ಇಂತಹ ವಿಪತ್ತುಗಳನ್ನ ಯಶಸ್ವಿಯಾಗಿ ಎದುರಿಸಬಲ್ಲೆವು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Intro:ಮಂಗಳೂರು: ಭೂಕುಸಿತ ಸಂಭವಿಸಿದಾಗ ಮುಂಜಾಗ್ರತಾ ಹಿನ್ನೆಲೆಯಲ್ಲಿ ಯಾವ ರೀತಿ ಕಾರ್ಯಾಚರಣೆ ಕೈಗೊಳ್ಳಬಹುದು ಎಂಬ ಅಣಕು ಕಾರ್ಯಾಚರಣೆ ಇಂದು ನಗರದ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಅದ್ಯಪಾಡಿ ಎಂಬಲ್ಲಿ ನಡೆಯಿತು‌.

ಎನ್ ಡಿಆರ್ ಎಫ್, ಜಿಲ್ಲಾಡಳಿತದ ಪ್ರಕೃತಿ ವಿಕೋಪ ಘಟಕ, ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಆರೋಗ್ಯ ಇಲಾಖೆ ಜಂಟಿ ಕೈಗೊಂಡ ಭೂಕುಸಿತ ನಿರ್ವಹಣಾ ಸಂಬಂಧಿ ಅಣಕು‌ ಕಾರ್ಯಾಚರಣೆ ಯಶಸ್ವಿಯಾಗಿ ನಡೆಯಿತು.

ದ.ಕ‌. ಮತ್ತು ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂಬ ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯಂತೆ ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಅತಿಯಾದ ಮಳೆಯ ಸಂದರ್ಭ ಭೂಕುಸಿತ ಸಂಭವಿಸಿದಾಗ ಯಾವ ರೀತಿ ಕಾರ್ಯಾಚರಣೆ ಕೈಗೊಳ್ಳಬಹುದು ಎಂದು ಜೂ.17ರಂದು ಎಲ್ಲಾ ವಿಭಾಗಗಳ ಅಧಿಕಾರಿಗಳ ಸಭೆ ಕರೆದಿದ್ದರು. ಈ ಹಿನ್ನೆಲೆಯಲ್ಲಿ ಭೂಕುಸಿತವಾದಾಗ ಯಾವ ರೀತಿ ಕಾರ್ಯಾಚರಣೆ ಕೈಗೊಳ್ಳಬಹುದು ಎಂಬ ಅಣಕು ಪ್ರದರ್ಶನ ನಡೆಯಿತು.

Body:ಈ ಅಣಕು ಕಾರ್ಯಾಚರಣೆಯ ಮೊದಲಿಗೆ ಗುಡ್ಡ ಕುಸಿತವಾದ ಪ್ರದೇಶದ ಮರಗಳನ್ನು ಕಡಿದು, ದಾರಿ ಮಾಡಲಾಯಿತು. ಬಳಿಕ ಕುಸಿತವಾದ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಕ್ಕೆ ಎನ್ ಡಿಆರ್ ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದರು. ಕೆಲವರನ್ನು ತಾವೇ ರಕ್ಷಿಸಿ ಎತ್ತಿಕೊಂಡು, ಸ್ಟ್ರೇಚರ್ ಮೂಲಕ ಎತ್ತಿಕೊಂಡು ಬಂದರು. ಇನ್ನೂ ಎತ್ತರದಲ್ಲಿರುವವರನ್ನು ರೋಪ್ ಗಳ ಸಹಾಯದಿಂದ ಕಟ್ಟಿ ಸುರಕ್ಷಿತವಾಗಿ ಗುಡ್ಡದಿಂದ ಇಳಿಸಲಾಯಿತು. ಈ ಭೂಕುಸಿತ ದಲ್ಲಿ ಸುಮಾರು 12 ಮಂದಿಯನ್ನು ರಕ್ಷಿಸಲಾಯಿತು.

ಬಳಿಕ ಗಾಯಗೊಂಡವರಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿದರು. ಅಲ್ಲದೆ ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ಒಟ್ಟಿನಲ್ಲಿ ಜಿಲ್ಲಾಡಳಿತ ದಿಂದ ಕೈಗೊಂಡ ಅಣಕು ಕಾರ್ಯಾಚರಣೆ ಯಶಸ್ವಿಯಾಗಿ ನಡೆಯಿತು.

ಈ ಸಂದರ್ಭ ಮಂಗಳೂರು ಸಹಾಯಕ ಆಯುಕ್ತ ರವೀಂದ್ರ ನಾಯಕ್, ಮಂಗಳೂರು ತಹಶಿಲ್ದಾರ್ ಗುರುಪ್ರಸಾದ್, ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ವಿಜಯ್ ಕುಮಾರ್, ಅಗ್ನಿಶಾಮಕ ದಳದ ಅಧಿಕಾರಿ ಟಿ.ಎನ್.ಶಿವಶಂಕರ್, ದ.ಕ.ಜಿಲ್ಲಾ ಆರೋಗ್ಯ ಅಧಿಕಾರಿ ಡಾ‌.ರಾಮಕೃಷ್ಣ ರಾವ್, ರೆಡ್ ಕ್ರಾಸ್ ನ ಗೌರವಾಧ್ಯಕ್ಷ ಪ್ರಭಾಕರ ಶರ್ಮ, ಇತರ ಅಧಿಕಾರಿಗಳು ಹಾಗೂ ಅದ್ಯಪಾಡಿ ಸರಕಾರಿ ಶಾಲೆಯ ಮಕ್ಕಳು ಉಪಸ್ಥಿತರಿದ್ದರು.

Conclusion:ಈ ಸಂದರ್ಭ ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ, ಭೂಕುಸಿತವಾದಾಗ ಮುಂಜಾಗ್ರತಾ ಕ್ರಮವಾಗಿ ಯಾವ ರೀತಿಯಲ್ಲಿ ಕಾರ್ಯಾಚರಣೆ ನಡೆಸಬಹುದು ಎಂಬ ಅಣಕು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಆಂಧ್ರಪ್ರದೇಶದ ಗುಂಟೂರಿನ ಎನ್ ಡಿಆರ್ ಎಫ್ ತಂಡದೊಂದಿಗೆ ನಮ್ಮ ತಂಡ ಕೈಜೋಡಿಸಿ ಕೆಲಸ ಮಾಡಿದ್ದು, ಇದರಿಂದ ನಮಗೆ ಸಾಕಷ್ಟು ಅನುಭವವಾಯಿತು. ಕಳೆದ ಒಂದೂವರೆ ವರ್ಷಗಳಿಂದ ವಿಪತ್ತು ನಿರ್ವಹಣೆಯಲ್ಲಿ ಸಾಕಷ್ಟು ಕೆಲಸ ನಿರ್ವಹಿಸಿದ್ದೇವೆ. ಈ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಸಂದರ್ಭ ಕಾರ್ಯಾಚರಣೆ ಮಾಡುವ ನಮ್ಮ ಎಲ್ಲಾ ಇಲಾಖೆಗಳಿಗೂ ಬೇಕಾದ ಸೌಲಭ್ಯ ಹಾಗೂ ಪ್ರೋತ್ಸಾಹ ನೀಡಿದ್ದೇವೆ ಎಂದು ಹೇಳಿದರು.

ಅಲ್ಲದೆ ನಮ್ಮ ಈ ತಂಡಗಳು ಕಳೆದ ಬಾರಿಯ ಕೊಡಗಿನಲ್ಲಿ ನಡೆದ ಭೂಕುಸಿತ ಹಾಗೂ ದ.ಕ.ದಲ್ಲಿ ನಡೆದ ನೆರೆ ಅವಾಂತರದ ಸಂದರ್ಭ ಅತೀ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದೆ. ಆದ್ದರಿಂದ ಮುಂದಿನ ಮಳೆಗಾಲದಲ್ಲಿ ಯೂ ನಾವು ಇಂತಹ ವಿಪತ್ತು ಗಳನ್ನು ಯಶಸ್ವಿಯಾಗಿ ಎದುರಿಸಬಲ್ಲೆವು. ವಿಪತ್ತು ನಡೆದ ಸಂದರ್ಭ ನಾಗರಿಕರು ನೂರಾರು ಮಂದಿ ಬಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿಗೆ ತೊಂದರೆ ಕೊಡಬಾರದು. ಅಲ್ಲದೆ ಮಾಧ್ಯಮ ಮಿತ್ರರೂ ಪಾರದರ್ಶಕವಾಗಿ ಸುದ್ದಿಯನ್ನು ಪ್ರಸಾರ ಮಾಡಬೇಕೆಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಕೇಳಿಕೊಂಡರು.

Reporter_Vishwanath Panjimogaru

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.