ETV Bharat / state

ಮಹಾತ್ಮನ ಸ್ಮರಣೆಯ ಜೊತೆಗೆ ಅವರ ವಿಚಾರದೆಡೆಗೆ ಎಲ್ಲರೂ ಸಾಗಬೇಕು: ಶಾಸಕ ಸಂಜೀವ ಮಠಂದೂರು

ಗಾಂಧೀಜಿ ಅವರ ಆದರ್ಶಗಳು ಇಂದಿಗೂ ದೇಶಕ್ಕೆ ಅಗತ್ಯವಿದೆ. ಸಮಾಜಕ್ಕಾಗಿ, ದೇಶಕ್ಕಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟು ಬಲಿದಾನಗೊಂಡ ಗಾಂಧೀಜಿಯವರಂತಹ ಹುತಾತ್ಮರು ಮಹಾತ್ಮರಾಗಿ ನಮಗೆ ದಾರಿದೀಪವಾಗುತ್ತಾರೆ. ದುಷ್ಚಟ ಮುಕ್ತ ಸಜ್ಜನ ಸಮಾಜ ಗಾಂಧೀಜಿ ಕನಸಾಗಿತ್ತು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

Mahatma Gandhiji day celebration in Putturu
ಹುತಾತ್ಮರ ದಿನಾಚರಣೆ
author img

By

Published : Jan 30, 2022, 9:26 PM IST

ಪುತ್ತೂರು: ಗಾಂಧೀಜಿ ಅವರ ವಿಚಾರಗಳು ಜಗತ್ತಿಗೆ ಮಾದರಿಯಾಗಿದ್ದು, ಎಲ್ಲರ ಸ್ಮರಣೆಯ ಕೇಂದ್ರವಾಗಿರುವ ಮಹಾತ್ಮ ಗಾಂಧೀಜಿ ಅವರ ಸ್ಮರಣೆಯ ಜೊತೆಗೆ ಗಾಂಧೀಜಿ ವಿಚಾರದೆಡೆಗೆ ಎಲ್ಲರೂ ಸಾಗಬೇಕು. ಗಾಂಧಿ ಪ್ರೇರಿತ ಸಮಾಜ ಮತ್ತೊಮ್ಮೆ ಸೃಷ್ಟಿಯಾಗಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಪುತ್ತೂರಿನ ಗಾಂಧಿಕಟ್ಟೆಯಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಗಾಂಧಿಕಟ್ಟೆ ಸಮಿತಿ ಹಾಗೂ ಗಾಂಧಿ ವಿಚಾರ ವೇದಿಕೆಯ ಸಹಯೋಗದಲ್ಲಿ ನಡೆದ ಹುತಾತ್ಮರ ದಿನಾಚರಣೆ ಹಾಗೂ ಗಾಂಧೀಜಿ ಪಾದಸ್ಪರ್ಶ ಮಾಡಿದ ರಾಗಿದಕುಮೇರು ಕಾಲೋನಿಗೆ ಪಾದಯಾತ್ರೆ ಕಾರ್ಯಕ್ರಮದಲ್ಲಿ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮಾತನಾಡಿದರು.

ಗಾಂಧೀಜಿ ಅವರ ಆದರ್ಶಗಳು ಇಂದಿಗೂ ದೇಶಕ್ಕೆ ಅಗತ್ಯವಿದೆ. ಸಮಾಜಕ್ಕಾಗಿ, ದೇಶಕ್ಕಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟು ಬಲಿದಾನಗೊಂಡ ಗಾಂಧೀಜಿಯವರಂತಹ ಹುತಾತ್ಮರು ಮಹಾತ್ಮರಾಗಿ ನಮಗೆ ದಾರಿದೀಪವಾಗುತ್ತಾರೆ. ದುಷ್ಚಟಮುಕ್ತ ಸಜ್ಜನ ಸಮಾಜ ಗಾಂಧೀಜಿ ಕನಸಾಗಿತ್ತು. ರಾಮರಾಜ್ಯದ ಕಲ್ಪನೆ ಅವರದಾಗಿತ್ತು. ಮೌಲ್ಯಾಧಾರಿತ ರಾಜಕಾರಣ ಅವರ ಪ್ರತಿಪಾದನೆಯಾಗಿತ್ತು. ಸ್ವಾಭಿಮಾನಿ ಸಮಾಜ ಅವರ ವಿಚಾರಧಾರೆಯಾಗಿತ್ತು. ಅದೆಲ್ಲವನ್ನೂ ಬದುಕಿನಲ್ಲಿ ಅಳವಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ತತ್ವ ಮತ್ತು ಆದರ್ಶಗಳನ್ನು ಅವಲೋಕನ ಮಾಡುವ ಜೊತೆಗೆ ರಾಷ್ಟ್ರೋತ್ಥಾನಕ್ಕೆ ಎಲ್ಲರೂ ಸಿದ್ಧರಾಗಬೇಕು. ಗಾಂಧೀಜಿ ನಮ್ಮನ್ನು ಬಿಟ್ಟು ಹೋಗಿದ್ದರೂ ಅವರ ಅವರ ತತ್ವಗಳು ಭಾರತೀಯ ತತ್ವಗಳಾಗಿ ನಮ್ಮ ಮುಂದಿವೆ. ಅವರು ತೋರಿದ ಸತ್ಯ, ಅಹಿಂಸೆಯ ದಾರಿಗಳು ಎಂದೂ ಪ್ರಸ್ತುತವಾಗಿದೆ ಎಂದು ಹೇಳಿದರು.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಈ ಸಂದರ್ಭದಲ್ಲಿ ಶಿಕ್ಷಕಿ ಸುನಿತಾ ಅವರ ನೇತೃತ್ವದಲ್ಲಿ ಶ್ರೀರಾಮಕೃಷ್ಣ ಪ್ರೌಢಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಸರ್ವಧರ್ಮ ಪ್ರಾರ್ಥನೆ ಹಾಗೂ ಭಜನೆ ನಡೆಯಿತು. ಅಗ್ನಿಶಾಮಕ ದಳದಿಂದ ಸೈರನ್ ಮೊಳಗಿಸಲಾಯಿತು.

ಸಭಾ ಕಾರ್ಯಕ್ರಮದ ಬಳಿಕ 1934 ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪುತ್ತೂರಿನಲ್ಲಿ ನಡೆದಾಡಿದ ಹಾದಿಯಲ್ಲಿ ಪಾದಯಾತ್ರೆಯನ್ನು ಕೈಗೊಳ್ಳಲಾಯಿತು. ಪುತ್ತೂರಿನ ಇಂದಿನ ಗಾಂಧೀಕಟ್ಟೆಯಲ್ಲಿ ಮಹಾತ್ಮ ಗಾಂಧೀಜಿ ಮರದ ಬುಡದಲ್ಲಿ ವಿಶ್ರಮಿಸಿ ಬಳಿಕ ಅಲ್ಲಿಂದ ರಾಗಿದಕುಮೇರಿ ದಲಿತ ಕಾಲೊನಿಗೆ ಹೋಗಿದ್ದರು. ಈ ದಾರಿಯಲ್ಲಿ ಸುಮಾರು 3 ಕಿ.ಮೀ ದೂರ ಗಾಂಧಿ ನಡಿಗೆ ಮಾಡಲಾಯಿತು.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಶೀಲ್ದಾರ್ ಟಿ. ರಮೇಶ್ ಬಾಬು, ಪುತ್ತೂರು ಡಿವೈಎಸ್‌ಪಿ ಗಾನ ಪಿ ಕುಮಾರ್, ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷ ಪ್ರೊ. ಝೇವಿಯರ್ ಡಿಸೋಜ, ಗಾಂಧಿ ಕಟ್ಟೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ, ನಿವೃತ್ತ ಸೈನಿಕ ರಮೇಶ್ ಬಾಬು, ಗಾಂಧಿ ವಿಚಾರ ವೇದಿಕೆಯ ಕಾರ್ಯದರ್ಶಿ ಚಿನ್ಮಯ ಕೃಷ್ಣ, ಸದಸ್ಯ ಸುಲೈಮಾನ್ ಕಲ್ಲರ್ಪೆ, ಗಾಂಧಿ ಕಟ್ಟೆ ಸಮಿತಿಯ ಸೈಯದ್ ಕಮಾಲ್ ಮತ್ತಿತರರು ಉಪಸ್ಥಿತರಿದ್ದರು.

ಓದಿ: 15 ಸಚಿವರನ್ನ ಕ್ಯಾಬಿನೆಟ್​ನಿಂದ ಕೈಬಿಡಬೇಕು.. ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು ನೀಡಲು ಮುಂದಾದ ರೇಣುಕಾಚಾರ್ಯ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.