ETV Bharat / state

ಪುತ್ತೂರಿನಲ್ಲಿ ಪರಿಣಾಮಕಾರಿ ಲಾಕ್‌ಡೌನ್ ಅನುಷ್ಠಾನವಾಗಬೇಕು : ಶಾಸಕ ಸಂಜೀವ ಮಠಂದೂರು

ಒಂದು ವಾರದ ಲಾಕ್‌ಡೌನ್‌ನಲ್ಲಿ ಒಂದೇ ಒಂದು ಕೊರೊನಾ ಪ್ರಕರಣ ಕಂಡು ಬರದಂತೆ ನೋಡಿಕೊಳ್ಳಬೇಕು. ಆದ್ದರಿಂದ ಅದಕ್ಕೆ ಏನು ಮಾಡಬೇಕೋ ಅದನ್ನು ಮಾಡಿ..

MLA Sanjeeva Matandur statement
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಲಾಕ್‌ಡೌನ್ ಅನುಷ್ಠಾನವಾಗಬೇಕು: ಶಾಸಕ ಸಂಜೀವ ಮಠಂದೂರು
author img

By

Published : Jul 15, 2020, 4:33 PM IST

ಪುತ್ತೂರು (ದಕ್ಷಿಣಕನ್ನಡ): ಜಿಲ್ಲಾದ್ಯಂತ ಒಂದು ವಾರದ ಕಾಲ ಲಾಕ್‌ಡೌನ್ ಜಾರಿಗೊಂಡಿರುವ ಹಿನ್ನೆಲೆ, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಲಾಕ್‌ಡೌನ್ ಅನುಷ್ಠಾನ ಆಗಬೇಕೆಂದು ಶಾಸಕ ಸಂಜೀವ ಮಠಂದೂರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪುತ್ತೂರಿನಲ್ಲಿ ಪರಿಣಾಮಕಾರಿ ಲಾಕ್‌ಡೌನ್ ಅನುಷ್ಠಾನ : ಶಾಸಕ ಸಂಜೀವ ಮಠಂದೂರು

ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಸಿದ ಅವರು, ಲಾಕ್‌ಡೌನ್ ಸಮಯದಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಈ ಹಿಂದಿನ ಲಾಕ್‌ಡೌನ್ ಸಡಿಲಗೊಂಡ ಬಳಿಕ ಅಧಿಕಾರಿಗಳು ತಮ್ಮ ಕರ್ತವ್ಯವನ್ನ ಮೊಟಕುಗೊಳಿಸಿದ್ದರು. ಹಾಗಾಗಿ ಕೊರೊನಾ ಪ್ರಕರಣ ಹೆಚ್ಚುತ್ತಿವೆ. ದ.ಕ.ಜಿಲ್ಲೆಯಲ್ಲಿ ಮತ್ತೆ ಒಂದು ವಾರದ ಕಾಲ ಲಾಕ್​ಡೌನ್​ ಘೋಷಿಸಲಾಗಿದೆ. ಈ ಒಂದು ವಾರದಲ್ಲಿ ಅನುಷ್ಠಾನಾಧಿಕಾರಿಗಳು, ಗ್ರಾಮಸಭೆಯಿಂದ ಹಿಡಿದು ನಗರಸಭೆಯವರೆಗೂ ನಾವೇನು ಮಾಡಬೇಕು ಎಂಬುದನ್ನು ಚಿಂತಿಸಿ. ಮುಂದಿನ ಒಂದು ವಾರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದರು.

ನಿನ್ನೆ (ಮಂಗಳವಾರ) ಉಪ್ಪಿನಂಗಡಿಯಲ್ಲಿ ಕೊರೊನಾ ದೃಢಪಟ್ಟ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದ ಚಾಲಕ ರಸ್ತೆಯಲ್ಲಿ ಓಡಾಡುತ್ತಿದ್ದರೆಂಬ ಆರೋಪ ಕೇಳಿ ಬಂದಿದೆ. ಈ ರೀತಿ ಆಗಬಾರದು. ಹೀಗೆ ಮಾಡಿದ್ರೆ ಸೋಂಕು ಹರಡುವುದಕ್ಕೆ ನಾವೇ ದಾರಿ ಮಾಡಿದಂತಾಗುತ್ತದೆ. ಒಂದು ವಾರದ ಲಾಕ್‌ಡೌನ್‌ನಲ್ಲಿ ಒಂದೇ ಒಂದು ಕೊರೊನಾ ಪ್ರಕರಣ ಕಂಡು ಬರದಂತೆ ನೋಡಿಕೊಳ್ಳಬೇಕು. ಆದ್ದರಿಂದ ಅದಕ್ಕೆ ಏನು ಮಾಡಬೇಕೋ ಅದನ್ನು ಮಾಡಿ. ಕಂಟೇನ್ಮೆಂಟ್​ ಝೋನ್, ಸೀಲ್‌ಡೌನ್ ಪ್ರದೇಶ, ಹೋಂ ಕ್ವಾರಂಟೈನ್‌ನಲ್ಲಿರುವವರ ಕಡೆ ಹೆಚ್ಚು ಗಮನ ಕೊಡಬೇಕು ಎಂದರು.

ಗ್ರಾಪಂ ಕಾರ್ಯಪಡೆ ಸಭೆ ನಡೆಸಿ : ಸಾರ್ವಜನಿಕರ ಕಳಕಳಿಯ ದೃಷ್ಟಿಯಿಂದ ಒಬ್ಬ ಅಧಿಕಾರಿ ಹೇಳಿ ಮಾಡುವುದಕ್ಕಿಂತ ಹೇಳದೆ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಿ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ನಿಮ್ಮ ವ್ಯಾಪ್ತಿಯ ವರದಿಯನ್ನು ಮೇಲಾಧಿಕಾರಿಗಳಿಗೆ ಕೊಡಿ. ತಮ್ಮ ಪಂಚಾಯತ್‌ನಲ್ಲಿ ಕಾರ್ಯಪಡೆ ಸಭೆ ನಡೆಸಿ, ಕೋವಿಡ್ ನಿಯಂತ್ರಣಕ್ಕೆ ಏನೇನು ಮಾಡಬೇಕು ಅದನ್ನು ಚರ್ಚಿಸಿ ಎಂದರು.

ಸರ್ಕಾರಿ ಕಾಮಗಾರಿಗೆ ಅನುಮತಿ: ಸರ್ಕಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಕಡಿಮೆ ಸಂಖ್ಯೆಯ ಕಾರ್ಮಿಕರನ್ನು ಬಳಸಿ ಕೆಲಸ ಮಾಡಲು ಅವಕಾಶವಿದೆ. ಮದುವೆ, ಉತ್ತರಕ್ರಿಯೆ ಕಾರ್ಯಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಜನ ಹೋಗುವುದಕ್ಕೆ ಅವಕಾಶ ಮಾಡಿ ಕೊಡಬೇಡಿ ಎಂದು ಪೊಲೀಸ್ ಇಲಾಖೆಗೆ ಸೂಚಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.