ETV Bharat / state

ಮಾರುಕಟ್ಟೆ ಸ್ಥಳಾಂತರಕ್ಕೆ ವ್ಯಾಪಾರಿಗಳ ವಿರೋಧ.. ಶಾಸಕ ಖಾದರ್‌ಗೆ ಮನವಿ - ಮಂಗಳೂರಿನ ಸೆಂಟ್ರಲ್​ ಮಾರುಕಟ್ಟೆ ಸ್ಥಳಾಂತರ

ಸೆಂಟ್ರಲ್ ಮಾರುಕಟ್ಟೆಯನ್ನು ಸಂಪೂರ್ಣ ಬಂದ್ ಮಾಡಿದ ಜಿಲ್ಲಾಡಳಿತ, ತರಕಾರಿ ಹಾಗೂ ಹಣ್ಣಿನ ಮಾರುಕಟ್ಟೆಯನ್ನು ಕೆಲ ದಿನಗಳ ಹಿಂದೆಯಷ್ಟೇ ಬೈಕಂಪಾಡಿ ಎಪಿಎಂಸಿಗೆ ಏಕಾಏಕಿ ಸ್ಥಳಾಂತರ ಮಾಡಲಾಗಿತ್ತು. ಆದರೆ, ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವ್ಯಾಪಾರಿಗಳು, ಶಾಸಕ ಖಾದರ್ ಅವರಲ್ಲಿ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದರು.

ಶಾಸಕ ಯು.ಟಿ.ಖಾದರ್ ಎಪಿಎಂಸಿಗೆ ಭೇಟಿ
author img

By

Published : Apr 9, 2020, 7:18 PM IST

ಮಂಗಳೂರು: ನಗರದ ಸೆಂಟ್ರಲ್ ಮಾರುಕಟ್ಟೆಯು ಎಪಿಎಂಸಿಗೆ ಸ್ಥಳಾಂತರಗೊಂಡ ಹಿನ್ನೆಲೆ ಇಂದು ಶಾಸಕ ಯು ಟಿ ಖಾದರ್ ಎಪಿಎಂಸಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

mla Khadar visit apmc market in mangalore
ಶಾಸಕ ಯು ಟಿ ಖಾದರ್ ಎಪಿಎಂಸಿಗೆ ಭೇಟಿ..

ಈ ವೇಳೆ ವ್ಯಾಪಾರಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಶಾಸಕರ ಸುತ್ತಲೂ ಯಾವುದೇ ಅಂತರ ಕಾಯದೇ ಸುತ್ತುವರೆದ ಘಟನೆ ನಡೆಯಿತು. ಸೆಂಟ್ರಲ್ ಮಾರುಕಟ್ಟೆಯನ್ನು ಸಂಪೂರ್ಣ ಬಂದ್ ಮಾಡಿದ ಜಿಲ್ಲಾಡಳಿತ, ತರಕಾರಿ ಹಾಗೂ ಹಣ್ಣಿನ ಮಾರುಕಟ್ಟೆಯನ್ನು ಕೆಲ ದಿನಗಳ ಹಿಂದೆಯಷ್ಟೇ ಬೈಕಂಪಾಡಿ ಎಪಿಎಂಸಿಗೆ ಏಕಾಏಕಿ ಸ್ಥಳಾಂತರ ಮಾಡಲಾಗಿತ್ತು. ಆದರೆ, ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವ್ಯಾಪಾರಿಗಳು, ಶಾಸಕ ಖಾದರ್ ಅವರಲ್ಲಿ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದರು.

ಪುನಾ ಸೆಂಟ್ರಲ್ ಮಾರುಕಟ್ಟೆ ತೆರೆಯುವಂತೆ ವ್ಯಾಪಾರಿಗಳು ಶಾಸಕ ಖಾದರ್​ಗೆ ಒತ್ತಾಯ ಪಡಿಸಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕೂಡಾ ಈ ವೇಳೆ ಸ್ಥಳದಲ್ಲಿದ್ದರು. ಜನಪ್ರತಿನಿಧಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿಯಮ ಉಲ್ಲಂಘಿಸಿದ್ದರಿಂದ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.