ETV Bharat / state

ವೆನ್ಲಾಕ್​ ಆಸ್ಪತ್ರೆಗೆ 100 ವೆಂಟಿಲೇಟರ್ ವ್ಯವಸ್ಥೆ ಮಾಡಲು ಮಿಥುನ್ ರೈ ಮನವಿ

author img

By

Published : May 3, 2021, 4:05 PM IST

Updated : May 3, 2021, 8:19 PM IST

ವೆನ್ಲಾಕ್ ಆಸ್ಪತ್ರೆಯಲ್ಲಿ ವೆಂಟಿಲೇಟರ್​ಗಳ ಕೊರೆತ ಇದ್ದು, ತಕ್ಷಣವೇ ಆಸ್ಪತ್ರೆಗೆ 100 ವೆಂಟಿಲೇಟರ್ ವ್ಯವಸ್ಥೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಮಿಥುನ್ ರೈ ಮನವಿ ಮಾಡಿಕೊಂಡಿದ್ದಾರೆ.

mithun
mithun

ಮಂಗಳೂರು: ನಗರದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್​ಗಳು ಭರ್ತಿಯಾಗಿವೆ‌. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿಯೂ ವೆಂಟಿಲೇಟರ್​ಗಳ ಕೊರತೆಯಿದೆ. ಆದ್ದರಿಂದ ತಕ್ಷಣ ವೆನ್ಲಾಕ್ ಆಸ್ಪತ್ರೆಗೆ 100 ವೆಂಟಿಲೇಟರ್ ವ್ಯವಸ್ಥೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಮಿಥುನ್ ರೈಯವರು ದ.ಕ. ಜಿಲ್ಲಾಧಿಕಾರಿ, ಸಂಸದರು, ಉಸ್ತುವಾರಿ ಸಚಿವರು ಹಾಗೂ ಶಾಸಕರುಗಳಲ್ಲಿ ವಿನಂತಿ ಮಾಡಿದರು.

ವೆಂಟಿಲೇಟರ್ ವ್ಯವಸ್ಥೆ ಮಾಡಲು ಮಿಥುನ್ ರೈ ಮನವಿ

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾಲೆ, ಕಾಲೇಜು, ಹಾಸ್ಟೆಲ್​ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆದು ಆಕ್ಸಿಜನ್ ಬೆಡ್​ಗಳ ವ್ಯವಸ್ಥೆ ಮಾಡಲು ಆಗ್ರಹಿಸಿದರು.

ಕೇರಳದ ಕಾಸರಗೋಡು, ಉಡುಪಿ, ಚಿಕ್ಕಮಗಳೂರು, ಕಾರವಾರ, ಶಿರಸಿ, ಮಡಿಕೇರಿ, ಸಕಲೇಶಪುರ, ಕಾರ್ಕಳ ಮತ್ತಿತರ ಜಿಲ್ಲೆಯ ಜನತೆಯೂ ಮಂಗಳೂರಿನ ಆಸ್ಪತ್ರೆಗಳನ್ನೇ ನಂಬಿದ್ದಾರೆ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಕೇವಲ 50 ವೆಂಟಿಲೇಟರ್ ಇರುವ ಬೆಡ್​ಗಳನ್ನು ಕೋವಿಡ್ ಸೋಂಕಿತರಿಗಾಗಿ ಮೀಸಲಿಡಲಾಗಿದೆ. ಈಗಾಗಲೇ 20 ಬೆಡ್​ಗಳಲ್ಲಿ ಸ್ಯಾಚುರೇಷನ್ ಲೆವೆಲ್ ಕಡಿಮೆಯಿರುವ ಸೋಂಕಿತರಿದ್ದಾರೆ. ಮಿಕ್ಕಿದ 30 ಬೆಡ್​ಗಳಲ್ಲಿ ಶಂಕಿತ ಸೋಂಕಿತರಿಗೆ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ‌ ಬೆಂಗಳೂರಿನ ಸೋಂಕಿತರ ಅವಸ್ಥೆ ಮಂಗಳೂರಿನಲ್ಲಿ ಆಗದಂತೆ ನೋಡಿಕೊಳ್ಳಬೇಕಾಗಿದೆ‌‌ ಎಂದ್ರು. ಇದೇ ವೇಳೆ ಜನತೆ ಸಾಮಾಜಿಕ ಜವಾಬ್ದಾರಿ ಅರಿತು ಅನಗತ್ಯ, ಅನವಶ್ಯಕವಾಗಿ ತಿರುಗಾಟ ನಡೆಸಬಾರದೆಂದು ಮಿಥುನ್ ರೈ ವಿನಂತಿಸಿಕೊಂಡರು.

Last Updated : May 3, 2021, 8:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.