ETV Bharat / state

Rape Case: SSLC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಮಗುವಿನ ಜನನಕ್ಕೆ ಕಾರಣನಾದ ಆರೋಪಿ ಬಂಧನ

ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ, ಮಗುವಿನ ಜನನಕ್ಕೆ ಕಾರಣನಾದ ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ(Rape accused arrested under POCSO Act) ಬಂಧಿಸಲಾಗಿದೆ.

minor-girl-rape-case-accused-arrested-by-uppinangadi-police
SSLC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ
author img

By

Published : Nov 20, 2021, 7:40 AM IST

ಮಂಗಳೂರು: ಅಪ್ರಾಪ್ತೆ ಮೇಲೆ ಅತ್ಯಾಚಾರ (Rape on minor in mangaluru) ನಡೆಸಿ ಮಗುವಿನ ಜನನಕ್ಕೆ ಕಾರಣನಾದ ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ(POCSO Act) ಪ್ರಕರಣ ದಾಖಲಿಸಿ ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಉಪ್ಪಿನಂಗಡಿಯ (Rape in Uppinangadi) ಹಿರೆಬಂಡಾಡಿ ಗ್ರಾಮದ ಮದ್ಮಿತ್ತಿಮಾರು ನಿವಾಸಿ ಕೇಶವ (34) ಅತ್ಯಾಚಾರಗೈದ ಆರೋಪಿ. ಎಸ್ಎಸ್ಎಲ್​​ಸಿ ವಿದ್ಯಾರ್ಥಿನಿಯ ಹೊಟ್ಟೆಯಲ್ಲಿ ಗೆಡ್ಡೆ ಬೆಳೆದಿದೆ ಎಂದು ಪೋಷಕರು ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ವೈದ್ಯರು ತಪಾಸಣೆ ನಡೆಸಿದಾಗ ಆಕೆ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ.

ಇದೀಗ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆಸ್ಪತ್ರೆಯ ವೈದ್ಯಾಧಿಕಾರಿಗಳು ಈ ವಿಚಾರವನ್ನು ಉಪ್ಪಿನಂಗಡಿ ಪೊಲೀಸರ (Uppinangadi police) ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ಉಪ್ಪಿನಂಗಡಿಯ ಹಿರೆಬಂಡಾಡಿ ಗ್ರಾಮದ ಮದ್ಮಿತ್ತಿಮಾರು ನಿವಾಸಿ ಕೇಶವ ಅತ್ಯಾಚಾರ ಮಾಡಿರುವುದಾಗಿ ಬಾಲಕಿ ಹೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಬಂಧಿಸಿದ್ದಾರೆ.

ಇದನ್ನೂ ಓದಿ: ಪಾಕ್​​ ಶಾಸಕಿಯ ಅಶ್ಲೀಲ ವಿಡಿಯೋ ವೈರಲ್: ಪೊಲೀಸ್​ ಠಾಣೆ ಮೆಟ್ಟಿಲೇರಿದ ಸಾನಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.