ETV Bharat / state

ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಎದೆಹಾಲು ವಂಚಿತ ಮಕ್ಕಳಿಗಾಗಿ ಮಿಲ್ಕ್ ಬ್ಯಾಂಕ್ ಆರಂಭ - ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಿಲ್ಕ್ ಬ್ಯಾಂಕ್ ಆರಂಭ

ಮಂಗಳೂರಿನ ರೋಟರಿ ಕ್ಲಬ್ ಸಂಸ್ಥೆಯು ಲೇಡಿಗೋಷನ್ ಆಸ್ಪತ್ರೆಗೆ ಹ್ಯೂಮನ್ ಮಿಲ್ಕ್ ಬ್ಯಾಂಕ್ ಕೊಡುಗೆಯನ್ನು ನೀಡಿದೆ. ಸುಮಾರು 35 ಲಕ್ಷ ರೂ. ವೆಚ್ಚ ಮಾಡಿ ಹ್ಯೂಮನ್ ಮಿಲ್ಕ್ ಬ್ಯಾಂಕ್ ಸಿದ್ಧಪಡಿಸಲಾಗಿದೆ.

ಹ್ಯೂಮನ್ ಮಿಲ್ಕ್ ಬ್ಯಾಂಕ್ ಆರಂಭ
ಹ್ಯೂಮನ್ ಮಿಲ್ಕ್ ಬ್ಯಾಂಕ್ ಆರಂಭ
author img

By

Published : Mar 5, 2022, 4:12 PM IST

Updated : Mar 5, 2022, 4:32 PM IST

ಮಂಗಳೂರು : ಹುಟ್ಟಿದ ಮಗುವಿಗೆ ತಾಯಿಯ ಎದೆಹಾಲು ಅಮೃತಪಾನ ಎಂಬುದು ಜನಜನಿತವಾದ ಮಾತು. ಈ ಅಮೃತಪಾನವನ್ನು ಸರಿಯಾದ ಸಮಯದಲ್ಲಿ ಪಡೆಯಲು ನವಜಾತ ಶಿಶುಗಳು ವಂಚಿತರಾಗುತ್ತಿದ್ದಾರೆ. ಇಂಥಹ ಶಿಶುಗಳಿಗಾಗಿ ಇಲ್ಲಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್ ಆರಂಭಿಸಲಾಗಿದೆ.

ಎದೆಹಾಲು ವಂಚಿತ ಮಕ್ಕಳಿಗಾಗಿ ಮಿಲ್ಕ್ ಬ್ಯಾಂಕ್ ಆರಂಭ

ನಗರದ ಲೇಡಿಗೋಷನ್ ಆಸ್ಪತ್ರೆ ಕರಾವಳಿಯ ಪ್ರಸಿದ್ಧ ಸರ್ಕಾರಿ ಹೆರಿಗೆ ಆಸ್ಪತ್ರೆಯಾಗಿದೆ. ಈ ಆಸ್ಪತ್ರೆಗೆ ಸುಮಾರು ಏಳು ಜಿಲ್ಲೆಗಳಿಂದ ಹೆರಿಗೆಗಾಗಿ ಬರುತ್ತಾರೆ. ತಿಂಗಳಿಗೆ ಸರಾಸರಿ 700 ಹೆರಿಗೆಗಳು ಈ ಆಸ್ಪತ್ರೆಯಲ್ಲಿ ನಡೆಯುತ್ತವೆ. ಈ ಹೆರಿಗೆಗಳಲ್ಲಿ ಅವಧಿಪೂರ್ವ ಮಕ್ಕಳು ಜನಿಸಿ ಎನ್​ಐಸಿಯುವಿ ನಲ್ಲಿ ಇರಬೇಕಾದ ಪರಿಸ್ಥಿತಿ ಬರುತ್ತದೆ.

ಇಂತಹ ಮಕ್ಕಳಿಗೆ ಎದೆಹಾಲು ನೀಡಿದರೆ ಆ ಮಕ್ಕಳು ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ಇನ್ನೂ ಕೆಲವು ಮಕ್ಕಳು ಹುಟ್ಟುವಾಗಲೆ ತಾಯಿಯನ್ನು ಕಳೆದುಕೊಂಡಿರುವುದು ಶಿಶುಗಳಿಗೆ ಎದೆ ಹಾಲಿನ ಕೊರತೆ ಆಗುತ್ತದೆ. ಇದನ್ನು ತಪ್ಪಿಸಲು ಲೇಡಿಗೋಷನ್ ಆಸ್ಪತ್ರೆಯಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್ ಆರಂಭಿಸಲಾಗಿದೆ.

ಮಂಗಳೂರಿನ ರೋಟರಿ ಕ್ಲಬ್ ಸಂಸ್ಥೆಯು ಲೇಡಿಗೋಷನ್ ಆಸ್ಪತ್ರೆಗೆ ಹ್ಯೂಮನ್ ಮಿಲ್ಕ್ ಬ್ಯಾಂಕ್ ಕೊಡುಗೆಯನ್ನು ನೀಡಿದೆ. ಸುಮಾರು 35 ಲಕ್ಷ ರೂ. ವೆಚ್ಚ ಮಾಡಿ ಹ್ಯೂಮನ್ ಮಿಲ್ಕ್ ಬ್ಯಾಂಕ್ ಸಿದ್ಧಪಡಿಸಲಾಗಿದೆ.

ತಾಯಿಯ ಎದೆಹಾಲಿನಲ್ಲಿ ಪ್ರೊಟೀನ್, ಲವಣಾಂಶ, ಶರ್ಕರಪಿಷ್ಠ, ಫ್ಯಾಟ್ ಮೊದಲಾದ ಪ್ರತಿರೋಧಕ ಹೆಚ್ಚಿಸುವ ಜೀವಕಣಗಳಿದೆ. ಮೊದಲಿಗೆ ಈ ಉಪಕರಣವನ್ನು ಬಳಸಿ ಎದೆಹಾಲು ಡೊನೇಟ್ ಮಾಡುವ ತಾಯಿಯಿಂದ ಎದೆಹಾಲನ್ನು ಪಂಪ್ ಮಾಡಿ ಪ್ಯಾಶ್ಚುರೈಸೇಶನ್ ಪ್ರಕ್ರಿಯೆ ಬಳಿಕ ಅದನ್ನು ಶೀತಲಿಕರಣಗೊಳಿಸಿ ಸಂಗ್ರಹಿಸಲಾಗುತ್ತದೆ.

ಈ ಎದೆಹಾಲು ಆರು ತಿಂಗಳವರೆಗೆ ರಕ್ಷಿಸಿಡುವ ವ್ಯವಸ್ಥೆ ಇಲ್ಲಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ತಾಯಂದಿರು ಎದೆಹಾಲು ದಾನ ಮಾಡುವ ಬಗ್ಗೆ ಒಲವು ತೋರಬೇಕಾಗಿದೆ. ತಾಯಂದಿರು ದಾನ ಮಾಡುವ ಎದೆಹಾಲು ಮಕ್ಕಳ ಜೀವವುಳಿಸಲು ನೆರವಾಗಲಿದೆ. ಈ ಬಗ್ಗೆ ಜಾಗೃತಿಯನ್ನು ಆಸ್ಪತ್ರೆಯಿಂದ ಮೂಡಿಸಲಾಗುತ್ತಿದೆ.

Last Updated : Mar 5, 2022, 4:32 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.